ಸ್ವಚ್ಛ, ಸುಂದರ ಕೊಡಗಿಗಾಗಿ ಸಭೆ

ಸೋಮವಾರಪೇಟೆ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ನಡೆದ ಸ್ವಚ್ಛ ಕೊಡಗು ಸುಂದರ ಕೊಡಗು ಎಂಬ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳು, ಸ್ಥಳೀಯರು ಚರ್ಚಿಸಿದರು.
ಸೋಮವಾರಪೇಟೆ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ನಡೆದ ಸ್ವಚ್ಛ ಕೊಡಗು ಸುಂದರ ಕೊಡಗು ಎಂಬ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳು, ಸ್ಥಳೀಯರು ಚರ್ಚಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಅಭಿಯಾನದ ಬಗ್ಗೆ ಅಧಿಕಾರಿಗಳು, ಸ್ಥಳೀಯರಿಂದ ಚರ್ಚೆ
ಸೋಮವಾರಪೇಟೆ: ಸ್ವಚ್ಛ ಕೊಡಗು, ಸುಂದರ ಕೊಡಗು ಎಂಬ ಅಭಿಯಾನದ ಮುಂದಿನ ಹಂತದ ಬಗ್ಗೆ ಮೊದಲ ಪೂರ್ವಭಾವಿ ಸಭೆ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಚೇರಿಯಲ್ಲಿ ನಡೆಯಿತು.
ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅರುಣ್ ಕೊತ್ತನಳ್ಳಿ ಮಾತನಾಡಿ, ಸ್ವಚ್ಛ ಅಭಿಯಾನಕ್ಕೆ ನಾಗರಿಕರು, ಸರ್ಕಾರಿ ಅಧಿಕಾರಿಗಳು ಕೈಜೋಡಿಸಬೇಕು. ಕೊಡಗಿನಲ್ಲಿ ಪರಿಶುದ್ಧವಾದ ಗಾಳಿ ಸಿಗಬೇಕಾದರೆ, ಪರಿಸರ ಸ್ವಚ್ಛವಾಗಿಡಬೇಕು. ಜಿಲ್ಲೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಅವರು ತಂದ ತಿಂಡಿ, ತಿನಿಸು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಾರೆ. ಇದರಿಂದ ವಾತಾವರಣ ಕಲುಷಿತಗೊಳ್ಳುತ್ತದೆ. ಮುಖ್ಯವಾಗಿ ಕಸ ವಿಲೇವಾರಿ ಸಂಸ್ಕರಣಾ ಘಟಕ ನಿರ್ಮಾಣ ಮಾಡಬೇಕಿದೆ. ಇದಕ್ಕೆ ಅಧಿಕಾರಿಗಳು ಜನಪ್ರತಿನಿಧಿಗಳು ಚಿಂತನೆ ನಡೆಸಿ ಒತ್ತು ನೀಡಬೇಕಿದೆ ಎಂದರು.
ಹೋಂ ಸ್ಟೇ ಮತ್ತು ರೆಸಾರ್ಟ್ ಅಸೋಸಿಯೇಷನ್ ಜಿಲ್ಲಾ ಉಪಾಧ್ಯಕ್ಷ ಬಿ.ಎಸ್.ಸುಂದರ್, ಮಾತನಾಡಿ, ಕಳೆದ 30 ವರ್ಷಗಳಿಂದ ನಮ್ಮ ಮನೆಯ ಕಸವನ್ನು ಗೊಬ್ಬರವಾಗಿ ಪರಿವರ್ತನೆ ಮಾಡಿ ಹೂ ಗಿಡಗಳಿಗೆ, ತರಕಾರಿ ಗಿಡಗಳಿಗೆ ಹಾಕಿ ಬೆಳೆಸುತ್ತಿದ್ದೇವೆ. ಹೀಗೆ ಪ್ರತಿಯೊಂದು ಮನೆಯಲ್ಲೂ ಕಸದ ನಿರ್ವಹಣೆ ಆದರೆ ಪರಿಸರ ಸ್ವಚ್ಛವಾಗಿ ಇರುತ್ತದೆ ಎಂದರು.
ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಸುಮನಾ ಮಾತನಾಡಿ, ಸರ್ಕಾರ ಶಾಲಾ ಹೆಣ್ಣು ಮಕ್ಕಳಿಗೆ ಪ್ಲಾಸ್ಟಿಕ್ ಕವರ್ ಇರುವ ಪ್ಯಾಡ್ ವಿತರಿಸುತ್ತಿದೆ. ಇದರಿಂದ ಒಂದಷ್ಟು ಸಮಸ್ಯೆಯಾಗಿದೆ. ಈ ಬಗ್ಗೆ ಅಧಿಕಾರಿಗಳು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು. ಬಟ್ಟೆಯ ಪ್ಯಾಡ್‌ಗಳನ್ನು ವಿತರಿಸಿದರೆ ಪರಿಸರದ ಸ್ವಚ್ಛತೆಗೆ ಉಪಯೋಗವಾಗಲಿದೆ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ ಸಿ.ಕೆ.ರೋಹಿತ್, ರೋಟರಿ ಸಂಸ್ಥೆಯ ಅಧ್ಯಕ್ಷೆ ವೀಣಾ ಮನೋಹರ್, ಜೆ.ಸಿ.ಅಧ್ಯಕ್ಷೆ ಜಗದಾಂಬಾ ಗುರುಪ್ರಸಾದ್, ಪ್ರಮುಖರಾದ ಪಿ.ಕೆ.ರವಿ. ಸಜ್ಜನ್, ವಸಂತ್, ತಾಲೂಕು ಪಂಚಾಯಿತಿ ಅಧಿಕಾರಿಗಳಾದ ಶ್ರೀನಿವಾಸ್, ಸೌಮ್ಯ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net