ಭಗವಾನ್ ಮಹಾವೀರರ ತತ್ವ, ಚಿಂತನೆ ಹಾಗೂ ಅಹಿಂಸೆ ಇಂದಿನ ಅಗತ್ಯ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ಭಗವಾನ್ ಮಹಾವೀರರ ಜಯಂತಿ ಕಾರ್ಯಕ್ರಮವನ್ನು ಜೈನ ಸಮಾಜದ ಜಿಲ್ಲಾಧ್ಯಕ್ಷÀ ಜೆ.ಎನ್. ಪುಷ್ಪರಾಜ್ ಉದ್ಘಾಟಿಸಿದರು. ಡಾ. ವಾಣಿಪುಷ್ಪರಾಜ್, ಜೆ.ಎನ್. ಚಂದ್ರಪ್ರಸಾದ್, ದೇವರಾಜು, ಕುಮಾರ್ ಮತ್ತಿತರರು ಈ ಸಂದರ್ಭ ಇದ್ದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ಭಗವಾನ್ ಮಹಾವೀರರ ಜಯಂತಿ ಕಾರ್ಯಕ್ರಮವನ್ನು ಜೈನ ಸಮಾಜದ ಜಿಲ್ಲಾಧ್ಯಕ್ಷÀ ಜೆ.ಎನ್. ಪುಷ್ಪರಾಜ್ ಉದ್ಘಾಟಿಸಿದರು. ಡಾ. ವಾಣಿಪುಷ್ಪರಾಜ್, ಜೆ.ಎನ್. ಚಂದ್ರಪ್ರಸಾದ್, ದೇವರಾಜು, ಕುಮಾರ್ ಮತ್ತಿತರರು ಈ ಸಂದರ್ಭ ಇದ್ದರು.
Published on
ಮಡಿಕೇರಿ:
ಭಗವಾನ್ ಮಹಾವೀರರ ತತ್ವ, ಚಿಂತನೆ ಹಾಗೂ ಅಹಿಂಸೆಯನ್ನು ಅಳವಡಿಸಿಕೊಂಡಲ್ಲಿ ಪ್ರಪಂಚದಲ್ಲಿ ಯಾವುದೇ ಯುದ್ಧ ನಡೆಯುವುದಿಲ್ಲ ಎಂದು ನಿವೃತ್ತ ಪ್ರಾಂಶುಪಾಲರಾದ ಡಾ. ವಾಣಿಪುಷ್ಪರಾಜ್ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಸೋಮವಾರ ನಡೆದ ಭಗವಾನ್ ಮಹಾವೀರರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಅಮೆರಿಕಾ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಿಂದ ವಿಶ್ವದಲ್ಲಿ ಒಂದು ರೀತಿ ಸಂದಿಗ್ಧ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಆರ್ಥಿಕ ಚಟುವಟಿಕೆ ಹಾಗೂ ಅಭಿವೃದ್ಧಿ ಕುಂಠಿತವಾಗುತ್ತಿದೆ. ಇಂದಿನ ವೇಗದ ಬದುಕಿನಲ್ಲಿ ಜಗತ್ತು ಒಂದು ಹಳ್ಳಿಯಾಗಿದ್ದು, ರಾಷ್ಟ್ರ ರಾಷ್ಟ್ರಗಳು ಒಂದಕ್ಕೊAದು ಅವಲಂಬಿತವಾಗಿ ಬದುಕು ನಡೆಸುವಂತಾಗಿದೆ. ಆದ್ದರಿಂದ ಇಡೀ ವಿಶ್ವದಲ್ಲಿ ಶಾಂತಿ ನೆಲೆಸುವಂತಾಗಬೇಕು. ಅದಕ್ಕೆ ಮಹಾವೀರರ ಸಂದೇಶಗಳು ಮತ್ತು ತತ್ವಗಳನ್ನು ಅಳವಡಿಸಿಕೊಂಡು ಮುನ್ನಡೆಯುವಂತಾಗಬೇಕು. ಭಗವಾನ್ ಮಹಾವೀರರು ಜೈನ ಧರ್ಮದ 24ನೇ ತೀರ್ಥಂಕರರಾಗಿದ್ದು, ಅಹಿಂಸೆ, ಸತ್ಯ, ಬ್ರಹ್ಮಚರ್ಯ, ಅಸ್ತೇಯ ಮತ್ತು ಅಪರಿಗ್ರಹ ಎಂಬ ಪಂಚ ಮಹಾವ್ರತಗಳನ್ನು ಭೋದಿಸಿದ್ದಾರೆ. ಕ್ರಿಸ್ತ ಪೂರ್ವ 6ನೇ ಶತಮಾನದಲ್ಲಿ ಜನಿಸಿದ ಭಗವಾನ್ ಮಹಾವೀರರು 12 ವರ್ಷಗಳ ಕಠಿಣ ತಪಸ್ಸಿನ ನಂತರ ಸರ್ವ ಜ್ಞಾನ ಪಡೆದು