ಕೊಡ್ಲಿಪೇಟೆ ಮಸ್ಜಿದುನ್ನೂರ್‌ನಲ್ಲಿ ರಂಜಾನ್ ಆಚರಣೆ

ಬ್ಯಾಡಗೊಟ್ಟ ಮಸ್ಜಿದುನ್ನೂರ್‌ನಲ್ಲಿ ಈದುಲ್ ಫಿತರ್ ಆಚರಿಸಲಾಯಿತು.
ಬ್ಯಾಡಗೊಟ್ಟ ಮಸ್ಜಿದುನ್ನೂರ್‌ನಲ್ಲಿ ಈದುಲ್ ಫಿತರ್ ಆಚರಿಸಲಾಯಿತು.
Published on
ಶನಿವಾರಸಂತೆ: ಕೊಡ್ಲಿಪೇಟೆ ಸಮೀಪದ ಹ್ಯಾಂಡ್‌ಪೋಸ್ಟ್‌ನಲ್ಲಿರುವ ಮಸ್ಜಿದುನ್ನೂರ್ ಮುಸ್ಲಿಮರು ಈದ್ ಉಲ್ ಫಿತರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಒಂದು ತಿಂಗಳು ರಂಜಾನ್ ವ್ರತ ಆಚರಿಸಿ ಗುರುವಾರ ಸಂಜೆ ಕೇರಳದಲ್ಲಿ ಚಂದ್ರ ದರ್ಶನವಾಗಿರುವ ಕುರಿತು ಖಾಜಿಗಳು ಪ್ರಕಟಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಮಸ್ಜಿದುನ್ನೂರ್ ಜಮಾಯಿಸಿದ ವಿಶ್ವಾಸಿಗಳು ಭಕ್ತಿಪೂರ್ಣವಾದ ಪ್ರಾರ್ಥನೆ ಸಲ್ಲಿಸಿ ಈದ್ ಆಚರಿಸಿದರು.
ಸಾಮೂಹಿಕ ಪ್ರಾರ್ಥನೆಯ ನಂತರ ಮಸ್ಜಿದ್ ಸಮೀಪದಲ್ಲಿರುವ ಖಬರ್‌ಸ್ಥಾನಕ್ಕೆ ತೆರಳಿ ಅಗಲಿದ ಹಿರಿಯರಿಗೆ ನಮನ ಸಲ್ಲಿಸಿದರು.
ಪ್ರಾರ್ಥನೆಗೆ ನೇತೃತ್ವ ವಹಿಸಿದ್ದ ಮುಖ್ಯ ಧರ್ಮಗುರುಗಳಾದ ಮಹಮ್ಮದ್ ಶಾಫಿ ಫೈಜಿ ಅವರು ದಿನದ ಮಹತ್ವದ ಕುರಿತು ಸಂದೇಶದ ಭಾಷಣ ಮಾಡಿದರು.
ಧರ್ಮಗುರುಗಳಾದ ರಜಾಕ್ ಫೈಜಿ, ಮುಸ್ತಫ ಮುಸ್ಲಿಯಾರ್, ಜಹೀರ್ ನಿಜಾಮಿ, ಸ್ವಾಲೀಹ್ ರಹ್ಮಾನಿ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಆಡಳಿತ ಮಂಡಳಿ ಅಧ್ಯಕ್ಷ ಸಿದ್ದಿಕ್ ಹಾಜಿ, ಉಪಾಧ್ಯಕ್ಷ ಸುಲೆಮಾನ್, ಸಲಹಾ ಸಮಿತಿ ಸದಸ್ಯರಾದ ಸುಲೆಮಾನ್, ಇಬ್ರಾಹಿಂ, ಅಬ್ದುಲ್ ಮಜೀದ್, ಕಾರ್ಯದರ್ಶಿ ಮಹಮ್ಮದ್ ಹನೀಫ್, ಖಜಾಂಚಿ ಬಾಸಿತ್, ಉಪ ಕಾರ್ಯದರ್ಶಿಗಳಾದ ಮುನೀರ್, ರಶೀದ್, ಸದಸ್ಯರಾದ ಸಾಬ್ಜಾನ್, ಜಕರೀಯಾ, ಹಮೀದ್, ಅಜೀಜ್, ಖಾದರ್ , ರಹೀಂ ಅಶ್ರಫ್, ಯೂತ್ ಸಮಿತಿ ಅಧ್ಯಕ್ಷ ಬಾಸಿತ್ ಹಾಜಿ ಮುಂತಾದವರಿದ್ದರು.
ಶನಿವಾರಸಂತೆ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಚಂದ್ರು ಮತ್ತು ಸಿಬ್ಬಂದಿ ಬಂದೋಬಸ್ತ್ ಕೈಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net