ಪನ್ನಂಗಾಲತಮ್ಮೆ ದೇವಾಲಯಕ್ಕೆ ಶಾಸಕ ಪೊನ್ನಣ್ಣ ಭೇಟಿ

 ಅರಮೇರಿ ಗ್ರಾಮದಲ್ಲಿರುವ ಶ್ರೀ ಪನ್ನಂಗಾಲತಮ್ಮೆ ದೇವಾಲಯಕ್ಕೆ ಶಾಸಕ ಎ.ಎಸ್. ಪೊನ್ನಣ್ಣ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಅರಮೇರಿ ಗ್ರಾಮದಲ್ಲಿರುವ ಶ್ರೀ ಪನ್ನಂಗಾಲತಮ್ಮೆ ದೇವಾಲಯಕ್ಕೆ ಶಾಸಕ ಎ.ಎಸ್. ಪೊನ್ನಣ್ಣ ಭೇಟಿ ನೀಡಿ ಪೂಜೆ ಸಲ್ಲಿಸಿದರು.
Published on
ಸಿದ್ದಾಪುರ: ತಾಲೂಕಿನ ಕದನೂರು ಹಾಗೂ ಅರಮೇರಿ ಗ್ರಾಮದಲ್ಲಿರುವ ಶ್ರೀ ಪನ್ನಂಗಾಲತಮ್ಮೆ ದೇವಾಲಯಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ ಸೋಮವಾರ ನೀಡಿ ಪೂಜೆ ಸಲ್ಲಿಸಿದರು.
ದೇವಾಲಯದಲ್ಲಿ ನಡೆಯುತ್ತಿರುವ ವಾರ್ಷಿಕ ಉತ್ಸವದ ಅಂಗವಾಗಿ ದೇವಿಯ ಸನ್ನಿಧಿಯಲ್ಲಿ ವಿಶೇಷ ಪೂಜಾ ವಿಧಿ-ವಿಧಾನಗಳು ಜರುಗುತ್ತಿದ್ದವು. ವಾಡಿಕೆಯಂತೆ ಈ ಬಾರಿಯೂ ಉತ್ಸವದಲ್ಲಿ ಭಾಗವಹಿಸಿದ ಶಾಸಕರು ದೇವರ ಆಶೀರ್ವಾದ ಪಡೆದು ಭಕ್ತರೊಂದಿಗೆ ಸಮಯ ಕಳೆದರು.
ಈ ಸಂದರ್ಭದಲ್ಲಿ ಪ್ರಶಾಂತ್, ವಲಯ ಅಧ್ಯಕ್ಷರು ಬೇಬಿ, ಅನಿಲ್, ಮಂಜು ದೇವಯ್ಯ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.
ಉತ್ಸವದ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಭಕ್ತರ ಸಂಚಾರ ಹೆಚ್ಚಾಗಿ ಕಂಡುಬಂದಿದ್ದು, ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನಡೆದವು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net