ಬಡ ವಿದ್ಯಾರ್ಥಿಗಳಿಗೆ ನೆರವು ಕಾರ್ಯ ಮುಂದುವರಿಯಲಿ

ಕಡಂಗ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸಮಾಜ ಸೇವಕರಾದ ಸಬೀಲ್ ಮತ್ತು ತಂದೆ ಅಬ್ದುಲ್ಲಾ ಹಾಜಿ ನೋಟ್ ಪುಸ್ತಕ ವಿತರಿಸಿದರು. ಹೇಮಾವತಿ , ವತ್ಸಲಾ ಶ್ರೀಶ  ಇತರರು ಇದ್ದರು
ಕಡಂಗ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸಮಾಜ ಸೇವಕರಾದ ಸಬೀಲ್ ಮತ್ತು ತಂದೆ ಅಬ್ದುಲ್ಲಾ ಹಾಜಿ ನೋಟ್ ಪುಸ್ತಕ ವಿತರಿಸಿದರು. ಹೇಮಾವತಿ , ವತ್ಸಲಾ ಶ್ರೀಶ ಇತರರು ಇದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಮುಖ್ಯೋಪಾಧ್ಯಾಯಿನಿ ಹೇಮಾವತಿ ಆಶಯ
ವಿರಾಜಪೇಟೆ: ಮಡಿಕೇರಿ ತಾಲೂಕು ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂಗ ಸರ್ಕಾರಿ ಶಾಲೆಯ 60 ವಿದ್ಯಾರ್ಥಿಗಳಿಗೆ ಸಮಾಜ ಸೇವಕರಾದ ಸಬೀಲ್ ಮತ್ತು ತಂದೆ ಅಬ್ದುಲ್ಲಾ ಹಾಜಿ ಬುಧವಾರ ಉಚಿತ ನೋಟ್ ಪುಸ್ತಕವನ್ನು ವಿತರಿಸಿದರು.
ಮುಖ್ಯೋಪಾಧ್ಯಾಯಿನಿ ಹೇಮಾವತಿ ಮಾತನಾಡಿ, ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು ಸರ್ಕಾರದ ವತಿಯಿಂದ ಪೂರೈಕೆಯಾಗುತ್ತಿದ್ದು, ಬಡ ಮಕ್ಕಳಿಗೆ ನೋಟು ಪುಸ್ತಕಗಳನ್ನು ವೈಯಕ್ತಿಕವಾಗಿ ಪಡೆಯಲು ಕಷ್ಟಕರವಾದಂಥ ಸಂದರ್ಭದಲ್ಲಿ ದಾನಿಗಳಾದ ಸಮಾಜ ಸೇವಕ ಸಬೀಲ್ ಮತ್ತು ತಂದೆ ಅಬ್ದುಲ್ಲಾ ಹಾಜಿ ಅವರನ್ನು ಸಂಪರ್ಕಿಸಿ ಎಲ್ಲ ವಿದ್ಯಾರ್ಥಿಗಳಿಗೆ ನೋಟು ಪುಸ್ತಕವನ್ನು ಉಚಿತವಾಗಿ ವಿತರಿಸಿದ್ದಾರೆ. ಅವರ ಸಮಾಜಮುಖಿ ಕಾರ್ಯಗಳು ಹಾಗೂ ಬಡ ವಿದ್ಯಾರ್ಥಿಗಳಿಗೆ ನೆರವು ನೀಡುವ ಕಾರ್ಯ ಸದಾ ಮುಂದುವರಿಯಲಿ ಎಂದು ಆಶಿಸಿದರು.
ಸಮಾಜ ಸೇವಕರಾದ ಝಕ್ರಿಯ, ಸಹ ಶಿಕ್ಷಕಿ ವತ್ಸಲಾ ಶ್ರೀಶ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net