ಸುಮಾರು 800 ವರ್ಷಗಳ ಹಿಂದೆ ಚೋಳರ ಆಳ್ವಿಕೆಯಲ್ಲಿ ಈ ದೇವಾಲಯ ಸ್ಥಾಪನೆಯಾಗಿದೆ ಎಂಬ ಇತಿಹಾಸವಿದೆ. ಅಂದಿನಿಂದಲೇ ಕಾಡು ಮಾವುಕಲೇಶ್ವರ ದೇವಸ್ಥಾನ ಎಂದು ಪ್ರಸಿದ್ಧಿಗೆ ಬಂದಿದೆ. ಪ್ರಕೃತಿಯ ಮಡಿಲಿನಲ್ಲಿರುವ ಈ ದೇವಾಲಯದಲ್ಲಿ ಪ್ರಸಿದ್ಧ ಮಾವುಕಲ್ ಲಿಂಗ, ನಂದಿ, ಗಣಪತಿ, ಸೀತಾಮಾತೆ ಹಾಗೂ ಕೈಕೆ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಮಳೆ ಕೊರತೆ ಉಂಟಾದ ಸಂದರ್ಭಗಳಲ್ಲಿ ಇಲ್ಲಿ ವಿಶೇಷ ಪೂಜೆ ಸಲ್ಲಿಸಿದರೆ ಉತ್ತಮ ಮಳೆಯಾಗುತ್ತದೆ ಎಂಬ ನಂಬಿಕೆ ಜನರಲ್ಲಿ ಗಾಢವಾಗಿದೆ. ಅದಕ್ಕಾಗಿ ರೈತರು ಹಾಗೂ ಭಕ್ತರು ಹರಕೆ ಹೊತ್ತು ದೇವರ ಮೊರೆ ಹೋಗುವುದು ಸಾಮಾನ್ಯವಾಗಿದೆ.