ಆನ್‌ಲೈನ್ ವಂಚಕರು ಜನಸಾಮಾನ್ಯರ ವೈಯಕ್ತಿಕ ಮಾಹಿತಿ ಪಡೆದು, ಬ್ಯಾಂಕ್ ವಿವರ ಸಂಗ್ರಹಿಸಿ ಕೊಟ್ಯಂತರ ರೂ. ಮೋಸ ಮಾಡುತ್ತಾರೆ. ಆನ್‌ಲೈನ್ ಬೆದರಿಕೆ, ಅಪರಾಧ, ಸೈಬರ್ ಪೀಡನೆ, ಆನ್‌ಲೈನ್ ಆಟಗಳು, ಇ-ಮೇಲ್ ವಂಚನೆ, ಡೇಟಾ ಹ್ಯಾಕ್, ಸಾಮಾಜಿಕ ಜಾಲತಾಣಗಳ ಖಾತೆಗಳ ಅಸುರಕ್ಷತೆ, ಹಣ ಕದಿಯುವುದು, ವೈಯಕ್ತಿಕ ಮಾಹಿತಿ ಕದ್ದು ಕಿರುಕುಳ ನೀಡುವುದು ಎಲ್ಲವೂ ಸೈಬರ್ ಅಪರಾಧವೇ ಆಗಿದ್ದು ಇಂಥ 429 ಪ್ರಕರಣಗಳು ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ ದಾಖಲಾಗಿದ್ದು, ಕೋಟ್ಯಂತರ ರೂ. ವಂಚಕರ ಪಾಲಾಗಿದೆ.