ಮಾಧ್ಯಮದ ಭದ್ರತೆಗೆ ಮುಕ್ತ ವಾತಾವರಣ ಬೇಕು

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಏರ್ಪಡಿಸಿದ್ದ ವಿಮೆ ಸೌಲಭ್ಯ ಕಲ್ಪಿಸುವ ಕಾರ್ಯಕ್ರಮವನ್ನು ರಿಪಬ್ಲಿಕ್ ಟಿವಿ ನೆಟ್‌ವರ್ಕ್ ಹಾಗೂ ಹೆಡ್ ಇಂಟರ್ ನ್ಯಾಷನಲ್ ಬಿಸಿನೆಸ್ ಸಂಸ್ಥೆ ಅಧ್ಯಕ್ಷ ಚೇರಂಡ ಕಿಶನ್ ಮಾದಪ್ಪ ಉದ್ಘಾಟಿಸಿದರು. ಮೇರಿಯಂಡ ಸಂಕೇತ್ ಪೂವಯ್ಯ, ಬಾಚರಣಿಯಂಡ ಅನುಕಾರ್ಯಪ್ಪ, ಬಿ.ಆರ್. ಸವಿತಾ ರೈ ಇದ್ದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಏರ್ಪಡಿಸಿದ್ದ ವಿಮೆ ಸೌಲಭ್ಯ ಕಲ್ಪಿಸುವ ಕಾರ್ಯಕ್ರಮವನ್ನು ರಿಪಬ್ಲಿಕ್ ಟಿವಿ ನೆಟ್‌ವರ್ಕ್ ಹಾಗೂ ಹೆಡ್ ಇಂಟರ್ ನ್ಯಾಷನಲ್ ಬಿಸಿನೆಸ್ ಸಂಸ್ಥೆ ಅಧ್ಯಕ್ಷ ಚೇರಂಡ ಕಿಶನ್ ಮಾದಪ್ಪ ಉದ್ಘಾಟಿಸಿದರು. ಮೇರಿಯಂಡ ಸಂಕೇತ್ ಪೂವಯ್ಯ, ಬಾಚರಣಿಯಂಡ ಅನುಕಾರ್ಯಪ್ಪ, ಬಿ.ಆರ್. ಸವಿತಾ ರೈ ಇದ್ದರು.
Published on
ಮಡಿಕೇರಿ:
ಮಾಧ್ಯಮದ ಭದ್ರತೆಗೆ ಮುಕ್ತ ವಾತಾವರಣ ಸೃಷ್ಟಿಯಾಗಬೇಕು. ಈ ನಿಟ್ಟಿನಲ್ಲಿ ಆಯೋಗ ರಚನೆಯಾಗುವ ಅಗತ್ಯ ಇದೆ ಎಂದು ಕರ್ನಾಟಕ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಸೋಮವಾರ ಏರ್ಪಡಿಸಿದ್ದ ವಿಮೆ ಸೌಲಭ್ಯ ಕಲ್ಪಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾ ರಂಗವನ್ನು ಸರ್ಕಾರ ನಿರ್ಲ್ಯಕ್ಷಿಸುತ್ತ ಬಂದಿದೆ. ಸರ್ಕಾರಗಳು ಪತ್ರಕರ್ತರ ಪರ ಚಿಂತನೆ ಮಾಡಿ ಅವರಿಗೆ ಶಕ್ತಿ ತುಂಬಿ ಭದ್ರತೆ ನೀಡುವ ಜವಾಬ್ದಾರಿ ಹೊಂದಿರಬೇಕು. ಜನರಿಗೆ ಸರ್ಕಾರದ ವೈಫಲ್ಯ ಕಂಡುಬAದಲ್ಲಿ ಬದಲಿಸುವ ಶಕ್ತಿಯಿದೆ. ಈ ವೈಫಲ್ಯಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಧ್ಯಮ ಕ್ಷೇತ್ರ ಮಾಡುತ್ತಿದೆ. ಜನರು ಕಾರ್ಯಾಂಗ ಹಾಗೂ ಶಾಸಕಾಂಗದ ಮೇಲೆ ಭ್ರಮನಿರಸನ ಹೊಂದಿದ್ದಾರೆ. ವ್ಯವಸ್ಥೆ ಮೇಲೆ ನಂಬಿಕೆ ಬರಬೇಕಾದರೆ ಪತ್ರಿಕಾಂಗ, ನ್ಯಾಯಾಂಗದಿAದ ಮಾತ್ರ ಸಾಧ್ಯ ಎಂಬ ಮನಸ್ಥಿತಿಗೆ ತಲುಪಿದ್ದಾರೆ. ಕಠಿಣ ಪರಿಸ್ಥಿತಿಯಲ್ಲಿ ಪತ್ರಕರ್ತರು ಪ್ರಾಣ ಒತ್ತೆಯಿಟ್ಟು ಕಾರ್ಯನಿರ್ವಹಿಸುತ್ತಾರೆ. ಪ್ರಜಾಪ್ರಭುತ್ವದ ಮುಖ್ಯಭೂಮಿಕೆಯಲ್ಲಿರುವ ಪತ್ರಕರ್ತರಿಗೆ ಸೂಕ್ತ ಭದ್ರತೆ ಇಲ್ಲದಿರುವುದು ವಿಪರ್ಯಾಸ. ಚಿಂತಕರ ಚಾವಡಿ ಎಂದು ಕರೆಸಿಕೊಳ್ಳುವ ವಿಧಾನಪರಿಷತ್ತು ಹಾಗೂ ರಾಜ್ಯಸಭೆಗಳಲ್ಲಿ ಪತ್ರಕರ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಗಳನ್ನಾಗಿ ಮಾಡಬೇಕು. ಸÀರ್ಕಾರಗಳ ಮುಂಗಡ ಪತ್ರದಲ್ಲಿ ಪತ್ರಕರ್ತರಿಗೆ ಸೌಲಭ್ಯ ಘೋಷಣೆಯಾಗಬೇಕು ಎಂದು ಹೇಳಿದರು
