ಈ ಸಂದರ್ಭದಲ್ಲಿ ಮನವಿದಾರರಲ್ಲಿ ಒಬ್ಬರಾದ ಬಾಲಕೃಷ್ಣ ಅವರು ಕಳೆದ ಮೂರು ವರ್ಷಗಳಿಂದ ಭೂಮಿ ದುರಸ್ತಿಗಾಗಿ ಕಚೇರಿಗೆ ಅಲೆಯುತ್ತಿದ್ದು, ಇನ್ನೂ ಸಹ ಭೂಮಿ ದುರಸ್ತಿಯಾಗಿಲ್ಲ ಎಂದು ಅವಲತ್ತುಕೊಂಡರು. ಮತ್ತೊಬ್ಬರು ಭೂಮಿ ಒತ್ತುವರಿಯಾಗಿದ್ದು, ಸರ್ವೆ ಮಾಡಿ ಸರಿಪಡಿಸುವಂತೆ ಮನವಿ ಮಾಡಿದ್ದು, ಇದುವರೆಗೆ ಈ ಕಾರ್ಯ ಆಗಿಲ್ಲ ಎಂದು ದೂರಿದರು.