ಕ್ರೀಡಾ ಸಂಕೀರ್ಣ ನಿರ್ಮಾಣ ಶೀಘ್ರ ಅನುಷ್ಠಾನವಾಗಲಿ

ವಿ. ಬಾಡಗ ಗ್ರಾಮದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಗುರುತಿಸಲಾದ ಜಾಗದಲ್ಲಿ ಪೂರ್ವಭಾವಿ ಕೆಲಸಗಳು ನಡೆದಿವೆ.
ವಿ. ಬಾಡಗ ಗ್ರಾಮದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಗುರುತಿಸಲಾದ ಜಾಗದಲ್ಲಿ ಪೂರ್ವಭಾವಿ ಕೆಲಸಗಳು ನಡೆದಿವೆ.
Published on
ಮಡಿಕೇರಿ:
ಕೊಡಗು ಎಂದ ಕೂಡಲೇ ಸೇನಾ ಪರಂಪರೆಯ ಜತೆಗೆ ದೊಡ್ಡ ದೊಡ್ಡ ಕ್ರೀಡಾ ತಾರೆಗಳೂ ನೆನಪಿಗೆ ಬರುತ್ತಾರೆ. ಭೌಗೋಳಿಕವಾಗಿ ವಿಶಿಷ್ಟ ಜಿಲ್ಲೆಯಾಗಿರುವ ಕೊಡಗಿನಿಂದ ಕ್ರೀಡಾ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ಸಿಕ್ಕಿದ್ದು, ಜಿಲ್ಲೆಯಲ್ಲಿನ ಸೀಮಿತ ಮೂಲಭೂತ ಸವಲತ್ತುಗಳ ನಡುವೆಯೇ ಸ್ಥಳೀಯ ಕ್ರೀಡಾ ಪ್ರತಿಭೆಗಳು ಅಂತಾರಾಷ್ಟಿçÃಯ ಮಟ್ಟದಲ್ಲೂ ಮಿಂಚುತ್ತಿವೆ. ರಾಷ್ಟç ಮತ್ತು ಅಂತಾರಾಷ್ಟಿçÃಯ ಮಟ್ಟಕ್ಕೆ ದೊಡ್ಡ ಸಂಖ್ಯೆಯಲ್ಲಿ ಕ್ರೀಡಾಪುಟುಗಳನ್ನು ಕೊಟ್ಟಿರುವ ಕ್ರೀಡಾ ಜಿಲ್ಲೆ ಕೊಡಗಿಗೆ ಕ್ರೀಡಾ ವಿಶ್ವವಿದ್ಯಾಲಯ ಬೇಕು ಎನ್ನುವುದು ಸ್ಥಳೀಯರ ಬಹಳ ಹಳೇ ಬೇಡಿಕೆ. ಆದರೆ ಅದಕ್ಕೆ ಇನ್ನೂ ಕಾಲ ಕೂಡಿ ಬಾರದಿದ್ದರೂ ಕ್ರೀಡಾ ಸಂಕೀರ್ಣ ನಿರ್ಮಾಣ ಸಂಬAಧ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ.
ಮುಖ್ಯಮಂತ್ರಿ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಕ್ರೀಡಾ ಕ್ಷೇತ್ರದ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದು ಕ್ರೀಡಾಪ್ರೇಮಿಗಳ ಒತ್ತಾಸೆಯ ಫಲವಾಗಿ ವಿರಾಜಪೇಟೆ ತಾಲೂಕು ವಿ.ಬಾಡಗ ಗ್ರಾಮದಲ್ಲಿ ಸುಸಜ್ಜಿತ ಕ್ರೀಡಾಂಗಣ ಮತ್ತು ವಿವಿಧ ಕ್ರೀಡೆಗಳ ತರಬೇತಿ ಕೇಂದ್ರ ತಲೆ ಎತ್ತಲಿದೆ. ಇದಕ್ಕಾಗಿ 11.5 ಎಕರೆ ಜಾಗ ಗುರುತಿಸಲಾಗಿದ್ದು, ಕ್ರೀಡಾಂಗಣ ನಿರ್ಮಾಣ ಕಾಮಗಾರಿಯ ಪೂರ್ವಭಾವಿ ಕೆಲಸಗಳನ್ನು ಮಾಡಲಾಗಿದೆ. ಮೊದಲು ಕಾನೂರಿನಲ್ಲಿ ಕ್ರೀಡಾ ತರಬೇತಿ ಕೇಂದ್ರ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿತ್ತು. ಆದರೆ, ತಾಂತ್ರಿಕ ಸಮಸ್ಯೆಯಿಂದ ಇದು ಸಾಧ್ಯವಾಗಿಲಿಲ್ಲ. ಇದೀಗ ವಿ. ಬಾಡಗ ಗ್ರಾಮದÀ ಜಾಗವೇ ಅಂತಿಮವಾಗಿದೆ. ಈ ಕ್ರೀಡಾಸಂಕೀರ್ಣಕ್ಕೆ ಸುಮಾರು 40 ಕೋಟಿ ರೂ. ವೆಚ್ಚ ಆಗಬಹುದೆಂದು ಅಂದಾಜಿಸಲಾಗಿದೆ.
ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಆಗಿರುವ ಅಜಯ್ ಮಕಾನ್ ಅವರ ಬಹು ದೊಡ್ಡ ಪಾತ್ರ ಕೂಡ ಈ ಉದ್ದೇಶಿತ ಕ್ರೀಡಾಸಂಕೀರ್ಣ ನಿರ್ಮಾಣದ ಹಿಂದೆ ಇದೆ. ರಾಜ್ಯಸಭಾ ಕಲಾಪದ ವೇಳೆ ಕೊಡಗಿನ ಕ್ರೀಡಾ ಚಟುವಟಿಕೆ, ಕೊಡವ ಕೌಟುಂಬಿಕ ಹಾಕಿ ವಿಶ್ವದಾಖಲೆ ಬಗ್ಗೆ ಶ್ಲಾಘಿಸಿ ಅವರು ಮಾತನಾಡಿದ್ದರು. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭ ಕ್ರೀಡಾ ಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದರು. ಕಲಾಪದಲ್ಲಿ ಅವರು ಕೊಡಗಿನ ಕ್ರೀಡಾ ಹಿರಿಮೆ ಪ್ರಸ್ತಾಪಿಸಿದ ನಂತರ ಅವರ ಆಸಕ್ತಿ ತಿಳಿದು ಸಂಪರ್ಕಿಸಿದಾಗ ಕ್ರೀಡಾ ಸಂಕೀರ್ಣ, ತರಬೇತಿ ಕೇಂದ್ರ ನಿರ್ಮಾಣಕ್ಕೆ ಅಜಯ್ ಮಕಾನ್ ಅವರ 6 ವರ್ಷದ ಎಲ್ಲಾ ಸಂಸದರ ನಿಧಿ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಈಗ ಬಜೆಟ್‌ನಲ್ಲಿ ಘೋಷಣೆ ಆಗಿರುವುದರಿಂದ ಯೋಜನೆ ಆದಷ್ಟು ಶೀಘ್ರ ಅನುಷ್ಠಾನಕ್ಕೆ ಬರಲಿದೆ.
"

