ಸಮರ ಕಲೆಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ

ಅಂತಾರಾಷ್ಟ್ರೀಯ ಕರಾಟೆ ಡು.ಗ್ಯೂಜೊಕಾಯಿ ಅಸೋಸಿಯೇಷನ್ ಇಂಡಿಯಾ ವತಿಯಿಂದ ವಿಶೇಷ ತರಬೆತಿ ನಡೆಯಿತು. ಶಾಸಕ ಎ.ಎಸ್.ಪೊನ್ನಣ್ಣ, ಸೆಂಪಾಯಿ ಸಿ.ಎಚ್.ಬಷೀರ್, ಸೆಂಪಾಯಿ ಹರಿಕೃಷ್ಣನ್, ಸೆಂಪಾಯಿ ಮನೀಷ್, ಸೆಂಪಾಯಿ ಆಕಾಶ್, ಸೆಂಪಾಯಿ ಸದೀನ್, ಸೆಂಪಾಯಿ ಪೂವಯ್ಯ ಇದ್ದರು.
ಅಂತಾರಾಷ್ಟ್ರೀಯ ಕರಾಟೆ ಡು.ಗ್ಯೂಜೊಕಾಯಿ ಅಸೋಸಿಯೇಷನ್ ಇಂಡಿಯಾ ವತಿಯಿಂದ ವಿಶೇಷ ತರಬೆತಿ ನಡೆಯಿತು. ಶಾಸಕ ಎ.ಎಸ್.ಪೊನ್ನಣ್ಣ, ಸೆಂಪಾಯಿ ಸಿ.ಎಚ್.ಬಷೀರ್, ಸೆಂಪಾಯಿ ಹರಿಕೃಷ್ಣನ್, ಸೆಂಪಾಯಿ ಮನೀಷ್, ಸೆಂಪಾಯಿ ಆಕಾಶ್, ಸೆಂಪಾಯಿ ಸದೀನ್, ಸೆಂಪಾಯಿ ಪೂವಯ್ಯ ಇದ್ದರು.
Published on
ವಿರಾಜಪೇಟೆ: ಸಮರ ಕಲೆಯು ಅತ್ಯಂತ ಪುರಾತನ ಕಲೆಯಾಗಿದೆ. ಆತ್ಮರಕ್ಷಣೆಗಾಗಿ ಕಲಿಯುವುದಾಗಿದೆ. ಬಾಲ್ಯದಿಂದಲೇ ಕರಗತ ಮಾಡಿಕೊಳ್ಳಬೇಕು ಹಾಗೂ ಹೆಚ್ಚಿನ ಪ್ರೋತ್ಸಾಹ ನೀಡುವಂತಾಗಬೇಕು ಎಂದು ಶಾಸಕ ಎ.ಎಸ್.ಪೊನ್ನಣ್ಣ ಆಶಯ ವ್ಯಕ್ತಪಡಿಸಿದರು.
ಅಂತಾರಾಷ್ಟ್ರೀಯ ಕರಾಟೆ ಡು.ಗ್ಯೂಜೊಕಾಯಿ ಅಸೋಸಿಯೇಷನ್ ಇಂಡಿಯಾ ವತಿಯಿಂದ ಸಂತ ಅನ್ನಮ್ಮ ಶಾಲೆಯ ಸಮುದಾಯ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮೂರು ದಿನಗಳ ವಿಶೇಷ ಕರಾಟೆ ತರಬೇತಿ ಶಿಬಿರದ ಸಮರೋಪದಲ್ಲಿ ಮಾತನಾಡಿದರು. ಸಂಸ್ಕೃತಿಯೊಂದಿಗೆ ಸಮರ ಕಲೆಯು ಬೆರೆತಿದೆ. ಪುರಾತನ ಕಾಲದಲ್ಲಿ ಆತ್ಮರಕ್ಷಣೆಗಾಗಿ, ಸಮರಾಭ್ಯಸಕ್ಕೆ ತರಬೇತಿ ನೀಡುತ್ತಿದ್ದರು.
ಕಲೆಯು ಆತ್ಮರಕ್ಷಣೆಗಾಗಿ ಮತ್ತು ರಾಜ್ಯ ಹಾಗೂ ಪ್ರದೇಶ ರಕ್ಷಣೆಗಾಗಿ ಸೀಮಿತವಾಗಿತ್ತು. ರಾಜ್ಯಾಧಿಕಾರ ಅಂತ್ಯಗೊಂಡ ತರುವಾಯ ಸಮರಕಲೆಯ ವಿವಿಧ ಪ್ರಕಾರಗಳನ್ನು ಆಧುನಿಕ ಜನತೆ ಕಲಿಯುವ ಹಂತಕ್ಕೆ ಬಂದಿತ್ತು. ಕಲೆಯನ್ನು ಉಳಿಸುವ ಪ್ರಯತ್ನ ನಮ್ಮದಾಗಬೇಕು ಮತ್ತು ಪ್ರೋತ್ಸಾಹ ದೊರಕುವಂತಾಗಬೇಕು ಎಂದು ಶಿಬಿರಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಗೋಜೋಕಾಯಿ ಕರಾಟೆ ತರಬೇತಿ ಶಾಲೆ ಕೊಡಗು ವಿರಾಜಪೇಟೆ ಮುಖ್ಯ ತರಬೇತಿ ಶಿಕ್ಷಕರಾದ ಸೆನ್ಸಾಯಿ ಎಂ.ಬಿ. ಚಂದ್ರನ್ ನೇತೃತ್ವದಲ್ಲಿ ಶ್ರೀ ರಾಮ ಟ್ರಸ್ಟ್ ಎಕ್ಸಲ್ ಶಾಲೆ ನಾಪೋಕ್ಲು, ಶ್ರೀ ಶಾಂತಮಲ್ಲಿಕಾರ್ಜುನ ವಿದ್ಯಾಪೀಠ ಅರಮೇರಿ ಮತ್ತು ಸಂತ ಅನ್ನಮ್ಮ ಶಾಲೆಯಲ್ಲಿ ಮೂರು ದಿನಗಳ ಕಾಲ ವಿವಿಧ ಪ್ರಕಾರಗಳ ಕರಾಟೆ ತರಬೇತಿ ನಡೆಯಿತು. ಶಿಬಿರದಲ್ಲಿ ವಿವಿಧ ಶಾಲೆಯ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮುಖ್ಯ ಶಿಕ್ಷಕರಾದ ಸೆನ್ ಸಾಯಿ ಟಿ.ಡಿ.ಜಾನ್ಸನ್, ಶಿಕ್ಷಕರಾದ ಸೆನ್ ಸಾಯಿ ಮೋಹನ್ ದಾಸ್ ಪ್ರಧಾನ ತರಬೇತಿ ನೀಡಿದ್ದರು.
ಸೆಂಪಾಯಿ ಸಿ.ಎಚ್.ಬಷೀರ್, ಸೆಂಪಾಯಿ ಹರಿಕೃಷ್ಣನ್, ಸೆಂಪಾಯಿ ಮನೀಷ್, ಸೆಂಪಾಯಿ ಆಕಾಶ್, ಸೆಂಪಾಯಿ ಸದೀನ್, ಸೆಂಪಾಯಿ ಪೂವಯ್ಯ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net