ಸುಂಟಿಕೊಪ್ಪ ಲಯನ್ಸ್ ಸಂಸ್ಥೆಯ ವತಿಯಿಂದ 80ನೇ ಸ್ವಾತಂತ್ರೊೃೀತ್ಸವವನ್ನು ಸಂತ ಅಂತೋಣಿ ಶಾಲೆಯಲ್ಲಿ ಆಚರಿಸಲಾಯಿತು.
ಲಯನ್ಸ್ ಅಧ್ಯಕ್ಷ ಎಸ್.ಜಿ.ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೊದಲಿಗೆ ಧ್ವಜಾರೋಹಣ ನೇರವೇರಿಸಿ ಶಾಲಾ ಮಕ್ಕಳಿಂದ ಗೌರವ ವಂದನೆ ಸ್ವೀಕರಿಸಿದರು. ಸುಂಟಿಕೊಪ್ಪ ಲಯನ್ಸ್ ಸಂಸ್ಥೆಯ ಸುವರ್ಣ ಮಹೋತ್ಸವದ ಅಂಗವಾಗಿ ಹಾಗೂ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಏರ್ಪಡಿಸಲಾಗಿದ್ದ ಸ್ಪರ್ಧೆಗಳಲ್ಲಿ ಮೊದಲ 3 ಸ್ಥಾನಗಳನ್ನು ಪಡೆದ ಮಕ್ಕಳಿಗೆ ಬಹುಮಾನಗಳನ್ನು ನೀಡಲಾಯಿತು. ಇದೇ ಸಂದರ್ಭದಲ್ಲಿ ಶಾಲೆಯ ವಿದ್ಯಾಭ್ಯಾಸ ಮಾಡುತ್ತಿರುವ 140 ಮಕ್ಕಳಿಗೆ ನೋಟ್ ಪುಸ್ತಕ, ಲೇಖನಿ ವಿತರಿಸಲಾಯಿತು.
ಶಾಲಾ ಮುಖ್ಯಶಿಕ್ಷಕರಾದ ಜೋವಿಟಾ ವಾಸ್, ಲಯನ್ಸ್ ಕಾರ್ಯದರ್ಶಿ ಗ್ಲೇನ್ ಮೇನೆಜೇಸ್, ಖಜಾಂಜಿ ಕೆ.ಪಿ.ಜಗನ್ನಾಥ್, ಹಿರಿಯ ಸದಸ್ಯರಾದ ಟಿ.ಕೆ.ರಾಜೀವ್, ಶಶಾಂಕ್, ಪ್ರೀತಮ್, ಪ್ರಮೋದ್ ರೈ, ಡಾ.ಯಶೋದರಾ ಪೂಜಾರಿ, ಎಚ್.ಬಿ.ಗಣೇಶ್, ಟಿ.ವಿ.ವಿಕೇಶ್ ಸೇರಿದಂತೆ ಇತರರಿದ್ದರು.