ಮಾದಕ ವಸ್ತುಜಾಲ ನಿರ್ಮೂಲನೆ ಆಗಲಿ

ಕೊಡಗು ಜಿಲ್ಲಾ ಪೊಲೀಸರು 2026ನೇ ಸಾಲಿನಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸುಮಾರು 36.807 ಕೆ.ಜಿ. ಗಾಂಜಾ ಮತ್ತು 18 ಗ್ರಾಂ ಎಂಡಿಎAಎ ಸೇರಿದಂತೆ ಒಟ್ಟು 20,20,350 ರೂ. ಮೊತ್ತದ ವಿವಿಧ ಮಾದಕ ವಸ್ತುಗಳನ್ನು ಮೈಸೂರಿನ ಜಿಐಬಿಎಸ್ ಘಟಕದಲ್ಲಿ ಇತ್ತೀಚೆಗೆ ನಿಯಮಾನುಸಾರ ನಾಶಪಡಿಸಲಾಯಿತು. ಎಸ್‌ಪಿ ಆರ್.ಎನ್. ಬಿಂದುಮಣಿ ಇದ್ದರು.
ಕೊಡಗು ಜಿಲ್ಲಾ ಪೊಲೀಸರು 2026ನೇ ಸಾಲಿನಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸುಮಾರು 36.807 ಕೆ.ಜಿ. ಗಾಂಜಾ ಮತ್ತು 18 ಗ್ರಾಂ ಎಂಡಿಎAಎ ಸೇರಿದಂತೆ ಒಟ್ಟು 20,20,350 ರೂ. ಮೊತ್ತದ ವಿವಿಧ ಮಾದಕ ವಸ್ತುಗಳನ್ನು ಮೈಸೂರಿನ ಜಿಐಬಿಎಸ್ ಘಟಕದಲ್ಲಿ ಇತ್ತೀಚೆಗೆ ನಿಯಮಾನುಸಾರ ನಾಶಪಡಿಸಲಾಯಿತು. ಎಸ್‌ಪಿ ಆರ್.ಎನ್. ಬಿಂದುಮಣಿ ಇದ್ದರು.
Published on
ಮಡಿಕೇರಿ:
ಪ್ರವಾಸಿಗರ ಅಚ್ಚುಮೆಚ್ಚಿನ ತಾಣ, ಪ್ರಕೃತಿಯ ಮಡಿಲು, ಕಾಫಿಯ ನಾಡು ಖ್ಯಾತಿಯ ಕೊಡಗಿನಲ್ಲಿ ಈಗ ಮಾದಕ ವಸ್ತುಗಳ ಕರಾಳ ಛಾಯೆ ಆವರಿಸಿದೆ. ಪ್ರಶಾಂತ ವಾತಾವರಣಕ್ಕೆ ಹೆಸರಾಗಿದ್ದ ಜಿಲ್ಲೆಯಲ್ಲಿ ಗಾಂಜಾ, ಎಂಡಿಎAಎ ನಂತಹ ಮಾರಕ ಮಾದಕ ವಸ್ತುಗಳ ಜಾಲ ವ್ಯಾಪಕವಾಗಿ ಹರಡುತ್ತಿದ್ದು, ಪೊಲೀಸರು ಈಗಾಗಲೇ ಸಾಕಷ್ಟು ಪ್ರಕರಣಗಳನ್ನು ಬಯಲಿಗೆ ತಂದಿದ್ದಾರೆ. ಈ ಮಾದಕ ವಸ್ತುಗಳ ಜಾಲದ ಪ್ರಮುಖ ಗುರಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಜನರು. ಹೋಮ್‌ಸ್ಟೇಗಳು, ಪ್ರವಾಸಿ ತಾಣಗಳು ಮತ್ತು ಕಾಲೇಜು ಆವರಣದ ಸುತ್ತಮುತ್ತ ಈ ದಂಧೆ ವ್ಯವಸ್ಥಿತವಾಗಿ ನಡೆಯುತ್ತಿರುವ ಆರೋಪಗಳು ಸಾಮಾನ್ಯವಾಗಿದೆ.
ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ದಂಧೆಯ ಹಿಂದೆ ಹೊರರಾಜ್ಯಗಳಿಂದ ಬಂದಿರುವ ವ್ಯಕ್ತಿಗಳು ಶಾಮೀಲಾಗಿರುವುದು ಇತ್ತೀಚಿನ ಕೆಲವು ಪ್ರಕರಣಗಳಿಂದ ಬಯಲಿಗೆ ಬಂದಿದೆ. ಅಸ್ಸಾಂ ಮೂಲದ ಕಾರ್ಮಿಕರು ಇಂಥ ದಂಧೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಕಂಡುಬAದಿದೆ. ಮಾದಕ ವಸ್ತುಗಳ ಮಾರಾಟದಲ್ಲಿ ದೊಡ್ಡ ಜಾಲವೇ ಸಕ್ರಿಯವಾಗಿರುವ ಅನುಮಾನ ವ್ಯಕ್ತವಾಗಿದ್ದು, ಮೊದಲು ಇದರ ಹಿಂದಿರುವ ಮೂಲ ಪುರಷರ ಹೆಡೆಮುರಿ ಕಟ್ಟಿದರೆ ದಂಧೆಗೆ ಕಡಿವಾಣ ಬೀಳುತ್ತದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
ಸೌಂದರ್ಯದ ನಾಡು ಕೊಡಗು ಇಂದು ಮಾದಕ ವಸ್ತುಗಳ ಜಾಲಕ್ಕೆ ಬಲಿಯಾಗುತ್ತಿರುವುದು ಪ್ರಜ್ಞಾವಂತರಲ್ಲಿ ಆತಂಕ ಮೂಡಿಸಿದೆ. ಈ ದಂಧೆಯನ್ನು ಸಂಪೂರ್ಣವಾಗಿ ಬುಡಸಮೇತ ಕಿತ್ತೊಗೆಯಲು ಪೊಲೀಸ್ ಇಲಾಖೆಯ ಕಠಿಣ ಕ್ರಮದ ಜತೆಗೆ ಸಾರ್ವಜನಿಕರು, ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳ ಜಾಗೃತಿಯೂ ಅತ್ಯಗತ್ಯ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
"

