ಅವಂದೂರುರಲ್ಲಿ ದವಸ ಭಂಡಾರದ ಸಭೆ

ಅವಂದೂರು ಗ್ರಾಮದ ನಂ. 109ನೇ ವಿವಿಧೋದ್ದೇಶ ಸಹಕಾರ ದವಸ ಭಂಡಾರ ನಿಯಮಿತ ಇದರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಬೆಳ್ಯನ ಎನ್. ಚಂದ್ರಪ್ರಕಾಶ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅವಂದೂರು ಗ್ರಾಮದ ನಂ. 109ನೇ ವಿವಿಧೋದ್ದೇಶ ಸಹಕಾರ ದವಸ ಭಂಡಾರ ನಿಯಮಿತ ಇದರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಬೆಳ್ಯನ ಎನ್. ಚಂದ್ರಪ್ರಕಾಶ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
Published on
ನಾಪೋಕ್ಲು: ಅವಂದೂರು ಗ್ರಾಮದ ನಂ. 109ನೇ ವಿವಿಧೋದ್ದೇಶ ಸಹಕಾರ ದವಸ ಭಂಡಾರ ನಿಯಮಿತ 2025-2026ನೇ ಸಾಲಿನ ವಾರ್ಷಿಕ ಮಹಾಸಭೆಯು ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆವರಣದಲ್ಲಿ ನಡೆಯಿತು.
ಸಂಘದ ಅಧ್ಯಕ್ಷರಾದ ಬೆಳ್ಯನ ಎನ್. ಚಂದ್ರಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಸಂಘದ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಿ ಮರಣ ಹೊಂದಿದ ಸದಸ್ಯರುಗಳಿಗೆ ಸಂತಾಪ ಸೂಚಿಸಲಾಯಿತು.
ಹಿಂದಿನ ವರ್ಷದ ಮಹಾಸಭೆಯ ವರದಿ ಮಂಡನೆ, ಆಯವ್ಯಯಗಳ ವರದಿ ಮಂಡನೆ, ಮುಂದಿನ ವರ್ಷದ ಅಂದಾಜು ಖರ್ಚು ವೆಚ್ಚಗಳ ಬಜೆಟ್ ಮಂಜೂರು, ಠರಾವುಗಳು, ಹೊಸ ಸದಸ್ಯರ ಸೇರ್ಪಡೆ ಹಾಗೂ ಇತರ ವಿಷಯಗಳ ಬಗ್ಗೆ ಸಲಹೆ ಸೂಚನೆ ಪಡೆದು ಅನುಮೋದನೆ ನೀಡಲಾಗಿದೆ.
ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಕಾಳೇರಮ್ಮನ ಬಿ. ಐಯ್ಯಣ್ಣ, ಕಾರ್ಯದರ್ಶಿ ಕಡ್ಯದ ಕೆ. ಪಾರ್ವತಿ, ನಿರ್ದೇಶಕರುಗಳು ಮತ್ತು ಸದಸ್ಯರುಗಳು ಭಾಗಿಯಾಗಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net