ಕೊಡಗಿನ ಪ್ರತಿ ಮನೆಯಲ್ಲೂ ಕ್ರೀಡಾಪಟುಗಳಿದ್ದಾರೆ. ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರತಿನಿಧಿಸಿದಂಥವರು ಇದ್ದಾರೆ. ದೇಶ ವಿದೇಶದಲ್ಲಿ ಪುಟ್ಟ ಜಿಲ್ಲೆಯಾದ ಕೊಡಗು ಕ್ರೀಡೆಯ ಹಿನ್ನೆಲೆಯಲ್ಲಿ ಹೆಸರುವಾಸಿಯಾಗುತ್ತಿದೆ. ಕ್ರೀಡೆಗೆ ಪ್ರಾಮುಖ್ಯತೆ ಕೊಡುವಂಥ ಜಿಲ್ಲೆಯಲ್ಲಿನ ಜನರು ಕ್ರೀಡೆಯ ಬಗ್ಗೆ ಅಧ್ಯಯನ ನಡೆಸಲು ಅಥವಾ ಹೆಚ್ಚಿನ ಅಭ್ಯಾಸ ಮಾಡಲು ಹೊರ ಜಿಲ್ಲೆಗಳಿಗೆ ಹೋಗುವಂಥ ಸನ್ನಿವೇಶ ಇತ್ತು. ಆದರೆ ಇದೀಗ ನಮ್ಮ ಜಿಲ್ಲೆಯಲ್ಲಿ ಆರಂಭವಾಗುತ್ತಿರುವ ಕ್ರೀಡಾ ಸಂಕೀರ್ಣ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದರೆ ಸ್ಥಳೀಯ ಪ್ರತಿಭೆಗಳಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದವರೆಗೂ ಪ್ರತಿನಿಧಿಸಲು ಸುಗಮ ಹಾದಿಯಾಗುತ್ತದೆ.

"

ಕೊಡಗು ಜಿಲ್ಲೆಗೆ ಕ್ರೀಡಾ ವಿಶ್ವವಿದ್ಯಾಲಯದ ಬೇಡಿಕೆ ಹಳೆಯದು ಮತ್ತು ಬಹಳ ಅಗತ್ಯವೂ ಆಗಿದೆ. ಆದರೆ ಈ ಬಜೆಟ್‌ನಲ್ಲಿ ಘೋಷಿಸಿದ ಕ್ರೀಡಾ ಸಂಕೀರ್ಣವೂ ಒಳ್ಳೆಯ ಆರಂಭವಾಗಿದೆ. ಸರಿಯಾದ ಸೌಲಭ್ಯಗಳು, ತರಬೇತಿ ಮತ್ತು ನಿರ್ವಹಣೆ ಇದ್ದರೆ, ಇದು ಯುವ ಕ್ರೀಡಾಪಟುಗಳಿಗೆ ದೊಡ್ಡ ಅವಕಾಶವಾಗಬಹುದು ಮತ್ತು ಕೊಡಗಿನಲ್ಲಿ ಕ್ರೀಡಾ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಆದರೆ, ಇದು ಕೇವಲ ಕಟ್ಟಡವಾಗಿಯೇ ಉಳಿಯಬಾರದು. ಪರಿಣಾಮಕಾರಿ ಬಳಕೆ ಇದ್ದಾಗ ಮಾತ್ರ ಪ್ರಯೋಜನ ಸಿಗುತ್ತದೆ. ಇದು ಒಂದು ಉತ್ತಮ ಹೆಜ್ಜೆ. ಜತೆಗೆ ಕ್ರೀಡಾ ವಿಶ್ವವಿದ್ಯಾಲಯದ ಗುರಿ ನಾವು ಮುಂದುವರಿಸಬೇಕು.