ಹದಿಹರೆಯದ ಮನಸ್ಸುಗಳು ಯಾವುದೇ ವಿಚಾರಕ್ಕೂ ಬಹುಬೇಗ ವಾಲಿ ಬಿಡುತ್ತಾರೆ. ಸಮಾಜಘಾತುಕ ಶಕ್ತಿಗಳು ಇದನ್ನೇ ಬಂಡವಾಳ ಮಾಡಿಕೊಂಡು ಯುವಜನತೆಯನ್ನು ಮಾದಕತೆಯ ನಶೆಗೆ ತಳ್ಳಿ ಅವರ ಭವಿಷ್ಯಕ್ಕೆ ಕಂಟಕರಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈಶಾನ್ಯ ರಾಜ್ಯಗಳಿಂದ ಬಂದು ಬೀಡು ಬಿಟ್ಟಿರುವ ರೋಹಿಂಗ್ಯಾ ಮೂಲದ ವಲಸೆ ಕಾರ್ಮಿಕರು ಇದನ್ನು ದಂಧೆಯನ್ನಾಗಿ ಮಾಡಿಕೊಂಡು ರಾಜಾರೋಷವಾಗಿ ಓಡಾಡುತ್ತಿದ್ದಾರೆ. ನಕಲಿ ದಾಖಲೆಗಳ ಮೂಲಕ ದೇಶ - ರಾಜ್ಯಗಳಲ್ಲಿ ಮತ್ತು ನಮ್ಮ ಜಿಲ್ಲೆಯಲ್ಲಿಯೂ ವ್ಯಾಪಕವಾಗಿ ನೆಲೆಸಿರುವ ಇವರನ್ನು ಕೂಲಂಕುಷವಾಗಿ ಪರಿಶೀಲಿಸಿ ಕಾನೂನು ಕ್ರಮದ ಜತೆಗೆ ಗಡಿಪಾರು ಮಾಡಲೇಬೇಕಾಗಿದೆ. ಇವರೊಂದಿಗೆ ಸ್ಥಳೀಯರು ಯಾರಾದರೂ ಈ ಕೃತ್ಯದಲ್ಲಿ ಕೈಜೋಡಿಸಿದ್ದಲ್ಲಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು.

— ನಿಧಿನಿತಿನ್ ನಾಯಕಂಡ, ಬೇಟೋಳಿ ಗ್ರಾಮ

"

