ಜನವರಿ 4ರಿಂದ 11ರವರೆಗೆ ಆಯೋಜಿಸಿರುವ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಲಿಖಿತ್ ಬೋಪಣ್ಣ ಪ್ರತಿನಿಧಿಸುತ್ತಿದ್ದಾರೆ. ಪೊನ್ನಂಪೇಟೆ ಸಮೀಪದ ಮತ್ತೂರು ಗ್ರಾಮದ ಗಾಂಡಂಗಡ ಉಮೇಶ್ ಮತ್ತು ರೀನಾ ದಂಪತಿ ಪುತ್ರನಾಗಿರುವ ಇವರು ಪ್ರಸ್ತುತ ಡಿವೈಇಎಸ್ ಬೆಂಗಳೂರಿಗೆ ಆಡುತ್ತಿದ್ದು, ಬೆಂಗಳೂರಿನ ಸುರಾನ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ.