ಮಡಿಕೇರಿಯ ಕೊಡಗು ಗೌಡ ಸಮಾಜದ ಮೂರು ವರ್ಷಗಳ ಅವಧಿಯ ಆಡಳಿತ ಮಂಡಳಿಗೆ 15 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗುರುವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಈ ಆಯ್ಕೆ ಮಾಡಲಾಗಿದೆ. ದಂಬೆಕೋಡಿ ಆನಂದ, ಸೂರ್ತಲೆ ಸೋಮಣ್ಣ, ಹುದೇರಿ ರಾಜೇಂದ್ರ, ಕೊಲ್ಯದ ಗಿರೀಶ್, ಮಂದ್ರಿರ ತೇಜಸ್, ಪುಳಕಂಡ ಸಂದೀಪ್, ಕೊಂಬನ ಪ್ರವೀಣ್, ಪೊನ್ನಚ್ಚನ ಮಧು, ತೋಟಂಬೈಲು ಅನಂತ ಕುಮಾರ್, ಪೈಕೇರ ಮನೋಹರ ಮಾದಪ್ಪ, ಕಾಳೇರಮ್ಮನ ನಂದಕುಮಾರ್, ಆಮೆ ಸೀತಾರಾಮ್, ಪೇರಿಯನ ಘನ ಶ್ಯಾಮ್, ಮಹಿಳಾ ತಂಡದಿAದ ಚೊಕ್ಕಾಡಿ ಪ್ರೇಮ ರಾಘವಯ್ಯ ಹಾಗೂ ಮೂಲೆಮಜಲು ಅಮಿತಾ ನಿರ್ದೇಶಕರಾಗಿ ಆಯ್ಕೆಯಾದರು.