ಕಾರ್ಯಕ್ರಮ ಉದ್ಘಾಟಿಸಿ, ಪತ್ರಕರ್ತರಿಗೆ ವಿಮೆ ಕಾರ್ಡ್ ಹಸ್ತಾಂತರಿಸಿ ಮಾತನಾಡಿದ ರಿಪಬ್ಲಿಕ್ ಟಿವಿ ನೆಟ್‌ವರ್ಕ್ ಹಾಗೂ ಹೆಡ್ ಇಂಟರ್ ನ್ಯಾಷನಲ್ ಬಿಸಿನೆಸ್ ಸಂಸ್ಥೆ ಅಧ್ಯಕ್ಷ ಚೇರಂಡ ಕಿಶನ್ ಮಾದಪ್ಪ ಮಾತನಾಡಿ ಸಮಾಜಕ್ಕಾಗಿ ದುಡಿಯುವ ಪತ್ರಕರ್ತರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಪತ್ರಕರ್ತರ ಸಂಕಷ್ಟಗಳಿಗೆ ವೈಯಕ್ತಿಕವಾಗಿಯೂ ಸ್ಪಂದಿಸುವುದಾಗಿ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕಿ ಸವಿತಾ ರೈ ಮಾತನಾಡಿ, ಪತ್ರಕರ್ತರು ಸಂಕಷ್ಟ ಸ್ಥಿತಿಯಲ್ಲಿದ್ದು, ಈ ವಿಮೆ ಸೌಲಭ್ಯ ಅಭಯ ನೀಡುತ್ತದೆ ಎಂದು ಹೇಳಿದರು. ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ, ಜಿಲ್ಲೆಯ ಪತ್ರಕರ್ತರು ಆರ್ಥಿಕ ಸಂಕಷ್ಟದಲ್ಲಿದ್ದು, ಆರೋಗ್ಯ ಸಮಸ್ಯೆ ಎದುರಾದಾಗ ಸಂಘದಿAದ ಗರಿಷ್ಠ ರೂ. 10 ಸಾವಿರ ರೂ. ಮಾತ್ರ ನೀಡಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಪತ್ರಕರ್ತರಿಗಾಗಿ ವಿಮೆ ಮಾಡಿಸಲಾಗಿದೆ. ವಾರ್ಷಿಕ 550 ರೂ. ಮೌಲ್ಯದ ವಿಮೆಯನ್ನು ಸಂಘದ ಸದಸ್ಯರಿಗಾಗಿ ಅಂಚೆ ಕಚೇರಿ ಮೂಲಕ ಮಾಡಿಸಲಾಗಿದೆ. ಅಪಘಾತದಿಂದ ಜೀವ ಕಳೆದುಕೊಂಡರೆ ಅಥವಾ ಅಂಗ ವೈಕಲ್ಯ ಉಂಟಾದಲ್ಲಿ 10 ಲಕ್ಷ ರೂ., ಗಾಯಗೊಂಡರೆ ಚಿಕಿತ್ಸೆಗಾಗಿ 1 ಲಕ್ಷ ರೂ. ತನಕ ಹಣ ಸಿಗಲಿದೆ ಎಂದರು.
ಅಂಚೆ ಇಲಾಖೆ ಇಂಡಿಯಾ ಪೊಸ್ಟ್ ವಿಭಾಗದ ಮಡಿಕೇರಿ ಶಾಖಾ ವ್ಯವಸ್ಥಾಪಕ ಬಬಿನ್ ಮತ್ತು ಅಧಿಕಾರಿ ಅಶೋಕ್ ವಿಮೆ ಸೌಲಭ್ಯದ ಕುರಿತು ಮಾಹಿತಿ ಒದಗಿಸಿದರು. ಪತ್ರಕರ್ತರಿಗೆ ವಿಮೆ ಸೌಲಭ್ಯ ಕಲ್ಪಿಸಲು ಆರ್ಥಿಕ ನೆರವು ನೀಡಿದ ಚೇರಂಡ ಕಿಶನ್ ಮಾದಪ್ಪ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲೆಯ ವಿವಿಧೆಡೆಯ ಪತ್ರಕರ್ತರಿಗೆ ಈ ಸಂದರ್ಭ ವಿಮೆ ಮಾಡಿಸಲಾಯಿತು.
ಕುಡೆಕಲ್ಲು ಗಣೇಶ್, ಹೆಚ್.ಜೆ. ರಾಕೇಶ್, ಜಿ.ಆರ್ ಪ್ರಜ್ವಲ್, ಟಿ.ಆರ್. ಪ್ರಭುದೇವ್ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net