ಇತ್ತೀಚೆಗೆ ಕೊಡಗಿನಲ್ಲಿ ಮಾದಕ ವಸ್ತುಗಳ ಜಾಲ ವ್ಯಾಪಿಸುತ್ತಿರುವುದು ಅತ್ಯಂತ ಗಂಭೀರ ವಿಷಯವಾಗಿದೆ. ಇದಕ್ಕೆ ಬಲಿಯಾಗುತ್ತಿರುವವರು ನಮ್ಮ ಕೊಡಗಿನ ವಿದ್ಯಾರ್ಥಿಗಳು ಮತ್ತು ಯುವಜನರು. ಮುಖ್ಯವಾಗಿ ಈಶಾನ್ಯ ರಾಜ್ಯಗಳಿಂದ ಕಾರ್ಮಿಕರು ಬಂದಿಳಿಯುವ ರೈಲು, ಬಸ್ಸು ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಅನುಸರಿಸಬೇಕಾಗಿದೆ. ಲೈನ್ ಮನೆಗಳಲ್ಲಿ ವಾಸಿಸುವ ಹೊರ ರಾಜ್ಯದ ಕಾರ್ಮಿಕರ ಮೇಲೆ ತೋಟ ಮಾಲೀಕರು ಹಾಗೂ ಸ್ಥಳೀಯ ಸಹಕಾರ್ಮಿಕರು ತೀವ್ರ ನಿಗಾ ವಹಿಸಿ ಅಂತಹವರ ಸುಳಿವನ್ನು ಪೊಲೀಸ್ ಇಲಾಖೆಗೆ ತಿಳಿಸುವಂತಾಗಬೇಕು. ಜಿಲ್ಲೆಯಲ್ಲಿ ನಡೆಯುವಂಥ ರೇವ್, ಪಬ್ಬ್ ಸಂಸ್ಕೃತಿಗಳಿದ್ದರೆ ಅಂತಹ ಕಾರ್ಯಕ್ರಮಗಳಿಗೆ ಕಡಿವಾಣ ಬೀಳಬೇಕಾಗಿದೆ.

— ಕಣಜಾಲು ಪೂವಯ್ಯ, ಮಾಜಿ ಯೋಧ, ಚೆಟ್ಟಳ್ಳಿ

"

ಯುವಕರು ಮತ್ತು ವಿದ್ಯಾರ್ಥಿಗಳು ಹೆಚ್ಚಾಗಿ ಈ ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಇದರಿಂದ ಅಪರಾಧಿ ಚಟುವಟಿಕೆಗಳು, ಕಳ್ಳತನ ಮತ್ತು ಹಿಂಸಾಚಾರ ಹೆಚ್ಚಾಗುತ್ತಿದೆ. ಇದರ ವ್ಯಸನದಿಂದಾಗಿ ಖಿನ್ನತೆ ಹೆಚ್ಚಾಗಿ ಆತ್ಮಹತ್ಯೆಯಂತಹ ಅಚಾತುರ್ಯಕ್ಕೆ ಮನಸ್ಸು ಜಾರುವ ಸಾಧ್ಯತೆ ಹೆಚ್ಚಾಗಿರುತ್ತದೆ ಈ ಪಿಡುಗಿನಿಂದ ಸಾಮಾಜಿಕ ಹಾಗೂ ಅರೋಗ್ಯದ ಮೇಲೆ ಗಂಭೀರವಾದ ದುಷ್ಪರಿಣಾಮಗಳು ಬಿರುತ್ತದೆ. ಇದರಿಂದ ಕೊಡಗಿನ ಶಾಂತಿಯುತ ಸಂಸ್ಕೃತಿ ಮತ್ತು ಪ್ರವಾಸೋದ್ಯಮದ ಮೇಲೆ ಪರಿಣಾಮಗಳು ಆಗುತ್ತದೆ.

— ಪೂರ್ಣಿಮಾ ಪಾಂಡಿಮನೆ, ಭಾಗಮಂಡಲ

"

ಇತ್ತೀಚಿನ ದಿನಗಳಲ್ಲಿ ಕೊಡಗಿನಲ್ಲಿ ಮಾದಕ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುವಂತೆ ಕಾಣುತ್ತಿದೆ. ಅದರಲ್ಲೂ ಕೂಡ ಯುವ ಸಮುದಾಯವನ್ನು ಟಾರ್ಗೆಟ್ ಮಾಡಿ ಈ ಕುಕೃತ್ಯ ನಡೆಯುತ್ತಿದೆ. ಪೋಷಕರು ಆದಷ್ಟು ತಮ್ಮ ಮಕ್ಕಳ ಕಡೆ ಗಮನ ಕೊಡಬೇಕು. ಶಾಲಾ, ಕಾಲೇಜು ಬಿಡುವ ಸಮಯದಲ್ಲಿ ಪೊಲೀಸರು ನಗರದಲ್ಲಿ ಒಂದಷ್ಟು ಗಸ್ತು ತಿರುಗಬೇಕು. ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುವನ್ನು ಬಳಸದಿರುವ ಕುರಿತು ಅರಿವು ಮೂಡಿಸಬೇಕು. ಹೊರ ಜಿಲ್ಲೆ, ಹೊರ ರಾಜ್ಯದವರು ಬಂದು ಮಾದಕ ವಸ್ತುಗಳನ್ನು ಮಾರಾಟ ಮಾಡಲು ಪ್ರಯತ್ನಿಸುವುದು ಕಂಡು ಬಂದರೆ ಕಠಿಣ ಶಿಕ್ಷೆಯೊಂದಿಗೆ ಗಡಿಪಾರು ಮಾಡಬೇಕು.

— ರಮ್ಯಾ, ವಿರಾಜಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net