ರಾಷ್ಟ್ರ ಮಟ್ಟದಲ್ಲಿ ಹಾಕಿಯನ್ನು ಗುರುತಿಸಲಿ

ಕೈಗ್ ಸ್ಪೋರ್ಟ್ಸ್ ಫೌಂಡೇಶನ್, ಕೂರ್ಗ್ ಚಾಲೆಂಜರ್ಸ್ ಹಾಗೂ ಹಾಕಿ ಕೂರ್ಗ್ ವತಿಯಿಂದ ಪೊನ್ನಂಪೇಟೆಯ ಟರ್ಫ್ ಮೈದಾನದಲ್ಲಿ ಆಯೋಜಿಸಿದ್ದ ಹಾಕಿ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಪ್ರಶಸ್ತಿ ಗೆದ್ದ ಕೂರ್ಗ್ ಚಾರ್ಮರ್ಸ್ ಮಡಿಕೇರಿ ತಂಡ. ತುಡಿಮಾಡ ಲೋಕೇಶ್ ಕುಟ್ಟಪ್ಪ, ಪಟ್ರಪಂಡ ಧನಿ ರತನ್, ಕಿಲನ್ ಗಣಪತಿ,ಚೆಪ್ಪುಡಿರ ಕಾರ್ಯಪ್ಪ, ಚೆಪ್ಪುಡಿರ ಪೂಣಚ್ಚ,ಮಾಲೇಟಿರ ಶ್ರೀನಿವಾಸ್ ಇತರರು ಇದ್ದರು.
ಕೈಗ್ ಸ್ಪೋರ್ಟ್ಸ್ ಫೌಂಡೇಶನ್, ಕೂರ್ಗ್ ಚಾಲೆಂಜರ್ಸ್ ಹಾಗೂ ಹಾಕಿ ಕೂರ್ಗ್ ವತಿಯಿಂದ ಪೊನ್ನಂಪೇಟೆಯ ಟರ್ಫ್ ಮೈದಾನದಲ್ಲಿ ಆಯೋಜಿಸಿದ್ದ ಹಾಕಿ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಪ್ರಶಸ್ತಿ ಗೆದ್ದ ಕೂರ್ಗ್ ಚಾರ್ಮರ್ಸ್ ಮಡಿಕೇರಿ ತಂಡ. ತುಡಿಮಾಡ ಲೋಕೇಶ್ ಕುಟ್ಟಪ್ಪ, ಪಟ್ರಪಂಡ ಧನಿ ರತನ್, ಕಿಲನ್ ಗಣಪತಿ,ಚೆಪ್ಪುಡಿರ ಕಾರ್ಯಪ್ಪ, ಚೆಪ್ಪುಡಿರ ಪೂಣಚ್ಚ,ಮಾಲೇಟಿರ ಶ್ರೀನಿವಾಸ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೋಚ್ ಜನಾರ್ದನ್ ಸಾಲಿಯಾನ್ ಆಶಯ
  • ಕೂರ್ಗ್ ಚಾರ್ಮರ್ಸ್ ಮಡಿಕೇರಿ ತಂಡ ವಿನ್ನರ್
ಪೊನ್ನಂಪೇಟೆ: ಕೊಡಗಿನ ಹಾಕಿಯನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಾಗಬೇಕೆಂದು ಹಾಕಿ ಜೂನಿಯರ್ ಇಂಡಿಯಾ ಕೋಚ್ ಜನಾರ್ದನ್ ಸಾಲಿಯಾನ್ ಆಶಿಸಿದರು.
ಕೈಗ್ ಗ್ರೂಪ್ ಅಧೀನದ ಕೈಗ್ ಸ್ಪೋರ್ಟ್ಸ್ ಫೌಂಡೇಷನ್, ಕೂರ್ಗ್ ಚಾಲೆಂಜರ್ಸ್ ಹಾಗೂ ಹಾಕಿ ಕೂರ್ಗ್ ವತಿಯಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಆಯೋಜಿಸಿದ್ದ ಕೂರ್ಗ್ ಚಾರ್ಮರ್ಸ್ ಮಡಿಕೇರಿ ಹಾಗೂ ಯುಎಸ್‌ಸಿ ಬೇರಳಿನಾಡ್ ನಡುವಿನ ಹಾಕಿ ಫೈನಲ್ ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿ ಜಗ್ಪ್ರೀತ್ ಸಿಂಗ್ ಗೋಲು ಹೊಡೆಯುವ ಮೂಲಕ ಶುಭಾರಂಭ ಮಾಡಿದರು. ನಂತರ ಕೂರ್ಗ್ ಚಾರ್ಮಸ್ ಪರ ಭರತ್ ಒಂದು ಗೋಲು ಹೊಡೆಯುವ ಮೂಲಕ ಪಂದ್ಯವನ್ನು ಸಮಬಲಗೊಳಿಸಿದರು.
