ಯುವಜನತೆ ಕೃಷಿಯತ್ತ ಗಮನಹರಿಸಲಿ

ಪಾಲಿಬೆಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಬಿ.ಡಿ. ಮುಕುಂದ ಅವರ ಗದ್ದೆ ಮನೆಯಲ್ಲಿ ಆಯೋಜಿಸಲಾಗಿದ್ದ ಕ್ರೀಡೋತ್ಸವದಲ್ಲಿ ಬಿ.ಡಿ.ಮುಕುಂದ ಅವರನ್ನು ಸನ್ಮಾನಿನಲಾಯಿತು.
ಪಾಲಿಬೆಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಬಿ.ಡಿ. ಮುಕುಂದ ಅವರ ಗದ್ದೆ ಮನೆಯಲ್ಲಿ ಆಯೋಜಿಸಲಾಗಿದ್ದ ಕ್ರೀಡೋತ್ಸವದಲ್ಲಿ ಬಿ.ಡಿ.ಮುಕುಂದ ಅವರನ್ನು ಸನ್ಮಾನಿನಲಾಯಿತು.
Published on

ವಿರಾಜಪೇಟೆ:

ಯುವಜನತೆ ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅಧಿಕ ಉತ್ಪಾದನೆ ಮಾಡಲು ಕೃಷಿ ಕ್ಷೇತ್ರದತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎಚ್.ವಿ.ರಾಮದಾಸ್ ಹೇಳಿದರು.

ಪಾಲಿಬೆಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಬಿ.ಡಿ.ಮುಕುಂದ ಅವರ ಅತ್ತೂರು ಗದ್ದೆ ಮನೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಜಾನಪದ ಹಾಗೂ ಗ್ರಾಮೀಣ ಕ್ರೀಡೆಗಳ ಜಾಗೃತಿ ಮೂಡಿಸುವುದು ತುಂಬಾ ಅಗತ್ಯವಿದೆ ಎಂದರು.
ಕ್ರೀಡಾಕೂಟದಲ್ಲಿ ಕೆಸರಿನ ಕಿಡಿಗಳು, ಮಣ್ಣಿನ ಮಕ್ಕಳು, ಮಣ್ಣಿನ ಮೇಘಗಳು, ಗದ್ದೆಯ ಗೆಳೆಯರು, ಮಣ್ಣಿನ ರಾಣಿಯರು ಹಾಗೂ ಗ್ರಾಮೀಣ ಚಕ್ರವರ್ತಿಗಳು ಎಂಬ ವಿವಿಧ ತಂಡಗಳು ಪಾಲ್ಗೊಂಡಿದ್ದವು. ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಹಗ್ಗ-ಜಗ್ಗಾಟ, ವಿಷದ ಚೆಂಡು ಹಾಗೂ ಕೆಸರುಗದ್ದೆ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಸಮಾಜ ಸೇವಕರಾದ ಬಿ.ಡಿ.ಮುಕುಂದ ಅವರನ್ನು ಸನ್ಮಾನಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸಾಬು ಕಾಳಪ್ಪ, ಪ್ರಾಂಶುಪಾಲರಾದ ಕೆ.ಕೆ.ಶೈನಾ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಣ್ಣುವಂಡ ರತ್ನ ಸುಬ್ಬಯ್ಯ, ಉಪನ್ಯಾಸಕರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net