ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಿದ ಶಾಸಕ

ವಿರಾಜಪೇಟೆಯಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಪರಿಶಿಷ್ಟ ಜಾತಿ ಹಾಗೂ ಪಂಗಡದ ಫಲಾನುಭವಿಗಳಿಗೆ ಕೊಳವೆ ಬಾವಿ ಸೌಲಭ್ಯದ ಪ್ರಮಾಣ ಪತ್ರ ವಿತರಿಸಿದರು. ಮಿದೇರೀರ ನವೀನ್, ತೆನ್ನಿರ ಮೈನಾ, ನವೀನ್, ಪ್ರಶಾಂತ್ ಇದ್ದರು.
ವಿರಾಜಪೇಟೆಯಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಪರಿಶಿಷ್ಟ ಜಾತಿ ಹಾಗೂ ಪಂಗಡದ ಫಲಾನುಭವಿಗಳಿಗೆ ಕೊಳವೆ ಬಾವಿ ಸೌಲಭ್ಯದ ಪ್ರಮಾಣ ಪತ್ರ ವಿತರಿಸಿದರು. ಮಿದೇರೀರ ನವೀನ್, ತೆನ್ನಿರ ಮೈನಾ, ನವೀನ್, ಪ್ರಶಾಂತ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪರಿಶಿಷ್ಟ ಜಾತಿ ಹಾಗೂ ಪಂಗಡದ ಫಲಾನುಭವಿ
  • ಸರ್ಕಾರದಿಂದ ಮಂಜೂರಾಗಿರುವ ಕೊಳವೆ ಬಾವಿ ಉಚಿತ ಸೌಲಭ್ಯ
ವಿರಾಜಪೇಟೆ: ತಾಲೂಕಿನ ವಿವಿಧ ಆಯ್ದ ಗ್ರಾಮಗಳಲ್ಲಿನ ಪರಿಶಿಷ್ಟ ಜಾತಿ ಹಾಗೂ ಪಂಗಡದ ಫಲಾನುಭವಿಗಳಿಗೆ ಸರ್ಕಾರದಿಂದ ಮಂಜೂರಾಗಿರುವ ಕೊಳವೆ ಬಾವಿ ಉಚಿತ ಸೌಲಭ್ಯದ ಪ್ರಮಾಣ ಪತ್ರಗಳನ್ನು ಶಾಸಕ ಎ.ಎಸ್.ಪೊನ್ನಣ್ಣ ವಿತರಿಸಿದರು.
ಗೃಹ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ನೀಡಲಾದ ಸೌಲಭ್ಯವನ್ನು ಶಾಸಕ ಎ.ಎಸ್.ಪೊನ್ನಣ್ಣ ಫಲಾನುಭವಿಗಳಿಗೆ ವಿತರಿಸಿ ಶುಭ ಕೋರಿದರು.
ಸರ್ಕಾರವು ಸಮಾಜದ ಎಲ್ಲ ವರ್ಗದ ಜನರ ಏಳಿಗೆಗೆ ಶ್ರಮಿಸುತ್ತಿದ್ದು, ವಿಶೇಷವಾಗಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಅರ್ಹರನ್ನು ಸಮಾಜದ ಮುನ್ನೆಲೆಗೆ ತಂದು ಸದೃಢರನ್ನಾಗಿ ಮಾಡುವ ಸದುದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಶೀಘ್ರ ಇದರ ಫಲ ಎಲ್ಲರಿಗೂ ಸಿಗುವಂತಾಗಲಿ ಎಂದು ಹಾರೈಸಿದರು.
ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮಿದೇರೀರ ನವೀನ್, ತೆನ್ನಿರ ಮೈನಾ, ವಲಯ ಅಧ್ಯಕ್ಷ ನವೀನ್, ಕೆಡಿಪಿ ಸದಸ್ಯ ಪ್ರಶಾಂತ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net