ನಂತರ ಕೂರ್ಗ್ ಚಾರ್ಮಸ್‌ನ ದೀಪಕ್ ಸಿಕ್ಕಿದ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ ಕೂರ್ಗ್ ಚಾರ್ಮಸ್‌ಗೆ 2-1 ಮುನ್ನಡೆ ತಂದುಕೊಟ್ಟರು. ತೃತೀಯ ಕ್ವಾರ್ಟರ್‌ನಲ್ಲಿ ಯುಎಸ್ ಸಿಯ ಮತ್ರಂಡ ವಿಶಾಲ್ ಪೂಣಚ್ಚ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ 2-2 ಗೋಲ್‌ಗಳಿಂದ ಪಂದ್ಯವನ್ನು ಸಮಬಲಗೊಳಿಸಿದರು.
ನಾಲ್ಕನೇ ಕ್ವಾಟರ್‌ನಲ್ಲಿ ಚಾರ್ಮರ್ಸ್‌ಗೆ ದೊರೆತ ಮತ್ತೊಂದು ಪೆನಾಲ್ಟಿ ಕಾರ್ನರ್‌ನಲ್ಲಿ ಭರತ್ ಅವರು ಹೊಡೆದ ಗೋಲಿನಿಂದ 3-2 ಅಂತರದಿಂದ ಕೂರ್ಗ್ ಚಾರ್ಮರ್ಸ್ ಮಡಿಕೇರಿ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತು.
ಚಾಂಪಿಯನ್ ತಂಡಕ್ಕೆ 2ಲಕ್ಷ ರೂ. ನಗದು ಬಹುಮಾನದ ಜತೆಗೆ ಆಕರ್ಷಕ ಎರಡು ಟ್ರೋಫಿ, ರನ್ನರ್‌ಆಪ್ ಯು.ಎಸ್.ಸಿ ಬೇರಳಿನಾಡ್ ತಂಡಕ್ಕೆ 1ಲಕ್ಷ ರೂ. ನಗದು ಹಾಗೂ ಆಕರ್ಷಕ ಟ್ರೋಫಿ ಪ್ರದಾನ ಮಾಡಲಾಯಿತು.
ಮೂರನೇ ಸ್ಥಾನಕ್ಕಾಗಿ ನಡೆದ ಕೂರ್ಗ್ ಚಾಲೆಂಜರ್ಸ್ ಕುಂದ ಹಾಗೂ ಬಿಬಿಸಿ ಗೋಣಿಕೊಪ್ಪ ನಡುವೆ ನಡೆದ ಪಂದ್ಯದಲ್ಲಿ ಕೂರ್ಗ್ ಚಾಲೆಂಜರ್ಸ್ ತಂಡ 5-2 ಗೋಲುಗಳ ಅಂತರದಿಂದ ಬಿಬಿಸಿ ಗೋಣಿಕೊಪ್ಪ ವಿರುದ್ಧ ಜಯ ಗಳಿಸಿ 50 ಸಾವಿರ ರೂ. ನಗದು ಮತ್ತು ಟ್ರೋಫಿ ತನ್ನದಾಗಿಸಿಕೊಂಡಿತು.
ಅತಿಥಿ ಆಟಗಾರರ ವಿಭಾಗ
* ಪ್ಲೇಯರ್ ಆಫ್ ದಿ -ಟೂರ್ನಮೆಂಟ್-ಮಾನವ್ ಮೇದಪ್ಪ .
* ಬೆಸ್ಟ್ ಗೋಲ್ ಕೀಪರ್-ಸೆಂತಮಿನ್ಝ್ ಅರಸ್.
* ಬೆಸ್ಟ್ ಫುಲ್ ಬ್ಯಾಕ್-ಮನ್ ಪ್ರೀತ್ ಸಿಂಗ್ .
* ಬೆಸ್ಟ್ ಮಿಡ್ ಫೀಲ್ಡರ್-ಜೋಗಿಂದರ್ ಸಿಂಗ್.
*ಬೆಸ್ಟ್ ಫಾರ್ವರ್ಡ್ ದೀಪಕ್.
ಲೋಕಲ್ ಪ್ಲೇಯರ್ಸ್ ವಿಭಾಗ
* ಪ್ಲೇಯರ್ ಆಫ್ ದಿ ಟೂರ್ನಮೆಂಟ್-ಧನುಷ್.
* ಬೆಸ್ಟ್ ಗೋಲ್ಡ್ ಕೀಪರ್-ಸೋಮಣ್ಣ.
* ಬೆಸ್ಟ್ ಫುಲ್ ಬ್ಯಾಕ್-ಪ್ರಜ್ವಲ್.
* ಬೆಸ್ಟ್ ಮೆಟ್ ಫೀಲ್ಡರ್-ಅಚ್ಚಯ್ಯ.
* ಬೆಸ್ಟ್ ಫಾರ್ವರ್ಡ್-ಆರ್ಯನ್.
