ಗ್ರಂಥಾಲಯಗಳನ್ನು ಹೆಚ್ಚು ಬಳಸಬೇಕು, ಉಳಿಸಬೇಕು

ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಉದ್ಘಾಟನೆ ಸಂದರ್ಭ ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ದೀಪಾ ಭಾಸ್ತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸುರೇಖಾ, ಸುಬ್ರಾಯ ಸಂಪಾಜೆ, ಹೆಚ್.ಟಿ. ಅನಿಲ್ ಮತ್ತಿತರರು ಇದ್ದರು.
ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಉದ್ಘಾಟನೆ ಸಂದರ್ಭ ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ದೀಪಾ ಭಾಸ್ತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸುರೇಖಾ, ಸುಬ್ರಾಯ ಸಂಪಾಜೆ, ಹೆಚ್.ಟಿ. ಅನಿಲ್ ಮತ್ತಿತರರು ಇದ್ದರು.
Published on
ಮಡಿಕೇರಿ:
ಭಾಷೆಯಂತೆಯೇ ಗ್ರಂಥಾಲಯಗಳನ್ನು ಹೆಚ್ಚು ಬಳಸುವ ಮೂಲಕ ಗ್ರಂಥಾಲಯಗಳನ್ನು ಉಳಿಸುವ ನಿಟ್ಟಿನಲ್ಲಿ ಸಾಹಿತ್ಯ ಪ್ರೇಮಿಗಳು ಕಾರ್ಯೋನ್ಮುಖವಾಗಬೇಕೆಂದು ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ದೀಪಾ ಭಾಸ್ತಿ ಹೇಳಿದರು. ಇಲ್ಲಿನ ಕೈಗಾರಿಕಾ ಬಡಾವಣೆಯಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಉದ್ಘಾಟನೆ ಸಂದರ್ಭ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮಡಿಕೇರಿಯಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯ ನನಗೆ ಎರಡನೇ ಮನೆಯಿದ್ದಂತೆ. ಗ್ರಂಥಾಲಯದ ಸಂಬAಧದಿAದಾಗಿ ಸಾಹಿತ್ಯ ಜ್ಞಾನ ಹೆಮ್ಮರವಾಯಿತು. ಓದುವ ಪ್ರವೃತ್ತಿ ಬೆಳೆಸುವಲ್ಲಿ ಅದರಲ್ಲಿಯೂ ಇಂಗ್ಲೀಷ್ ಪುಸ್ತಕ ಓದಲು ಮಡಿಕೇರಿಯ ಜಿಲ್ಲಾ ಕೇಂದ್ರ ಗ್ರಂಥಾಲಯ ಪ್ರೇರಣೆಯಾಯಿತು. ಸಪ್ತಾಹದ ಮೂಲಕ ಗ್ರಂಥಾಲಯಗಳಿಗೆ ಹೆಚ್ಚಿನ ಓದುಗರು ದೊರಕಲಿ. ಹೊಸ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ತರಿಸುವ ನಿಟ್ಟಿನಲ್ಲಿ ಸರ್ಕಾರ ಗ್ರಂಥಾಲಯಗಳಿಗೆ ಹೆಚ್ಚಿನ ಆರ್ಥಿಕ ಶಕ್ತಿ ನೀಡಲಿ ಎಂದರು.
ರಾಷ್ಟಿçÃಯ ಗ್ರಂಥಾಲಯ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಟಿ. ಅನಿಲ್ ಗ್ರಂಥಾಲಯಗಳು ಓದುಗರ ಪಾಲಿಗೆ ಆಲಯ ಇದ್ದಂತೆ. ಗ್ರಂಥಗಳ ಗುಡಿಯೇ ಆಗಿರುವ ಗ್ರಂಥಾಲಯಗಳು ಓದುಗರಲ್ಲಿ ಸಾಹಿತ್ಯಾಭಿರುಚಿ ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿಕೊಂಡು ಬಂದಿವೆ. ವಿದ್ಯಾರ್ಥಿಗಳಲ್ಲಿಯೂ ಓದುವ ಅಭ್ಯಾಸಕ್ಕೆ ಗ್ರಂಥಾಲಯಗಳು ಕಾರಣವಾಗಬೇಕು. ಗ್ರಂಥಾಲಯಗಳನ್ನು ಸದುಪಯೋಗಪಡಿಸಿಕೊಂಡು ಮಕ್ಕಳು ಸಾಹಿತ್ಯ ಕೃತಿಗಳು, ದಿನಪತ್ರಿಕೆಗಳನ್ನು ಓದುವಂತಾಗಬೇಕು. ಆಯಾ ಶಿಕ್ಷಣ ಸಂಸ್ಥೆಗಳು ಗ್ರಂಥಾಲಯ ಭೇಟಿಯಂಥ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಗ್ರಂಥಾಲಯದ ಮಹತ್ವ ತಿಳಿಸಿಕೊಡುವಂಥ ಕಾರ್ಯಕ್ರಮ ಆಯೋಜಿಸಬೇಕೆಂದರು.
