ಪಾಲಿಬೆಟ್ಟದ ಲೂಡ್ಸ್ ಹಿಲ್ ಕಾನ್ವೆಂಟ್ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್.ಪೊನ್ನಣ್ಣ ಮಾತನಾಡಿದರು. ಕಾಳಪ್ಪ, ಗಣೇಶ್ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶಾಸಕ ಎಸ್.ಪೊನ್ನಣ್ಣ
ಪಾಲಿಬೆಟ್ಟದ ಲೂಡ್ಸ್ ಹಿಲ್ ಕಾನ್ವೆಂಟ್ ಶಾಲೆ
ಸಿದ್ದಾಪುರ: ವಿದ್ಯಾದಾನ ಎಂಬುದು ಒಬ್ಬ ವ್ಯಕ್ತಿಯ ಜೀವನವನ್ನು ರೂಪಿಸುವ ಕ್ರಿಯೆಯಾಗಿದ್ದು, ಇದನ್ನು ಲೂಡ್ಸ್ ಹಿಲ್ ಕಾನ್ವೆಂಟ್ ಯಶಸ್ವಿಯಾಗಿ ಮಾಡುತ್ತಿದೆ ಎಂದು ಶಾಸಕ ಎಸ್.ಪೊನ್ನಣ್ಣ ಹೇಳಿದರು.
ಪಾಲಿಬೆಟ್ಟದ ಲೂಡ್ಸ್ ಹಿಲ್ ಕಾನ್ವೆಂಟ್ ಶಾಲೆಯಲ್ಲಿ ಆಯೋಜಿಸಿದ್ದ 50ನೇ ವರ್ಷದ ಸುವರ್ಣ ಮಹೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಶಾಲೆಯು ಶೈಕ್ಷಣಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಉತ್ತಮ ಹೆಸರನ್ನು ಮಾಡುತ್ತಿದೆ. ಆ ಮೂಲಕ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವಂತೆ ಮಾಡಿದೆ ಎಂದು ಬಣ್ಣಿಸಿದರು.
ವಲಯ ಅಧ್ಯಕ್ಷ ಕಾಳಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗಣೇಶ್, ಶಾಲೆಯ ಆಡಳಿತ ಮಂಡಳಿ ಪ್ರಮುಖರು ಉಪಸ್ಥಿತರಿದ್ದರು.