ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಫಾ.ಶಿಬಿನ್ ಮ್ಯಾಥ್ಯು, ಫಾ.ಜೇಮ್ಸ್ ಶಾಲಾ ಮತ್ತು ಕಾಲೇಜು ವಿಭಾಗದ ಶಿಕ್ಷಕರು, ಉಪನ್ಯಾಸಕರು ಹಾಜರಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಪರಿಷತ್ ಚುನಾವಣೆಯಲ್ಲಿ ಆಯ್ಕೆಯಾದವರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ನಂತರ ವಿದ್ಯಾರ್ಥಿಗಳಿಂದ ಫ್ಯಾಷನ್ ಪೆರೇಡ್, ನೃತ್ಯ, ಮೂಕಾಭಿನಯ, ಛದ್ಮವೇಷ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.