ಸೇತುವೆ ಕಾಮಗಾರಿಗೆ ಶಾಸಕ ಭೂಮಿಪೂಜೆ

ರಸ್ತೆ ಸೇತುಗೆ ಕಮಗಾರಿಗೆ ಶಾಸಕ ಮಂತರ್‌ಗೌಡ ಭೂಮಿಪೂಜೆ ನೆರವೇರಿಸಿದರು. ಕಾಂತ್‌ರಾಜ್, ಸತೀಶ್, ಜನಾರ್ಧನ್, ಅಪ್ಸರಿ ಬೇಗಂ, ಉದಯ್‌ಕುಮಾರ್ ಇದ್ದರು.
ರಸ್ತೆ ಸೇತುಗೆ ಕಮಗಾರಿಗೆ ಶಾಸಕ ಮಂತರ್‌ಗೌಡ ಭೂಮಿಪೂಜೆ ನೆರವೇರಿಸಿದರು. ಕಾಂತ್‌ರಾಜ್, ಸತೀಶ್, ಜನಾರ್ಧನ್, ಅಪ್ಸರಿ ಬೇಗಂ, ಉದಯ್‌ಕುಮಾರ್ ಇದ್ದರು.
Published on
ಶನಿವಾರಸಂತೆ: ಕೊಡ್ಲಿಪೇಟೆ ಕೆಳಕೊಡ್ಲಿ ಗ್ರಾಮದಲ್ಲಿ ಹೇಮಾವತಿ ನೀರಾವರಿ ನಿಗಮ(ಎಫ್‌ಎಸ್‌ಪಿ)ದಿಂದ ಮುಖ್ಯರಸ್ತೆಯಲ್ಲಿ 2 ಕೋಟಿ ರೂ. ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಡಾ. ಮಂತರ್‌ಗೌಡ ಸೋಮವಾರ ಭೂಮಿಪೂಜೆ ನೆರವೇರಿಸಿದರು.
ಹೇಮಾವತಿ ನೀರಾವರಿ ಇಲಾಖೆಯ ಮೂಲಕ ಈ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಒಟ್ಟು 8 ಕೋಟಿ ರೂ. ವೆಚ್ಚದ ಸೇತುವೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಪ್ರಮಖವಾಗಿ ಕೆಲಕೊಡ್ಲಿ ಗ್ರಾಮದಲ್ಲಿ 2 ಕೋಟಿ 7 ಲಕ್ಷ ರೂ., ಬೆಂಬಳೂರು ಕಿರುಬಿಳಹ 4 ಕೋಟಿ ರೂ., ಬೆಸೂರು ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಸೇತುವೆ 84 ಲಕ್ಷ ರೂ., ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೇತುವೆ 40 ಲಕ್ಷ ರೂ., ಗೌಡಳ್ಳಿ ಚಿಕ್ಕಾರ ಗ್ರಾಮದಲ್ಲಿ 69 ಲಕ್ಷ ವೆಚ್ಚದಲ್ಲಿ ಸೇತುವೆ ಕಾಮಗಾರಿಗಳು ನಡೆಯಲದ್ದು, ಪೂರ್ಣಗೊಂಡ ಬಳಿಕ ಗ್ರಾಮೀಣ ಪ್ರದೇಶಗಳ ಜನರಿಗೆ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಕೃಷಿ ಹಾಗೂ ವ್ಯಾಪಾರ ಚಟುವಟಿಕೆಗಳಿಗೆ ಸಹಾಯಕವಾಗಲಿದೆ ಎಂದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಂತರಾಜ್, ತಾಲೂಕು ಬಗರ್ ಹುಕುಂ ಸಮಿತಿ ಸದಸ್ಯರಾದ ಬಿ.ಬಿ.ಸತೀಶ್ ಹಾಗೂ ಜೆ.ಎಲ್. ಜನಾರ್ದನ್, ಕೊಡ್ಲಿಪೇಟೆ ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕ ಡಾ. ಉದಯ್ ಕುಮಾರ್, ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಪ್ಸರಿ ಬೇಗಂ, ಸದಸ್ಯರಾದ ಚಂದ್ರಶೇಖರ್, ಪ್ರಸನ್ನ, ನಗೀನಾ ಭಾನು, ವಹಾಬ್, ಮುತ್ತಯ್ಯ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಹನೀಫ್, ಪಕ್ಷದ ಮುಖಂಡರಾದ ವಿರೇಂದ್ರ, ನಿಖಿಲ್, ಇಂದ್ರೇಶ್, ಉಮೇಶ್, ನಾಗೇಶ್, ಹೇಮಾವತಿ ನೀರಾವರಿ ನಿಗಮದ ಇಇ ಕೆ.ಎಂ.ಸುಜಿತ್, ಎಇ ಹಾರೂನ್ ರಶೀದ್, ಗುತ್ತಿಗೆದಾರರಾದ ಸಿದ್ದೀಕ್, ಶಿವು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net