ಗಣೇಶೋತ್ಸವದ ಸದ್ದು ಹೆಚ್ಚಿಸಿದ ಮೈಕ್ ಧ್ವನಿ

ಗೌರಿ-ಗಣೇಶೋತ್ಸವ ಸಂಬAಧ ಪೊಲೀಸ್ ಇಲಾಖೆ ವತಿಯಿಂದ ವಿರಾಜಪೇಟೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಗಣೇಶೋತ್ಸವ ಸಮಿತಿಗಳ ಪ್ರಮುಖರು ಪಾಲ್ಗೊಂಡಿದ್ದರು.
ಗೌರಿ-ಗಣೇಶೋತ್ಸವ ಸಂಬAಧ ಪೊಲೀಸ್ ಇಲಾಖೆ ವತಿಯಿಂದ ವಿರಾಜಪೇಟೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಗಣೇಶೋತ್ಸವ ಸಮಿತಿಗಳ ಪ್ರಮುಖರು ಪಾಲ್ಗೊಂಡಿದ್ದರು.
Published on
ಮಡಿಕೇರಿ:
ಗಣೇಶೋತ್ಸವ ಬರುತ್ತಿದ್ದಂತೆಯೇ ಧ್ವನಿವರ್ಧಕಗಳಲ್ಲಿ ಶಬ್ದದ ಮಿತಿ ಬಳಕೆ ವಿಷಯ ಮುನ್ನಲೆಗೆ ಬಂದಿದೆ. ಪೊಲೀಸ್ ಇಲಾಖೆ ಕೂಡ ಈಗಾಗಲೇ ಈ ಸಂಬAಧ ಇರುವ ನಿಯಮಗಳನ್ನು ಸ್ಪಷ್ಟಪಡಿಸಿದೆ. ಅನುಮತಿ ಪಡೆದೇ ಧ್ವನಿವರ್ಧಕಗಳನ್ನು ಬಳಸುವಂತೆ ಸೂಚಿಸಿವೆ. ಸುಪ್ರೀಂ ಕೋರ್ಟ್ ಮಾರ್ಗದರ್ಶಿ ಸೂತ್ರಗಳ ಪ್ರಕಾರ ರಾತ್ರಿ 10 ಗಂಟೆಯಿAದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಉಳಿದ ಸಮಯದಲ್ಲಿ ನಿರ್ದಿಷ್ಟ ಡೆಸಿಬಲ್ ಮಿತಿಯೊಳಗೆ ಮಾತ್ರ ಶಬ್ದ ಬಳಸಲು ಅವಕಾಶವಿದೆ. ಆದರೆ, ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಾಗ ಸಾರ್ವಜನಿಕರು ಹಾಗೂ ಗಣೇಶ ಮಂಡಳಿಗಳಿಗೆ ಅನಾವಶ್ಯಕ ತೊಂದರೆಯಾಗದAತೆ ಜನಸ್ನೇಹಿ ರೀತಿಯಲ್ಲಿ ಜಾರಿಗೆ ತರುವುದು ಪ್ರಮುಖ ಸವಾಲಾಗಿದೆ.
ಗಣೇಶೋತ್ಸವವನ್ನು ಪಾರಂಪರಿಕ ರೀತಿಯಲ್ಲಿ ಸಂಪ್ರದಾಯಗಳಿಗೆ ಅಡ್ಡಿ ಆಗದಂತೆ ಸಡಗರದಿಂದ ಆಚರಿಸುವುದರ ಜತೆಗೆ ವೃದ್ಧರು, ಮಕ್ಕಳು ಮತ್ತು ರೋಗಿಗಳ ಹಿತದೃಷ್ಟಿಯಿಂದ ಶಬ್ದ ಮಾಲಿನ್ಯವಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಪೊಲೀಸ್ ಇಲಾಖೆಯ ಸಹಕಾರ ಮತ್ತು ಸಾರ್ವಜನಿಕರ ಜವಾಬ್ದಾರಿಯುತ ನಡವಳಿಕೆಯಿಂದ ಮಾತ್ರ ಈ ನಿಯಮಗಳನ್ನು ಯಶಸ್ವಿಯಾಗಿ ಮತ್ತು ಜನಸ್ನೇಹಿಯಾಗಿ ಜಾರಿಗೆ ತರಲು ಸಾಧ್ಯ. ಈ ನಿಟ್ಟಿನಲ್ಲಿ ಪೊಲೀಸರು ಕೂಡ ಜನಸ್ನೇಹಿ ಗಣೇಶೋತ್ಸವ ಆಚರಣೆಗಾಗಿ ತಮ್ಮ ಕಡೆಯಿಂದ ಸಿದ್ಧತೆ ನಡೆಸಿದ್ದಾರೆ.
ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ಥಳೀಯ ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿ, ಶಬ್ದ ಮಿತಿಯ ನಿಯಮಗಳು ಹಾಗೂ ಶಿಕ್ಷೆಯ ಕುರಿತು ಜಾಗೃತಿ ಮೂಡಿಸುವ ಕೆಲಸ ನಡೆದಿದೆ. ಧ್ವನಿವರ್ಧಕ ಮತ್ತು ಸಭೆ-ಸಮಾರಂಭಗಳ ಅನುಮತಿಗೆ ಗಣೇಶ ಮಂಡಳಿಗಳು ಅಲೆಯುವುದನ್ನು ತಪ್ಪಿಸಲು ಪೊಲೀಸ್, ಸೆಸ್ಕ್ ಹಾಗೂ ಸ್ಥಳೀಯ ಸಂಸ್ಥೆಗಳಿAದ ಒಂದೇ ಸೂರಿನಡಿ ಸುಲಭವಾಗಿ ಅನುಮತಿ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಏಕಗವಾಕ್ಷಿ ವ್ಯವಸ್ಥೆಯನ್ನೂ ಮಾಡಲಾಗಿದೆ. ಗಣೇಶೋತ್ಸವ ಸಮಿತಿ, ಪೊಲೀಸರು ಹಾಗೂ ಸಾರ್ವಜನಿಕರ ಪರಸ್ಪರ ಸಹಕಾರದಿಂದ ಮಾತ್ರ ಉತ್ಸವಗಳು ಜನಸ್ನೆಹಿಯಾಗಿ ಆಚರಿಸಬಹುದಾಗಿದೆ.
"