ಪ್ರತಿಯೊಂದು ಜೀವಿಗಳ ಉದ್ಧಾರಕ್ಕೆ ಅಹಿಂಸಾ ಮಾರ್ಗವನ್ನು ಬೋಧಿಸಿದರು. ಮಹಾವೀರರ ಬಾಲ್ಯದ ಹೆಸರು ವರ್ಧಮಾನ ಆಗಿದ್ದು, ಸತ್ಯದ ಹುಡುಕಾಟದಲ್ಲಿ 30ನೇ ವಯಸ್ಸಿನಲ್ಲಿ ಮನೆ ಬಿಟ್ಟು ಜೈನ ಧರ್ಮದ ತತ್ವ-ಮಾರ್ಗಗಳನ್ನು ಪಸರಿಸುತ್ತಾರೆ. ಅಹಿಂಸೆಯ ಪರಮಧರ್ಮ ಪ್ರತಿಯೊಂದು ಜೀವಿಯೂ ಮನುಷ್ಯ, ಪ್ರಾಣಿ, ಸಸ್ಯ, ಸಮಾನವಾದುದು ಮತ್ತು ಎಲ್ಲದರಲ್ಲೂ ಆತ್ಮವಿದೆ. ಆದ್ದರಿಂದ ಯಾವ ಪ್ರಾಣಿ, ಪಕ್ಷಿಗೂ ಹಿಂಸೆ ನೀಡಬಾರದು ಎಂದು ಮಹಾವೀರರು ಪ್ರತಿಪಾದಿಸಿದ್ದಾರೆ. ಪಂಚ ಮಹಾವ್ರತಗಳು ಸೇರಿದಂತೆ ರತ್ನತ್ರಯಗಳು, ಕರ್ಮ ಸಿದ್ಧಾಂತ, ಅನೇಕಾಂತವಾದ ಹೀಗೆ ಹಲವು ಭೋದನೆಗಳಲ್ಲಿ ವಿವರಿಸಿದ್ದಾರೆ. ಆ ನಿಟ್ಟಿನಲ್ಲಿ ಭಗವಾನ್ ಮಹಾವೀರರ ಸಂದೇಶಗಳು ಹಾಗೂ ಮಾರ್ಗದರ್ಶನವನ್ನು ಪಾಲಿಸುವಂತಾಗಬೇಕು ಎಂದು ಹೇಳಿದರು.
ಜೈನ ಸಮಾಜದ ಅಲ್ಪಸಂಖ್ಯಾತರ ವಿಭಾಗದ ಸದಸ್ಯ ಜೆ.ಎನ್. ಚಂದ್ರಪ್ರಸಾದ್ ಮಾತನಾಡಿ ಭಗವಾನ್ ಮಹಾವೀರರು ಜೈನಧರ್ಮದ 24ನೇ ಮತ್ತು ಕೊನೆಯ ತೀರ್ಥಂಕರರಾಗಿದ್ದು, ಮಹಾವೀರರು ಹಾಕಿಕೊಟ್ಟ ಸತ್ಯದ ಮಾರ್ಗದಲ್ಲಿ ನಡೆದರೆ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ. ಸಮಾಜದಲ್ಲಿ ಅಹಿಂಸೆ, ಶಾಂತಿ ಇರಬೇಕು. ಮೋಸ ಮತ್ತು ವಂಚನೆ ಇರಬಾರದು. ಯಾರಿಗೂ ನೋವು ಉಂಟಾಗದAತೆ ನಡೆದುಕೊಳ್ಳಬೇಕು. ಸತ್ಯ ಧರ್ಮದಲ್ಲಿ ನಂಬಿಕೆ ಇರಬೇಕು. ಆ ನಿಟ್ಟಿನಲ್ಲಿ ಭಗವಾನ್ ಮಹಾವೀರರ ಸಂದೇಶಗಳು ಇಂದಿಗೂ ಸಹ ಸಾರ್ವಕಾಲೀಕವಾಗಿವೆ ಎಂದರು.
ಜೈನ ಸಮಾಜದ ಜಿಲ್ಲಾಧ್ಯಕ್ಷÀ ಜೆ.ಎನ್. ಪುಷ್ಪರಾಜ್ ಮಾತನಾಡಿ ಭಗವಾನ್ ಮಹಾವೀರರ ಸಂದೇಶಗಳನ್ನು ಅಳವಡಿಸಿಕೊಂಡಲ್ಲಿ ಪ್ರಪಂಚದಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯ. ಆ ನಿಟ್ಟಿನಲ್ಲಿ ಭಗವಾನ್ ಮಹಾವೀರರ ಚಿಂತನೆ ಮತ್ತು ಮಾರ್ಗದರ್ಶನಗಳು ಪ್ರಸ್ತುತ ದಿನದಲ್ಲಿ ಹಿಂದಿಗಿAತ ಇಂದು ಅತ್ಯಗತ್ಯವಾಗಿದೆ ಎಂದರು.
ಭಗವಾನ್ ಮಹಾವೀರರ ಶಾಂತಿಮAತ್ರವನ್ನು ಇದೇ ಸಂದರ್ಭದಲ್ಲಿ ಪಠಿಸಲಾಯಿತು. ತಹಸೀಲ್ದಾರ್ ಕಚೇರಿಯ ಶಿರಸ್ತೇದಾರ್ ದೇವರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ, ಅನ್ವಿತ್ ಮತ್ತು ಸಮನ್ಯು, ವಿದ್ಯಾರ್ಥಿಗಳು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net