"

ಕ್ರೀಡಾ ಸಂಕಿರ್ಣದ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಆಗಿರುವುದು ಒಳ್ಳೆಯದು. ಇದೀಗ ಬೇರೆ ಬೇರೆ ಭಾಗಳಿಗೆ ಕ್ರೀಡೆಗೆ ಹೋದರೆ ನವೀನ ಮಾದರಿಯ ಮೈದಾನ ಕಂಡುಬರುತ್ತದೆ. ಆದರೆ ಕೊಡಗಿನಲ್ಲಿ ಅಂಥ ಮೈದಾನ ಕಡಿಮೆ ಇದೆ. ಇದೀಗ ಕ್ರೀಡಾ ಸಂಕಿರ್ಣ ಮಾಡಿದರೆ ಕ್ರೀಡಾಪಟುಗಳಿಗೆ ಅನುಕೂಲ ಆಗುತ್ತದೆ. ಇಂದು ಎಲ್ಲಾ ಕ್ರೀಡೆಗಳು ಸ್ಪರ್ಧಾತ್ಮಕವಾಗಿದ್ದು ಯಾರು ಸಹ ಸುಲಭವಾಗಿ ಗೆಲುವು ಸಾಧಿಸಲು ಆಗುವುದಿಲ್ಲ ಇದೀಗ ಕೊಡಗಿನಲ್ಲಿ ಕ್ರೀಡಾ ಸಂಕಿರ್ಣ ಮಾಡಿದರೆ ಅನುಕೂಲ ಆಗುತ್ತದೆ.

"

ಕೊಡಗಿನಲ್ಲಿ ಕ್ರೀಡಾ ಪ್ರತಿಭೆಗಳಿಗೆ ಕೊರತೆಯಿಲ್ಲ. ಆದರೆ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರೀಡಾ ಜಿಲ್ಲೆ ಕೊಡಗಿಗೆ ಕ್ರೀಡಾ ವಿಶ್ವವಿದ್ಯಾಲಯ ಬೇಕು ಎನ್ನುವುದು ಹಳೆಯ ಬೇಡಿಕೆಯಾಗಿದ್ದರೂ ಕೂಡ ಅದು ದೊರೆಯದೆ ಇದೀಗ ಕ್ರೀಡಾ ಸಂಕೀರ್ಣ ದೊರೆತಿದೆ. ಇದನ್ನು ಸರಿಯಾದ ರೀತಿಯಲ್ಲಿ ಸದುಪಯೋಗಿಸಿಕೊಳ್ಳುವ ಮೂಲಕ ಜಿಲ್ಲೆಯ ಕ್ರೀಡಾಪಟುಗಳು ಕ್ರೀಡಾ ಕ್ಷೇತ್ರದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲು ಸಹಕಾರಿ ಆಗಲಿದೆ.

"

ವಿ. ಬಾಡಗ ಗ್ರಾಮದಲ್ಲಿ 11.5 ಎಕರೆ ಪ್ರದೇಶದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಸಂಬAಧಿಸಿದAತೆ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಘೋಷಣೆ ಮಾಡಿದ್ದಾರೆ. ಈ ಯೋಜನೆಗೆ ರಾಜ್ಯಸಭಾ ಸದಸ್ಯ ಅಜಯ್ ಮಕಾನ್ ಕೂಡ ಸಹಾಯ ಮಾಡಿದ್ದು, ಅವರೀಗಾಗಲೇ ಹಣ ಬಿಡುಗಡೆ ಮಾಡಿರುವುದರಿಂದ ಕೆಲಸಗಳು ಶುರುವಾಗಿದೆ. ಹಾಕಿ, ಅಥ್ಕೆಟಿಕ್ಸ್, ಬ್ಯಾಡ್ಮಿಂಟನ್, ಟೆನ್ನಿಸ್ ಕೋರ್ಟ್, ಸ್ವಿಮ್ಮಿಂಗ್ ಪೂಲ್ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ, ಕ್ರೀಡಾ ತರಬೇತಿ ಕೇಂದ್ರ ಆರಂಭಿಸಲಾಗುವುದು. ಹಾಸ್ಟೆಲ್ ಕೂಡ ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net