ಬಸವಣ್ಣನವರ ವಿಚಾರಧಾರೆಗಳನ್ನು ಮಠಗಳು ಪ್ರಸ್ತುತಪಡಿಸಲಿ

ಸೋಮವಾರಪೇಟೆ ವಿರಕ್ತ ಮಠದಲ್ಲಿ ಅಖಂಡ ಭಾರತ ಸನಾತನ ಸಂತ ಸಮಿತಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಶ್ರೀ ನಿಶ್ಚಲ ನಿರಂಜನ ದೇಶೀಕೇಂದ್ರ ಸ್ವಾಮೀಜಿ ಜನ್ಮ ವರ್ಧಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಜೇಶ್‌ನಾಥ್‌ಜೀ, ಶಿವಕುಮಾರ್, ಮೃತ್ಯುಂಜಯ ಇದ್ದರು.
ಸೋಮವಾರಪೇಟೆ ವಿರಕ್ತ ಮಠದಲ್ಲಿ ಅಖಂಡ ಭಾರತ ಸನಾತನ ಸಂತ ಸಮಿತಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಶ್ರೀ ನಿಶ್ಚಲ ನಿರಂಜನ ದೇಶೀಕೇಂದ್ರ ಸ್ವಾಮೀಜಿ ಜನ್ಮ ವರ್ಧಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಜೇಶ್‌ನಾಥ್‌ಜೀ, ಶಿವಕುಮಾರ್, ಮೃತ್ಯುಂಜಯ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ರಾಜೇಶ್‌ನಾಥ್‌ಜೀ ಸಲಹೆ
  • ಶ್ರೀನಿಶ್ಚಲ ನಿರಂಜನ ದೇಶೀಕೇಂದ್ರ ಸ್ವಾಮೀಜಿ ಜನ್ಮವರ್ಧಂತಿ ಕಾರ್ಯಕ್ರಮ
ಸೋಮವಾರಪೇಟೆ: ಇಲ್ಲಿನ ವಿರಕ್ತ ಮಠದಲ್ಲಿ ಅಖಂಡ ಭಾರತ ಸನಾತನ ಸಂತ ಸಮಿತಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಶ್ರೀನಿಶ್ಚಲ ನಿರಂಜನ ದೇಶೀಕೇಂದ್ರ ಸ್ವಾಮೀಜಿ ಜನ್ಮ ವರ್ಧಂತಿ ಕಾರ್ಯಕ್ರಮದ ಅಂಗವಾಗಿ ಬಸವತತ್ವ ವಿಚಾರಧಾರೆ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಠದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿದ್ದಲಿಂಗಪುರ ಶ್ರೀಮಂಜುನಾಥ ದೇವಾಲಯದ ಪ್ರಧಾನ ಗುರು ಶ್ರೀ ರಾಜೇಶ್‌ನಾಥ್‌ಜೀ ಮಾತನಾಡಿ, ಬಸವಣ್ಣ ಅವರ ತತ್ವಾದರ್ಶಗಳು ಸಾರ್ವಕಾಲಿಕ ಸತ್ಯವಾಗಿದ್ದು, ಅವರ ತತ್ವಗಳ ಪಾಲನೆ ಇಂದಿನ ಅಗತ್ಯವಾಗಿದೆ. ಅವರ ಆಚಾರ, ವಿಚಾರಗಳನ್ನು ಸಮಾಜಕ್ಕೆ ತಿಳಿಸುವ ಕಾರ್ಯ ಸ್ವಾಮೀಜಿಗಳಿಂದ ಆಗಬೇಕಿದೆ ಎಂದು ಹೇಳಿದರು.
ಸಮಾಜದಲ್ಲಿದ್ದ ಅಸಮಾನತೆಯನ್ನು ಹೋಗಲಾಡಿಸಲು ಶ್ರಮಿಸಿದ ಬಸವಣ್ಣ ಅವರು ಜಾತಿ, ವರ್ಗಗಳನ್ನು ಮೀರಿದವರು. ಕೇವಲ ಒಂದು ಸಮುದಾಯಕ್ಕೆ ಸೀಮಿತರಾಗದೆ ಇಡೀ ಸಮಾಜದ ಒಳಿತಿಗೆ ಶ್ರಮಿಸಿದ ದಾರ್ಶನಿಕ. ಅವರ ವಿಚಾರಧಾರೆಗಳನ್ನು ಪ್ರಸ್ತುತಪಡಿಸಲು ಮಠಮಾನ್ಯಗಳು ಮುಂದಾಗಬೇಕು ಎಂದು ಹೇಳಿದರು.
ವಿರಕ್ತ ಮಠದ ಮಠಾಧೀಶ ಶ್ರೀ ನಿಶ್ಚಲ ನಿರಂಜನ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಮೂರು ವರ್ಷಗಳ ಹಿಂದೆ ಶ್ರೀಮಠಕ್ಕೆ ಆಗಮಿಸಿ ಸಮಾಜ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ. ಹುಟ್ಟುಹಬ್ಬದ ಆಚರಣೆಗಳು ನಮ್ಮ ಜವಾಬ್ದಾರಿಯನ್ನು ಇಮ್ಮಡಿಗೊಳಿಸುತ್ತವೆ. ಈ ನಿಟ್ಟಿನಲ್ಲಿ ಮಠಕ್ಕೆ ಸಮಾಜದ ಸಹಕಾರವೂ ಅಗತ್ಯ ಎಂದರು.
ಸೋಮವಾರಪೇಟೆ ವೀರಶೈವ ಸಮಾಜ, ಅರಸಿನಕುಪ್ಪೆಯ ಶ್ರೀಕ್ಷೇತ್ರ ಮಂಜುನಾಥಸ್ವಾಮಿ ದೇವಾಲಯ, ಬೇಳೂರು ಮಠದ ವತಿಯಿಂದ ಸ್ವಾಮೀಜಿಯನ್ನು ಸನ್ಮಾನಿಸಲಾಯಿತು.
ವೀರಶೈವ ಸಮಾಜದ ಯಜಮಾನ ಬಿ.ಪಿ.ಶಿವಕುಮಾರ್, ಶೆಟ್ರು ಮೃತ್ಯುಂಜಯ, ಪ್ರಮುಖರಾದ ಸನತ್, ಶಶಿಕುಮಾರ್, ಕುಶಾಲನಗರದ ಉದ್ಯಮಿ ಸುಗುರಾಜ್, ಅಭಿಷೇಕ್ ಗೋವಿಂದಪ್ಪ, ಗುರುಪ್ರಸಾದ್, ಸಚಿನ್, ಅರುಣ್, ಸುರೇಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net