ಗಣೇಶೋತ್ಸವಕ್ಕೆ ಒಂದು ನಿಯಮ. ಬೇರೆಯವರು ಆಚರಿಸುವ ಹಬ್ಬಗಳಿಗೆ ಮತ್ತೊಂದು ನಿಯಮ ಎನ್ನುವುದು ಇರಬಾರದು. ಧರ್ಮ ನೋಡಿ ಕಾನೂನು ಜಾರಿ ಮಾಡಬಾರದು. ಕಾನೂನು ಉಲ್ಲಂಘನೆ ಗಮನಿಸಬೇಕು. ನಿಯಮ ಜಾರಿ ಮಾಡುವುದು ತಪ್ಪಲ್ಲ. ಆದರೆ ಎಲ್ಲರಿಗೂ ಒಂದೇ ರೀತಿಯಲ್ಲಿ ಜಾರಿ ಮಾಡಿದಾಗ ಮಾತ್ರ ಸರ್ವರಿಗೂ ನ್ಯಾಯ ಸಿಕ್ಕಿದಂತಾಗುತ್ತದೆ.

"

ಮಾಲಿನ್ಯ ರಹಿತ ಹಾಗೂ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಲು ಶುದ್ಧ ಜೇಡಿಮಣ್ಣು ಅಥವಾ ಸೆಗಣಿಯಿಂದ ಮಾಡಿದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು. ಮನೆಯಲ್ಲಿಯೇ ವಿಸರ್ಜನೆ ಮಾಡಿದರೆ ಆ ಮಣ್ಣನ್ನು ಮನೆಯ ಗಿಡಗಳಿಗೆ ಅಥವಾ ಗಾರ್ಡನ್‌ಗಳಿಗೆ ಬಳಸಬಹುದು. ದೇವರಿಗೆ ಅರ್ಪಿಸಿದ ಹೂವು, ಹಣ್ಣು, ಸಿಪ್ಪೆ ಹಾಗೂ ಎಲೆಗಳನ್ನು ಇತರ ಕಸದೊಂದಿಗೆ ಬೆರೆಸದೆ ಪ್ರತ್ಯೇಕವಾಗಿ ಸಂಗ್ರಹಿಸಿ ಸಾವಯವ ಗೊಬ್ಬರ ಮಾಡಲು ಬಳಸಬಹುದಾಗಿದೆ. ಡಿಜೆಗಳಿಗೆ ಅವಕಾಶ ಕೊಡದೆ ಪಾರಂಪರಿಕವಾಗಿ ಮೂರ್ತಿ ವಿಸರ್ಜಿಸುವುದು ಒಳ್ಳೆಯದು.

