ಮಾಂದಲಪಟ್ಟಿ ಗಿರಿಧಾಮಕ್ಕೆನಿರ್ಮಿಸಲಾದ ರಸ್ತೆಯನ್ನು ಹೊದ್ದೂರು ಪಂಚಾಯತ್ ಮಾಜಿ ಅಧ್ಯಕ್ಷರೂ ಆದ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ಹಂಸ ಉದ್ಘಾಟಿಸಿದರು. ತೆನ್ನಿರ ಮೈನಾ, ಹೆಚ್.ಎಸ್. ಶಿವಕುಮಾರ್, ಎಂ.ಕೆ. ಭರತ್, ಹಂಚೆಟ್ಟಿರ ಮನು ಮುದ್ದಪ್ಪ, ಕೊಂಬಾರನ ಗಣಪತಿ, ಜಾನ್ಸನ್ ಪಿಂಟೋ ಮತ್ತಿತರರು ಇದ್ದರು.
ಮಾಂದಲಪಟ್ಟಿ ಗಿರಿಧಾಮಕ್ಕೆ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ರಸ್ತೆಯನ್ನು ಹೊದ್ದೂರು ಪಂಚಾಯತ್ ಮಾಜಿ ಅಧ್ಯಕ್ಷರೂ ಆದ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ಹಂಸ ಸ್ಥಳೀಯ ಮುಖಂಡರೊAದಿಗೆ ಶುಕ್ರವಾರ ಉದ್ಘಾಟನೆ ಮಾಡಿದರು. ಈ ಸಂದರ್ಭ ಮಾತನಾಡಿದ ಅವರು
ಸ್ಥಳೀಯ ನಿವಾಸಿಗಳು, ಗ್ರಾಮಸ್ಥರು ಹಾಗೂ ಬಾಡಿಗೆ ಜೀಪ್ ಮಾಲೀಕರ ಕೋರಿಕೆ ಮೇರೆಗೆ ಶಾಸಕ ಡಾ. ಮಂತರ್ ಗೌಡ ಈ ರಸ್ತೆಯನ್ನು ನಿರ್ಮಾಣ ಮಾಡಲು ಅವಕಾಶ ಮಾಡಿದ್ದು ನಿಯಮ ಬಾಹಿರ ಚಟುವಟಿಕೆಗಳು ಪ್ರವಾಸಿ ತಾಣದಲ್ಲಿ ನಡೆಯದಂತೆ ಸ್ಥಳೀಯರು ಎಚ್ಚರ ವಹಿಸಬೇಕು.
ಕಾಲೂರು ಗ್ರಾಮಕ್ಕೆ ಬಸ್ ಬರುವ ರಸ್ತೆ ಹದಗೆಟ್ಟಿದ್ದು ತಕ್ಷಣಕ್ಕೆ ತಾತ್ಕಾಲಿಕ ದುರಸ್ತಿ ಕಾರ್ಯಕ್ಕೆ ಡಾ. ಮಂತರ್ ಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಮಾತನಾಡಿ ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣಕ್ಕೆ ಬಾಡಿಗೆ ಜೀಪ್ ಚಾಲನೆ ಮಾಡಿ ಬದುಕು ಕಟ್ಟಿಕೊಂಡಿರುವ ನೂರಾರು ಕುಟುಂಬಗಳ ಹಿತ ದೃಷ್ಟಿಯಿಂದ ಮತ್ತು ಪ್ರವಾಸೋದ್ಯಮಕ್ಕೆ ಪೂರಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಶಾಸಕ ಡಾ. ಮಂತರ್ ಗೌಡ ಕೊಡಗು ಫಾರೆಸ್ಟ್ ಫೌಂಡೇಶನ್ ನಿಧಿ ಮತ್ತು ರಾಜ್ಯ ಸರ್ಕಾರದ ವನ್ಯಜೀವಿ ವಿಭಾಗದ ಅನುದಾನ ಬಳಸಿಕೊಂಡು ರಸ್ತೆ ನಿರ್ಮಿಸಲು ಸೂಚಿಸಿದ್ದರು. 4 ತಿಂಗಳುಗಳ ಕಾಲ ಕಾಮಗಾರಿ ನಡೆಸಿ ಈಗ ಉದ್ಘಾಟಿಸಲಾಗಿದೆ. ಇನ್ನು ಹದಿನೈದು ದಿನಗಳಲ್ಲಿ ಶಾಸಕರು
ಕಾಲೂರು ಗ್ರಾಮಕ್ಕೆ ಬಂದು ಗ್ರಾಮಸ್ಥರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಮಡಿಕೇರಿ ವಲಯ ಅರಣ್ಯ ಅಧಿಕಾರಿ ಹೆಚ್.ಎಸ್. ಶಿವಕುಮಾರ್, ಉಪ ವಲಯ ಅರಣ್ಯಾಧಿಕಾರಿ ಎಂ.ಕೆ. ಭರತ್,