ಶಿಸ್ತು, ಸೌಹಾರ್ದತೆ ಕಾಪಾಡಿಕೊಳ್ಳಿ

ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಆವೃತ್ತಿ 1ರ 12 ತಂಡಗಳ ಲೋಗೋ ಹಾಗೂ ಆಟಗಾರರ ಅರ್ಜಿ ಅನಾವರಣಗೊಳಿಸಲಾಯಿತು. ಜಿಮ್ಮಿ ಸಿಕ್ವೇರಾ, ಶ್ಯಾಮ್ ಜೋಸೆಫ್, ಕುರಿಯಾಕೋಸ್ ಇತರರಿದ್ದರು.
ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಆವೃತ್ತಿ 1ರ 12 ತಂಡಗಳ ಲೋಗೋ ಹಾಗೂ ಆಟಗಾರರ ಅರ್ಜಿ ಅನಾವರಣಗೊಳಿಸಲಾಯಿತು. ಜಿಮ್ಮಿ ಸಿಕ್ವೇರಾ, ಶ್ಯಾಮ್ ಜೋಸೆಫ್, ಕುರಿಯಾಕೋಸ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆಟಗಾರರಿಗೆ ಸಮಾಜ ಸೇವಕ ಶ್ಯಾಮ್ ಜೋಸೆಫ್ ಕಿವಿಮಾತು
ಸಿದ್ದಾಪುರ: ಸಿಜೆ ಬಿಲ್ಡ್‌ವೇರ್ ಪ್ರಸ್ತುತಿಯಲ್ಲಿ ಐಪಿಎಲ್ ಮಾದರಿಯಲ್ಲಿ ಆಯೋಜಿಸಲಿರುವ ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಆವೃತ್ತಿ 1ರ 12 ತಂಡಗಳ ಲೋಗೋ ಹಾಗೂ ಆಟಗಾರರ ಅರ್ಜಿ ಅನಾವರಣ ಕಾರ್ಯಕ್ರಮವು ಖಾಸಗಿ ಸಭಾಂಗಣದಲ್ಲಿ ಇತೀಚೆಗೆ ನಡೆಯಿತು.
ಏಪ್ರಿಲ್ 10, 11 ಮತ್ತು 12ರಂದು ಸಿದ್ದಾಪುರದ ಪ್ರೌಢಶಾಲಾ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದ್ದು, ಕೊಡಗು ಜಿಲ್ಲೆಯ ರೋಮನ್ ಕ್ಯಾಥೋಲಿಕ್ ಕ್ರಿಶ್ಚಿಯನ್ ಯುವಕರಿಗೆ ಕ್ರೀಡಾ ವೇದಿಕೆ ಒದಗಿಸುವ ಉದ್ದೇಶದಿಂದ ಲೀಗ್ ಆಯೋಜಿಸಲಾಗಿದೆ.
ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಆಯುಕ್ತ ಜಿಮ್ಮಿ ಸಿಕ್ವೇರಾ ಮಾತನಾಡಿ, ಕ್ರೀಡಾಭಿಮಾನಿಗಳಿಗೆ ಹೊಸ ಮಾದರಿಯ ಕ್ರೀಡಾ ಔತಣವಾಗಿ ಈ ಲೀಗ್ ರೂಪುಗೊಂಡಿದ್ದು, ರೋಮನ್ ಕ್ಯಾಥೋಲಿಕ್ ಯುವಕರು ಅರ್ಜಿ ಭರ್ತಿ ಮಾಡಿ ಹೆಸರು ನೋಂದಾಯಿಸಿಕೊಂಡು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಬೇಕು ಎಂದು ಹೇಳಿದರು.
ಸಮಾಜ ಸೇವಕ ಶ್ಯಾಮ್ ಜೋಸೆಫ್ ಮಾತನಾಡಿ, ಆಟಗಾರರು ಶಿಸ್ತು ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು. ಕ್ರಿಶ್ಚಿಯನ್ ಯುವಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಈ ಕೊಡಗು ರೋಮನ್ ಕ್ಯಾಥೋಲಿಕ್ ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್ ಕ್ರೀಡಾಸ್ಫೂರ್ತಿಯ ಜತೆಗೆ ಸಹೋದರತ್ವ ಮತ್ತು ಶಿಸ್ತನ್ನು ಬೆಳೆಸುವ ಉತ್ತಮ ಪ್ರಯತ್ನವಾಗಿದೆ ಎಂದು ಶ್ಲಾಘಿಸಿದರು.
ಹಿರಿಯ ಆಟಗಾರರಾದ ಹುಬರ್ಟ್ ಮಾಸ್ಟರ್, ಬಿಲ್ಟನ್, ವೈಜು ಹಾಗೂ ರಾಬರ್ಟ್ ಅವರು ಆಟಗಾರರ ಅರ್ಜಿಯನ್ನು ಅನಾವರಣಗೊಳಿಸಿದರು.
ಸಂತ ಜೋಸೆಫ್ ಸೇವಾ ಸಂಘ ಅಧ್ಯಕ್ಷ ಕುರಿಯಾಕೋಸ್, ಹಿರಿಯ ವಾಲಿಬಾಲ್ ಆಟಗಾರ ತೋಮಸ್, ಜಾನಪದ ಪರಿಷತ್ ವಿರಾಜಪೇಟೆ ತಾಲೂಕು ಅಧ್ಯಕ್ಷ ಟೋಮಿ ಥಾಮಸ್, ಮಾರ್ಗದರ್ಶಕರಾದ ಆಲ್ಬರ್ಟ್, ಸೇವಾ ಸಂಘದ ಸದಸ್ಯ ಡಾನ್ ಮ್ಯಾಕ್ಸ್ ಹಾಗೂ ಸಿಪಿಎಲ್ ಸಮಿತಿಯ ಸನಿಲ್, ಜೋಯ್, ಅಂಟೋನಿ ಸೇರಿದಂತೆ ಎಸ್‌ಜೆಸಿ ಕ್ರಿಕೆಟರ್ಸ್ ಯುವಕರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net