ಸಾಮೂಹಿಕ ನಾಟಿ ಕಾರ್ಯದ ಕುರಿತು ಗ್ರಾಮದ ಅಧ್ಯಕ್ಷ ಎಚ್.ಎನ್.ವಸಂತ ಮಾತನಾಡಿ, ಗದ್ದೆಯಲ್ಲಿ ಬೆಳೆಯುವ ಭತ್ತದಿಂದ ದೊರೆಯುವ ಆದಾಯವನ್ನು ದೇವಸ್ಥಾನದ ಹರಿಸೇವೆ, ಅರ್ಚಕರ ವೇತನ ಸೇರಿದಂತೆ ವರ್ಷವಿಡೀ ದೇವಸ್ಥಾನಕ್ಕೆ ತಗಲುವ ಖರ್ಚುಗಳಿಗೆ ಬಳಸಲಾಗುತ್ತದೆ. ಗ್ರಾಮಸ್ಥರು ನಿಗದಿತ ಸಮಯಕ್ಕೆ ಆಗಮಿಸಿ ಒಟ್ಟಾಗಿ ನಾಟಿ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ. ನಂತರ ಎಲ್ಲರೂ ಒಂದೆಡೆ ಸೇರಿ ಊಟ ಮಾಡುವ ಮೂಲಕ ಗ್ರಾಮದ ಒಗ್ಗಟ್ಟನ್ನು ಕಾಪಾಡಿಕೊಂಡು ಬರಲಾಗುತ್ತಿದೆ ಎಂದರು.