"

ಗಣೇಶ ಉತ್ಸವ ಹತ್ತಿರ ಬರುತಿದ್ದಂತೆಯೇ ಪುಜಾ ಕಾರ್ಯಕ್ರಮ ಹೇಗೆ ನಡೆಸಬೇಕು ಎನ್ನುವುದಕ್ಕಿಂತ, ಡಿಜೆ ಶಬ್ದದ ವಿಷಯವೇ ಹೆಚ್ಚು ಪ್ರಚಲಿತಗೊಳ್ಳುತ್ತಿದೆ. ಇತ್ತೀಚಿಗೆ ಡಿಜೆ ಬಳಸದೆ ಇರಲು ಅನೇಕ ಸೇವಾ ಸಮಿತಿಯವರು ನಿರ್ಧಾರ ಮಾಡಿದ್ದಾರೆ. ಈ ರೀತಿ ಆಗಬಾರದು. ಒತ್ತಾಯವಾಗಿ ನಿಷೇದ ಹೇರುವುದು ಸರಿಯಲ್ಲ. ಸಮಿತಿಯವರಿಗೆ ಡಿಜೆ ಬಳಕೆಯಿಂದ ಆಗುವ ತೊಂದರೆ ಬಗ್ಗೆ ಮನವರಿಕೆ ಮಾಡಬೇಕು. ಸಮಿತಿಯವರು ಡಿಜೆ ಮಾಲೀಕರಿಗೆ ಮೊದಲೇ ಹಣ ಪಾವತಿಸಿ ಬುಕ್ ಮಾಡಿಕೊಂಡಿರುತ್ತಾರೆ. ಕೊನೆಯ ಗಳಿಗೆಯಲ್ಲಿ ನಿಷೇಧ ಹೇರಿದರೆ ಸಮಸ್ಯೆ ಎದುರಿಸುತ್ತಾರೆ.

"

ಎಷ್ಟು ವರ್ಷಗಳಿಂದ ಗಣೇಶೋತ್ಸವ, ನವರಾತ್ರಿ, ದಸರಾ ನಡೆಯುತ್ತಿದೆ ? ಆಗ ಯಾವ ಅಡೆತಡೆಯೂ ಇರಲಿಲ್ಲ. ಹಿಂದೂಗಳ ಹಬ್ಬ ಬಂದಾಗ ಮಾತ್ರ ಎಲ್ಲಿಯೂ ಇಲ್ಲದ ಕಾನೂನು, ಡೆಸಿಬಲ್ ಮೀಟರ್, ಸೈಲೆಂಟ್ ಝೋನ್ ಎಲ್ಲಾ ನೆನಪಿಗೆ ಬರುತ್ತದೆ. ವರ್ಷವಿಡೀ ಬೇರೆ ಕಡೆ ದೊಡ್ಡ ದೊಡ್ಡ ಸೌಂಡ್ ಹಾಕಿ ಕಾರ್ಯಕ್ರಮ ಮಾಡುವಾಗ ಕಾಣದ ಪೊಲೀಸ್ ಕಾನೂನು, ಗಣೇಶ ಕೂರಿಸಿದಾಗ ಮಾತ್ರ ಚಾಲನೆಗೆ ಬರುತ್ತದಾ? ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು. ನಾವು ಕಾನೂನು ವಿರೋಧಿಗಳಲ್ಲ. 10 ಗಂಟೆ ನಂತರ ಒಂದೆರಡು ಗಂಟೆ ರಿಯಾಯಿತಿ ಕೊಡುವುದರಲ್ಲಿ ಏನು ತಪ್ಪು? ಇದು ನಂಬಿಕೆಯ ಪ್ರಶ್ನೆ. ಹಬ್ಬದ ಸಮಯದಲ್ಲಿ ಮಾತ್ರ ಕಟ್ಟುನಿಟ್ಟು ತೋರಿಸಿ, ಉಳಿದ ಸಮಯದಲ್ಲಿ ಕಣ್ಣು ಮುಚ್ಚಿ ಕುಳಿತರೆ, ಜನರಿಗೆ ಅನುಮಾನ ಬರುವುದು ಸಹಜ.

"

ಹಿಂದಿನ ವರ್ಷದಲ್ಲಿ ಗಣಪತಿ ಸಮಿತಿಯಲ್ಲಿ ಸಣ್ಣ ಪುಟ್ಟ ಅಹಿತಕರ ಘಟನೆಗಳು ನಡೆದಿದ್ದು, ಈ ಬಾರಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ಅಹಿತಕರ ಘಟನೆ ನಡೆದಲ್ಲಿ ಆಯಾ ಗಣಪತಿ ಸಮಿತಿಯ ಆಯೋಜಕರೇ ಜವಾಬ್ದಾರರಾಗಿರುತ್ತಾರೆ. ಈ ವರ್ಷ ಏಕಗವಾಕ್ಷಿ ಸಮಿತಿಯನ್ನು ಜಿಲ್ಲೆಯಲ್ಲಿ ರಚಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ಪ್ರತಿಯೊಬ್ಬ ಆಯೋಜಕರು ಗೌರಿ ಗಣೇಶ ಹಬ್ಬದ ಸಂಬAಧ ಸರ್ಕಾರ ಹೊರಡಿಸಿದ ಎಸ್‌ಒಪಿ ಓದಿ ತಿಳಿದುಕೊಳ್ಳಬೇಕು. ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net