ಸಮಾರೋಪ ಸಮಾರಂಭ: ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಾಕಿ ಜೂನಿಯರ್ ಇಂಡಿಯಾ ಕೋಚ್ ಜನಾದರ್ನ್ ಸಾಲಿಯಾನ್ ಮಾತನಾಡಿ, 2021 ಮತ್ತು 2024ರ ಒಲಿಂಪಿಕ್ಸ್‌ನಲ್ಲಿ ಕೊಡಗಿನಿಂದ ಯಾವುದೇ ಆಟಗಾರರು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಲಿಲ್ಲ. ಈ ಬಾರಿಯ ಹಾಕಿ ವಿಶ್ವಕಪ್‌ಗೂ ಕೂಡ ಯಾವುದೇ ಆಟಗಾರರು ಕೊಡಗಿನಿಂದ ಆಯ್ಕೆ ಆಗದಿರುವುದು ಬೇಸರದ ವಿಷಯ. ಕೊಡಗಿನ ಆಟಗಾರರು ಜಿಲ್ಲಾ ಮಟ್ಟ, ರಾಜ್ಯ ಮಟ್ಟಕ್ಕೆ ಮಾತ್ರ ಸೀಮಿತವಾಗದೆ ರಾಷ್ಟ್ರಮಟ್ಟಕ್ಕೂ ಆಯ್ಕೆಯಾಗಲು ಹೆಚ್ಚಿನ ಶ್ರಮ ವಹಿಸಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಹಾಕಿಯಲ್ಲಿ ಸಾಧನೆ ಮಾಡಿದ 50ಕ್ಕೂ ಹೆಚ್ಚಿನ ಸಾಧಕರನ್ನು ಸನ್ಮಾನಿಸಲಾಯಿತು. ಕೈಗ್ ಹಾಕಿ ಕಪ್ ಪಂದ್ಯಾವಳಿ ಯಶಸ್ವಿಯಾಗಲು ಸಹಕರಿಸಿದ ವ್ಲೋಗರ್‌ಗಳನ್ನು ಈ ಸಂದರ್ಭ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಫೈನಲ್ ಪಂದ್ಯದ ಸಮಾರೋಪ ಸಮಾರಂಭದ ಅತಿಥಿಗಳಾಗಿ , ಒಲಿಂಪಿಯನ್ ಲೆ.ಕ.ಬಾಳೆಯಡ ಸುಬ್ರಮಣಿ, ಕೊಡವ ಹಾಕಿ ಅಸೋಸಿಯೇಷನ್ ಅಧ್ಯಕ್ಷ ಪಾಂಡಂಡ ಬೋಪಣ್ಣ, ಕರ್ನಾಟಕ ಕ್ರೀಡಾ ರತ್ನ ಪುರಸ್ಕೃತ ಅಶೋಕ್ ಪೂವಯ್ಯ, ಭಾರತೀಯ ಹಾಕಿ ತರಬೇತುದಾರ ಜನಾದರ್ನ್ ಸಾಲಿಯಾನ್, ಅಂತಾರಾಷ್ಟ್ರೀಯ ಹಾಕಿ ಆಟಗಾರ ಕೆ.ಕೆ ಪೂಣಚ್ಚ, ಲೋಪಮುದ್ರ ಮೆಡಿಕಲ್ ಸೆಂಟರ್ ಅಧ್ಯಕ್ಷ ಡಾ.ಅಮೃತ್ ನಾಣಯ್ಯ, ಮಡಿಕೇರಿ ಕೊಡಗು ವಾಣಿಜ್ಯ ಬ್ಯಾಂಕ್ ಅಧ್ಯಕ್ಷರಾದ ಕೊಡಂದೇರ ಬಾಂಡ್ ಗಣಪತಿ, ಒಲಿಂಪಿಯನ್ ಚೆಪ್ಪುಡಿರ ಪೂಣಚ್ಚ, ಕೃಷಿ ಪ್ರಶಸ್ತಿ ಪುರಸ್ಕೃತೆ ಪಟ್ರಂಗಡ ಧನಿ ರತನ್, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಗುಮ್ಮಟೀರ ಕಿಲನ್ ಗಣಪತಿ, ಬೆಂಗಳೂರು ಹಾಕಿ ಅಸೋಸಿಯೇಷನ್ ಉಪಾಧ್ಯಕ್ಷ ತುಡಿಮಾಡ ಲೋಕೇಶ್ ಕುಟ್ಟಪ್ಪ, ವೀಕ್ಷಕ ವಿವರಣೆಗಾರ ಚೆಪ್ಪುಡಿರ ಕಾರ್ಯಪ್ಪ ಹಾಗೂ ಮಾಲೇಟಿರ ಶ್ರೀನಿವಾಸ್, ಕೈಗ್ ಹಾಕಿ ಸಂಸ್ಥೆ, ಕೂರ್ಗ್ ಚಾಲೆಂಜರ್ಸ್ ಹಾಗೂ ಹಾಕಿ ಕೂರ್ಗ್‌ನ ಸದಸ್ಯರು ಹಾಗೂ ಕ್ರೀಡಾಭಿಮಾನಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net