ಮಡಿಕೇರಿ ನಗರಸಭೆಯಲ್ಲಿ 1.70 ಕೋಟಿ ಮೊತ್ತದ ಉಳಿತಾಯ ಬಜೆಟ್

ಮಡಿಕೇರಿ ನಗರಸಭೆಯ 2026-27ನೇ ಸಾಲಿನ ಬಜೆಟ್ ಅನ್ನು ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ ಮಂಡಿಸಿದರು. ಅಧ್ಯಕ್ಷೆ ಪಿ. ಕಲಾವತಿ, ಪೌರಾಯುಕ್ತ ಹೆಚ್.ಆರ್. ರಮೇಶ್ ಇದ್ದರು.
ಮಡಿಕೇರಿ ನಗರಸಭೆಯ 2026-27ನೇ ಸಾಲಿನ ಬಜೆಟ್ ಅನ್ನು ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ ಮಂಡಿಸಿದರು. ಅಧ್ಯಕ್ಷೆ ಪಿ. ಕಲಾವತಿ, ಪೌರಾಯುಕ್ತ ಹೆಚ್.ಆರ್. ರಮೇಶ್ ಇದ್ದರು.
Published on
ಮಡಿಕೇರಿ: ನಗರಸಭೆಯಲ್ಲಿ 2026-27ನೇ ಸಾಲಿಗೆ 51,87,34,664 ಕೋಟಿ ಮೊತ್ತದ ಬಜೆಟ್ ಮಂಡಿಸಲಾಯಿತು. ಆರಂಭಿಕ ಶಿಲ್ಕು 13,30,64,164 ಆಗಿದ್ದು, ಸರ್ಕಾರದ ಅನುದಾನ ಸೇರಿದಂತೆ ಒಟ್ಟು 38,56,70,500 ರೂ. ಗಳ ಆದಾಯ ಮೂಲವನ್ನು ನಿರೀಕ್ಷಿಸಲಾಗಿದೆ. 50,16,70,500 ರೂ. ಖರ್ಚು ಅಂದಾಜಿಸಲಾಗಿದ್ದು, 1,70,64,164 ರೂ. ಉಳಿತಾವನ್ನು ಅಂದಾಜಿಸಲಾಗಿದೆ.
ಆದಾಯದ ಪೈಕಿ ಎಸ್‌ಎಫ್‌ಸಿ ವೇತನ ಅನುದಾನ 5 ಕೋಟಿ ರೂ., ಎಸ್‌ಎಫ್‌ಸಿ ವಿದ್ಯುತ್ ಅನುದಾನ 4.22 ಕೋಟಿ ರೂ, 15 ಮತ್ತು 16ನೇ ಹಣಕಾಸು ಯೋಜನೆ ಅನುದಾನ 3.32 ಕೊಟಿ ರೂ., ವಾಣಿಜ್ಯ ಮಳಿಗೆ ಬಾಡಿಗೆ ಮತ್ತು ದಂಡ 1.18 ಕೋಟಿ ರೂ., ನೀರಿನ ತೆರಿಗೆ ಶುಲ್ಕಗಳು, ನೀರು ಸರಬರಾಜು ಸಂಪರ್ಕ ಶುಲ್ಕಗಳು ಮತ್ತು ದಂಡ 1.26 ಕೋಟಿ ರೂ., ಗುತ್ತಿಗೆದಾರರು, ಸರಬರಾಜುದಾರರಿಂದ ಠೇವಣಿಗಳು, ಬಾಡಿಗೆ ಠೇವಣಿಗಳಿಂದ 1.03 ಕೋಟಿ ರೂ. ಗುತ್ತಿಗೆದಾರರು, ನೌಕರರಿಂದ ಕಡಿತವಾದ ತೆರಿಗೆ ಮತ್ತು ವಸೂಲಾತಿಯಿಂದ 1.27 ಕೋಟಿ ರೂ. ಹಾಗೂ ಆಸ್ತಿ ತೆರಿಗೆ, ಕಟ್ಟಡ ಪರವಾನಗಿಯಲ್ಲಿ ಸಂಗ್ರಹಿಸಿದ ಉಪಕರಗಳು 1.42 ಕೋಟಿ ರೂ ಸೇರಿದಂತೆ ನಗರಸಭೆಯ ವಿವಿಧ ಮೂಲಗಳಿಂದ ಒಟ್ಟು 31.685 ಕೋಟಿ ರೂ. ಆದಾಯ ನಿರೀಕ್ಷೆ ಮಾಡಲಾಗಿದೆ.
ವಾಣಿಜ್ಯ ಮಳಿಗೆ ನಿರ್ಮಾಣ ಕಾಮಗಾರಿಗೆ 1.50 ಕೋಟಿ ರೂ., ತಡೆಗೋಡೆ ನಿರ್ಮಾಣ, ರಸ್ತೆ, ಪಾದಚಾರಿ ರಸ್ತೆ, ಚರಂಡಿ ಅಭಿವೃದ್ಧಿಗೆ 3.75 ಕೋಟಿ ರೂ., ವಾರ್ಡ್ ಅಭಿವೃದ್ಧಿ 2 ಕೋಟಿ ರೂ., ಪಾವತಿಸಿ ಉಪಯೋಗಿಸುವ ಶೌಚಗೃಹ ನಿರ್ಮಾಣಕ್ಕೆ 2.25 ಕೋಟಿ ರೂ., ನೈರ್ಮಲ್ಯ ವಾಹನ ಖರೀದಿಗೆ 1 ಕೋಟಿ ರೂ., ನೀರು ಸರಬರಾಜು ಯಂತ್ರೋಕರಣಗಳ ಖರೀದಿಗೆ 1.25 ಕೋಟಿ ರೂ., ಕೆರೆ ಅಭಿವೃದ್ಧಿ ಕಾಮಗಾರಿಗೆ 1 ಕೋಟಿ ರೂ., ಅಧಿಕಾರಿ, ಸಿಬ್ಬಂದಿ ವೇತನ ಮತ್ತು ಭತ್ಯೆಗೆ 5 ಕೋಟಿ ರೂ., ಸೇರಿದಂತೆ 43.285 ಕೋಟಿ ರೂ.ಗಳ ಖರ್ಚು ನಿರೀಕ್ಷಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net