ಫುಟ್‌ಬಾಲ್ ಪಂದ್ಯದಲ್ಲಿ ಮಧು ತಂಡ ಚಾಂಪಿಯನ್

 ಸೋಮವಾರಪೇಟೆ ಸಮೀಪದ ತಾಕೇರಿ ಗ್ರಾಮದ ಟೀಂ ತಾಕೇರಿ ವತಿಯಿಂದ ನಡೆದ ಪಂಚಾಯಿತಿ ಮಟ್ಟದ ಫುಟ್‌ಬಾಲ್ ಪಂದ್ಯಾಟದಲ್ಲಿ ಮಧು ತಂಡ ಪ್ರಥಮ ಸ್ಥಾನಗಳಿಸಿತು.
ಸೋಮವಾರಪೇಟೆ ಸಮೀಪದ ತಾಕೇರಿ ಗ್ರಾಮದ ಟೀಂ ತಾಕೇರಿ ವತಿಯಿಂದ ನಡೆದ ಪಂಚಾಯಿತಿ ಮಟ್ಟದ ಫುಟ್‌ಬಾಲ್ ಪಂದ್ಯಾಟದಲ್ಲಿ ಮಧು ತಂಡ ಪ್ರಥಮ ಸ್ಥಾನಗಳಿಸಿತು.
Published on
ಸೋಮವಾರಪೇಟೆ: ತಾಕೇರಿ ಗ್ರಾಮದ ಟೀಂ ತಾಕೇರಿ ವತಿಯಿಂದ ಭಾನುವಾರ ನಡೆದ ಮೂರನೇ ವರ್ಷದ ಪಂಚಾಯಿತಿ ಮಟ್ಟದ ಫುಟ್‌ಬಾಲ್ ಪಂದ್ಯದಲ್ಲಿ ಮಧು ತಂಡ ಪ್ರಥಮ ಸ್ಥಾನ ಗಳಿಸಿ ಚಾಂಪಿಯನ್ ಆಗಿ ಪ್ರಥಮ ಬಹುಮಾನವಾಗಿ 40 ಕೆ.ಜಿ ತೂಕದ ಟಗರು ಹಾಗೂ ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಕೀರ್ತನ್ ತಂಡ ದ್ವಿತೀಯ ಸ್ಥಾನ ಗಳಿಸಿ, 30 ಕೆ.ಜಿ ತೂಕದ ಕುರಿ ಹಾಗೂ ಟ್ರೋಫಿ ನೀಡಲಾಯಿತು. ಉತ್ತಮ ಆಟಗಾರರಿಗೆ ನಾಟಿ ಕೋಳಿ ಬಹುಮಾನವಾಗಿ ನೀಡಲಾಯಿತು. ಅತಿ ಹೆಚ್ಚು ಗೋಲ್ ಗಳಿಸಿದ ಮಲ್ಲಿಜಿರ ಪ್ರವೀಣ್, ಉತ್ತಮ ಆಲ್ ರೌಂಡರ್ ಮಧು, ಬೆಸ್ಟ್ ಪ್ಲೇಯರ್ ಕೀರ್ತನ್, ಎಮಜಿರ್ಂಗ್ ಪ್ಲೇಯರ್ ಮೇಘನ್ ಅವರನ್ನು ಗೌರವಿಸಲಾಯಿತು. ಪಂದ್ಯದಲ್ಲಿ 8 ತಂಡಗಳು ಭಾಗವಹಿಸಿದ್ದವು.
ಶಾಸಕ ಡಾ. ಮಂತರ್ ಗೌಡ ಕ್ರೀಡಾಕೂಟದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಯುವಕರು ಒಗ್ಗೂಡಲು ಕ್ರೀಡೆ ಸಹಕಾರಿಯಾಗಿದೆ. ಟೀಂ ತಾಕೇರಿ ತಂಡ ಕಳೆದ ಮೂರು ವರ್ಷಗಳಿಂದ ಅಂತಹ ಕೆಲಸ ಮಾಡಿಕೊಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮ ಮಾಡುವಂತಾಗಲಿ ಎಂದು ಆಶಿಸಿದರು.
ಉದ್ಯಮಿ ಎಡಿಕೇರಿ ಪ್ರಸನ್ನ ಮಾತನಾಡಿ, ಹಳ್ಳಿಗಾಡಿನಲ್ಲಿ ಎಲ್ಲರೂ ಒಗ್ಗೂಡುವ ಸಲುವಾಗಿ ಈ ರೀತಿಯ ಕ್ರೀಡಾಕೂಟ ಆಯೋಜನೆ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ತಾಕೇರಿ ಗ್ರಾಮದ ಅಧ್ಯಕ್ಷ ಎಸ್.ಪಿ.ಪೊನ್ನಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಮಿಥುನ್ ಹಾನಗಲ್ ಹಾಗೂ ಟೀಂ ತಾಕೇರಿಯ ಸದಸ್ಯರು ಪಾಲ್ಗೊಂಡಿದ್ದರು.
ತಾಕೇರಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 10ಕ್ಕೂ ಹೆಚ್ಚು ವಷರ್ ಸೇವೆ ಸಲ್ಲಿಸಿದ ಶಿಕ್ಷಕ ರಮೇಶ್ ಹಾಗೂ ವನಜಾ ಅವರಿಗೆ ಟೀಂ ತಾಕೇರಿ ವತಿಯಿಂದ ಗೌರವ ಸಲ್ಲಿಸಲಾಯಿತು. ತೀರ್ಪುಗಾರರಾಗಿ ಪವನ್ ಹಾಗೂ ಅಮೃತ್ ತಾಕೇರಿ ಕಾರ್ಯ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net