ಕಾರ್ಯಕ್ರಮದಲ್ಲಿ ಕೊಡಗಿನ ಉಮ್ಮತ್ತಾಟ್, ಊರೋಟ್ಟಿಕೋಟ್, ಬಾಳೋಪಾಟ್, ಕಂಸಾಳೆ, ಡೊಳ್ಳು ಕುಣಿತ, ಜೇನುಕುರುಬ ನೃತ್ಯ, ಜಾನಪದ ಹಾಡುಗಳು, ಜಾನಪದ ನೃತ್ಯ, ಕೋಲಾಟ್, ಮುಂತಾದ ಕಲೆಗಳು ಪ್ರದರ್ಶಿಸಿ ಜನಮನ ರಂಜಿಸುವಲ್ಲಿ ಯಶಸ್ವಿಯಾಯಿತು. ಶಾಲೆಯ ಕನ್ನಡ ಭಾಷಾ ಪ್ರಾಧ್ಯಾಪಕರಾದ ಚಂದ್ರಶೇಖರ ಸ್ವಾಗತಿಸಿದರೆ, ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.