ಸಭಾ ಕಾರ್ಯಕ್ರಮಕ್ಕೂ ಮುನ್ನ ಆರ್ಜಿ ಗ್ರಾಮದಿಂದ ಶೋಭಾಯಾತ್ರೆ ನಡೆಯಿತು. ಪೆರಂಬಾಡಿಯ ಚಂಡೆ ಬಳಗದವರಿಂದ ಚಂಡೆ ಸೇವೆ, ಬೇಟೋಳಿ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮಕ್ಕಳ ಕುಣಿತ, ಭಜನೆ ತಂಡ, ವಿನಾಯಕ ಮಹಿಳಾ ಭಜನಾ ಮಂಡಳಿಯ ಭಜನಾವಳಿ ಶೋಭಾಯಾತ್ರೆಗೆ ಮೆರುಗು ನೀಡಿತು. ಮಹಿಳೆಯರು ಕಳಸವನ್ನು ಹಿಡಿದು ಶೋಭಾಯಾತ್ರೆಯಲ್ಲಿ ಸಾಗಿದರು. ಶೋಭಾಯಾತ್ರೆಯು ಪೆರಂಬಾಡಿ ವಾಲ್ಮೀಕಿ ಭವನವರೆಗೆ ನಡೆಯಿತು.