ಸಮಸ್ಯೆಗಳು ಬಂದಾಗ ಮಹಿಳೆಯರು ಸಂಘಟಿತರಾಗಲಿ

ಸುಂಟಿಕೊಪ್ಪದಲ್ಲಿ ಆಯೋಜಿಸಿದ್ದ ಮಹಿಳಾ ಗ್ರಾಮಸಭೆಯಲ್ಲಿ ಜಿಲ್ಲಾ ಮಕ್ಕಳ ವಿಶೇಷ ಪೊಲೀಸ್ ಘಟಕದ ಮಹಿಳಾ ಮುಖ್ಯ ಪೇದೆ ಎಂ.ಬಿ.ಸುಮತಿ ಮಾತನಾಡಿದರು. ವಿ.ಜಿ.ಲೋಕೇಶ್,  ರಫೀಕ್‌ಖಾನ್, ವಸಂತಿ, ಚಂದ್ರಕಲಾ ಇದ್ದರು.
ಸುಂಟಿಕೊಪ್ಪದಲ್ಲಿ ಆಯೋಜಿಸಿದ್ದ ಮಹಿಳಾ ಗ್ರಾಮಸಭೆಯಲ್ಲಿ ಜಿಲ್ಲಾ ಮಕ್ಕಳ ವಿಶೇಷ ಪೊಲೀಸ್ ಘಟಕದ ಮಹಿಳಾ ಮುಖ್ಯ ಪೇದೆ ಎಂ.ಬಿ.ಸುಮತಿ ಮಾತನಾಡಿದರು. ವಿ.ಜಿ.ಲೋಕೇಶ್, ರಫೀಕ್‌ಖಾನ್, ವಸಂತಿ, ಚಂದ್ರಕಲಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಹಿಳಾ ಮುಖ್ಯ ಪೇದೆ ಎಂ.ಬಿ.ಸುಮತಿ ಸಲಹೆ
ಸುಂಟಿಕೊಪ್ಪ: ಸಮಸ್ಯೆಗಳು ಕಂಡು ಬಂದಾಗ ಮಹಿಳೆಯರು ಸಂಘಟಿತರಾಗಿ ಹೋರಾಡಬೇಕೆಂದು ಜಿಲ್ಲಾ ಮಕ್ಕಳ ವಿಶೇಷ ಪೊಲೀಸ್ ಘಟಕದ ಮಹಿಳಾ ಮುಖ್ಯ ಪೇದೆ ಎಂ.ಬಿ.ಸುಮತಿ ತಿಳಿಸಿದರು.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ ಖಾಸಗಿ ಬಸ್ ನಿಲ್ಧಾಣದಲ್ಲಿ ಗುರುವಾರ ಆಯೋಜಿಸಿದ್ದ ಮಹಿಳಾ ಗ್ರಾಮ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಅವುಗಳನ್ನು ತಡೆಯುವ ನಿಟ್ಟಿನಲ್ಲಿ ಮಹಿಳೆಯರಿಗಾಗಿ ಸಾಕಷ್ಟು ಕಾನೂನುಗಳಿವೆ. ದೌರ್ಜನ್ಯ ಪ್ರಕರಣಗಳು ಸಂಭವಿಸಿದಾಗ ಮಹಿಳೆಯರು ಸುಮ್ಮನಿರದೆ ಸಂಘಟಿತರಾಗಿ ನ್ಯಾಯ ಪಡೆಯಬೇಕೆಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ತಮ್ಮ ವ್ಯಾಪ್ತಿಯಲ್ಲಿ ಸಮಸ್ಯೆ ಹಾಗೂ ಕುಂದು ಕೊರತೆಗಳ ಬಗ್ಗೆ ಮಾಹಿತಿ ನೀಡಿದ್ದಲ್ಲಿ ಸಮಸ್ಯೆ ಪರಿಹಾರಕ್ಕೆ ಪಂಚಾಯಿತಿ ಸಂಬಂಧಿಸಿದ ಇಲಾಖೆಗಳಿಗೆ ಪತ್ರ ವ್ಯವಹಾರ ನಡೆಸಿ ಪರಿಹಾರಕ್ಕೆ ಮುಂದಾಗುವುದಾಗಿ ತಿಳಿಸಿದರು.
ಪಿಡಿಒ ವಿ.ಜಿ.ಲೋಕೇಶ್, ಸದಸ್ಯರಾದ ರಫೀಕ್‌ಖಾನ್, ವಸಂತಿ, ಲೆಕ್ಕಪರಿಶೋಧಕಿ ಚಂದ್ರಕಲಾ, ಸಿಬ್ಬಂದಿ ಸಂಧ್ಯಾ, ಡಿ.ಎಂ.ಮಂಜುನಾಥ್, ಅಂಗನವಾಡಿ ಕಾರ್ಯಕರ್ತೆಯರು, ಗ್ರಾ.ಪಂ. ಸಂಜೀವಿನಿ ಒಕ್ಕೂಟದ ಸ್ವರ್ಣಾ, ಗೀತಾ, ಪದಾಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net