ಮಾಚಿದೇವ 12ನೇ ಶತಮಾನದ ಶ್ರೇಷ್ಠ ವಚನಕಾರ

ಹೆಬ್ಬಾಲೆಯ ಸಂಯುಕ್ತ ಪ್ರೌಢಶಾಲೆಯಲಿ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ  ಎಚ್.ವಿ.ಶಿವಪ್ಪ ,  ರಾಜಶೇಖರ್ , ಡಾ.ಜಮೀರ್ ಅಹಮದ್ ,ಮೆ.ನಾ.ವೆಂಕಟನಾಯಕ್,  ಕೆ.ಎಸ್.ಮೂರ್ತಿ ,ಹೆಬ್ಬಾಲೆ  ಎಂ.ಕೆ.ವಿಜಯಕುಮಾರ್,  ಕವಿತಾ ಪುಟ್ಟೇಗೌಡ ಮತ್ತಿತರರಿದ್ದರು.
ಹೆಬ್ಬಾಲೆಯ ಸಂಯುಕ್ತ ಪ್ರೌಢಶಾಲೆಯಲಿ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಎಚ್.ವಿ.ಶಿವಪ್ಪ , ರಾಜಶೇಖರ್ , ಡಾ.ಜಮೀರ್ ಅಹಮದ್ ,ಮೆ.ನಾ.ವೆಂಕಟನಾಯಕ್, ಕೆ.ಎಸ್.ಮೂರ್ತಿ ,ಹೆಬ್ಬಾಲೆ ಎಂ.ಕೆ.ವಿಜಯಕುಮಾರ್, ಕವಿತಾ ಪುಟ್ಟೇಗೌಡ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕನ್ನಡ ಉಪನ್ಯಾಸಕ ಡಾ.ಜಮೀರ್ ಅಹಮದ್ ಅಭಿಮತ
ಕುಶಾಲನಗರ: ಅರಸುತನ ಮೇಲಲ್ಲ, ಅಗಸತನ ಕೀಳಲ್ಲ. ಅವೆರಡೂ ಒಂದೇ ಎಂದು ಸಾರಿದ ಹನ್ನೆರಡನೆಯ ಶತಮಾನದ ಶ್ರೇಷ್ಠ ವಚನಕಾರ ಮಡಿವಾಳ ಮಾಚಿದೇವ ಎಂದು ಕೊಡಗು ವಿಶ್ವವಿದ್ಯಾನಿಲಯದ ಕನ್ನಡ ಉಪನ್ಯಾಸಕ ಡಾ.ಜಮೀರ್ ಅಹಮದ್ ಹೇಳಿದರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಹೆಬ್ಬಾಲೆಯ ಸಂಯುಕ್ತ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಲ್ಯಾಣದಲ್ಲಿ ಶಿವ ಭಕ್ತರು ಹಾಗೂ ಶರಣರ ಬಟ್ಟೆಗಳನ್ನು ಶುಚಿ ಮಾಡುವ ಶ್ರೇಷ್ಠ ಕಾಯಕದಲ್ಲಿ ನಿರತರಾಗಿದ್ದ ಮಾಚಿದೇವರು, ದೈವಿಕ, ಐಚ್ಛಿಕ, ತಾರತಮ್ಯ ರಹಿತ, ದಾಸೋಹ ಸಹಿತ ಕಾಯಕದಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡ ನೈತಿಕ ಮತ್ತು ವೈಚಾರಿಕ ಮೌಲ್ಯಗಳ ಮೂಲಕ ಅಭಿವ್ಯಕ್ತಿ ಪಡೆದ ಶ್ರೇಷ್ಠ ಶರಣರಾಗಿದ್ದರು. ಕಾಯಕ ಮತ್ತು ದಾಸೋಹಗಳೆಂಬ ಆರ್ಥಿಕ ಸಿದ್ಧಾಂತಗಳನ್ನು ರೂಪಿಸಿದವರು ಹನ್ನೆರಡನೇ ಶತಮಾನದ ವಚನಕಾರರು ಎಂದು ಡಾ.ಜಮೀರ್ ಅಹಮದ್ ವಿಶ್ಲೇಷಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ಮೆ.ನಾ.ವೆಂಕಟನಾಯಕ್ ಮಾತನಾಡಿ, ವಚನ ಸಾಹಿತ್ಯ, ಯಂತ್ರಗಳ ಪ್ರಯೋಗ ಶಾಲೆಯಲ್ಲಿ ಪರೀಕ್ಷೆಗೆ ಒಳಪಟ್ಟ ವಿಜ್ಞಾನವಲ್ಲ. ಅದರ ಬುನಾದಿ ಇರುವುದೇ ಅಪ್ಪಟ ವೈಜ್ಞಾನಿಕತೆ ಮತ್ತು ವೈಚಾರಿಕತೆಯಲ್ಲಿ ಎಂದರು.
ವಿದ್ಯಾರ್ಥಿಗಳು ಹಾಗೂ ಯುವ ಜನಾಂಗ ವಚನ ಸಾಹಿತ್ಯವನ್ನು ಅಧ್ಯಯನ ಮಾಡಿ ಅನುಸರಿಸುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಕರೆಕೊಟ್ಟರು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ವಿ.ಶಿವಪ್ಪ, ಹನ್ನೆರಡನೇ ಶತಮಾನದ ಮಹಾ ಶರಣ ಬಸವಣ್ಣನವರು ಲೋಕಕ್ಕೆ ನೀಡಿದ ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಎಂಬ ಸಪ್ತ ಸೂತ್ರಗಳ ಸಂವಿಧಾನವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅತ್ಯವಶ್ಯವಾಗಿ ಅಳವಡಿಸುವ ಮೂಲಕ ಸತ್ಯ, ನ್ಯಾಯ ನೀತಿಯ ಬದುಕು ಕಟ್ಟಲು ಕರೆ ಕೊಟ್ಟರು.
ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ರಾಜಶೇಖರ್ ,ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಮೂರ್ತಿ ,ಹೆಬ್ಬಾಲೆ ಪ. ಪೂ. ಕಾಲೇಜಿನ ಪ್ರಾಂಶುಪಾಲ ಎಂ.ಕೆ.ವಿಜಯಕುಮಾರ್, ಸಾಹಿತಿ ಕವಿತಾ ಪುಟ್ಟೇಗೌಡ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಸವರಾಜಶೆಟ್ಟಿ, ಶಿಕ್ಷಕರಾದ ಲೋಕೇಶ್, ಸುಧಾಕರ್, ಭೋಜೇಗೌಡ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net