ಸಾಹಿತಿ ಸುಬ್ರಾಯ ಸಂಪಾಜೆ ಮಾತನಾಡಿ ಮಡಿಕೇರಿಯಲ್ಲಿರುವ ಮಹಾತ್ಮಗಾಂಧಿ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಸಾಕಷ್ಟು ಮಹತ್ವವಿದೆ. ಇಲ್ಲಿನ ಗ್ರಂಥಾಲಯ ಸಿಬ್ಬಂದಿ ಸ್ನೇಹಪರರು ಎಂಬುದೇ ಹೆಚ್ಚು ಓದುಗರನ್ನು ಈ ಗ್ರಂಥಾಲಯ ಹೊಂದಲು ಕಾರಣವಾಗಿದೆ. ಗ್ರಂಥಾಲಯ ಸಪ್ತಾಹ ಮತ್ತಷ್ಟು ಓದುಗರನ್ನು ಪಡೆಯಲು ಕಾರಣವಾಗಲಿ ಎಂದು ಹಾರೈಸಿದರು.
ಜಿಲ್ಲಾ ಮುಖ್ಯ ಗ್ರಂಥಪಾಲಕಿ ಸುರೇಖಾ ಮಾತನಾಡಿ, ಗ್ರಂಥಾಲಯದಲ್ಲಿ ಪ್ರಸ್ತುತ 35 ಸಾವಿರ ಪುಸ್ತಕಗಳಿದ್ದು, 5500 ಓದುಗ ಸದಸ್ಯರಿದ್ದಾರೆ.
ಗ್ರಂಥಾಲಯ ಸಪ್ತಾಹದ ಸಂದರ್ಭ ಮತ್ತಷ್ಟು ಸದಸ್ಯರನ್ನು ನೋಂದಣಿ ಮಾಡಿಸಿಕೊಳ್ಳುವ ಗುರಿಯಿದೆ. ಜಿಲ್ಲಾ ಕೇಂದ್ರ ಗ್ರಂಥಾಲಯದ ಅಧೀನದಲ್ಲಿ ಜಿಲ್ಲೆಯಾದ್ಯಂತ 10 ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿವೆ. 1970 ರಿಂದ ಮಡಿಕೇರಿಯಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯ ಕಾರ್ಯನಿರ್ವಹಿಸುತ್ತಿದೆ ಎಂದರು.
ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಗ್ರಂಥಾಲಯ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಓದುಗರಾದ ದಕ್ಷಿಣಮೂರ್ತಿ ಅವರಿಗೆ ಸದಸ್ಯತ್ವ ಕಾರ್ಡ್ ನೀಡುವ ಮೂಲಕ ಗಣ್ಯರು ಚಾಲನೆ ನೀಡಿದರು. ಭಾರತದ ಗ್ರಂಥಾಲಯ ಚಳವಳಿಯ ಪಿತಾಮಹ ಪದ್ಮಶ್ರೀ ಡಾ. ಎಸ್. ಆರ್. ರಂಗನಾಥನ್ ಭಾವಚಿತ್ರಕ್ಕೆ ಗಣ್ಯರು ಪುಪ್ಪಾರ್ಚನೆ ಮಾಡಿದರು. ಅನೇಕ ಓದುಗರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸಹಾಯಕ ಗ್ರಂಥಪಾಲಕ ವಿಜಯ್ ನಾಗ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net