ವಿರಾಜಪೇಟೆಯಲ್ಲಿ ಆಯೋಜಿಸಿದ್ದ ಅಣಬೆ ಕೃಷಿ ತರಬೇತಿ ಕಾರ್ಯಾಗಾರದಲ್ಲಿ ಉಪ ಅರಣ್ಯಸಂರಕ್ಷಣಾಧಿಕಾರಿ ಜಗನ್ನಾಥ್ ಮಾತನಾಡಿದರು. ಹರಿಣಿ ಪ್ರಭಾಕರ್, ತಹಸೀನಾ, ಗೋವಿಂದರಾಜು, ಶಿವರಾಮ್ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ವಿರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಸಲಹೆ
ತರಬೇತಿ ಕಾರ್ಯಾಗಾರ ಉದ್ಘಾಟನೆ
ವಿರಾಜಪೇಟೆ: ಅಣಬೆ ಕೃಷಿ ಮೂಲಕ ಪ್ರತಿಯೊಬ್ಬರೂ ಆರ್ಥಿಕವಾಗಿ ಸದೃಢರಾಗಬೇಕು ಎಂದು ವಿರಾಜಪೇಟೆ ಉಪ ಅರಣ್ಯಸಂರಕ್ಷಣಾಧಿಕಾರಿ ಜಗನ್ನಾಥ್ ಹೇಳಿದರು.
ಅರಣ್ಯ ಇಲಾಖೆ ವಿರಾಜಪೇಟೆ ವಿಭಾಗದಿಂದ ಮಹಿಳಾ ಸಮಾಜದ ಸಹಕಾರದೊಂದಿಗೆ ಇತ್ತೀಚೆಗೆ ಆಯೋಜಿಸಿದ್ದ ಅಣಬೆ ಕೃಷಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ತರುವ ಕೃಷಿ ಇದಾಗಿದೆ. ಪ್ರತಿಯೊಬ್ಬರೂ ಮನೆಯಲ್ಲೇ ಕುಳಿತು ಕೃಷಿಯನ್ನು ಮುಂದುವರಿಸಬಹುದು. ಅರಣ್ಯ ಇಲಾಖೆ ಮೂಲಕ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತ ಬರಲಾಗುತ್ತಿದೆ. ಅರಣ್ಯದಂಚಿನಲ್ಲಿ ವಾಸಿಸುತ್ತಿರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.
ರೈತರಿಗೆ, ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕಾಗಿ ಅಣಬೆ ಬೇಸಾಯ ಕುರಿತು ತರಬೇತಿ ಕಾರ್ಯಾಗಾರವನ್ನು ಅರಣ್ಯ ಇಲಾಖೆಯಿಂದ ನಡೆಸುತ್ತಿದ್ದೇವೆ. ಅಣಬೆ ಕೃಷಿಯ ಪ್ರಾಮುಖ್ಯ ಮತ್ತು ಅಣಬೆಯ ವಿವಿಧ ಮೌಲ್ಯವರ್ಧಿತ ಪದಾರ್ಥಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಅಣಬೆಯಲ್ಲಿರುವ ಅವಶ್ಯಕ ಪೋಷಕಾಂಶಗಳು, ವಾಣಿಜ್ಯ ಉದ್ದೇಶದಿಂದ ಅಣಬೆ ಬೇಸಾಯವನ್ನು ಮಾಡುವುದರಿಂದ ಆಗುವ ಆರ್ಥಿಕ ಆದಾಯಗಳ ಬಗ್ಗೆ ತಿಳಿಸಲಾಗುತ್ತದೆ ಎಂದರು.
ಮಹಿಳಾ ಸಮಾಜದ ಅಧ್ಯಕ್ಷೆ ಪಟ್ರಪಂಡ ಗೀತಾ ಬೆಳ್ಯಪ್ಪ ಮಾತನಾಡಿ, ಮಹಿಳೆಯರು ಬಿಡುವಿನ ವೇಳೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಲ್ಲಿ ಉತ್ತಮ ಆದಾಯವೂ ಬರಲಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ತರಬೇತಿ ಕಾರ್ಯಾಗಾರಗಳು ನಡೆಯಲಿ ಎಂದು ಶುಭ ಕೋರಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತಹಸೀನಾ ಮಾತನಾಡಿ, ಅಣಬೆ ಕೃಷಿಯಿಂದ ಮಹಿಳೆಯರು ಉತ್ತಮ ಆದಾಯವನ್ನು ಪಡೆಯುವುದರೊಂದಿಗೆ ಜೀವನ ನಿರ್ವಹಣೆ ಮಾಡಬಹುದು. ಅಣಬೆ ಕೃಷಿ ಮಾಡುವುದರತ್ತ ಗಮನ ಹರಿಸಿ, ಅದರ ಮಾರಾಟಕ್ಕೆ ಬೇಕಾದ ವ್ಯವಸ್ಥೆಯನ್ನು ನಾವು ಮಾಡುತ್ತೇವೆ ಎಂದು ತಿಳಿಸಿದರು.
ಮಹಿಳೆಯರು ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯವನ್ನು ಗಳಿಸಬಹುದು. ಅಲ್ಲದೆ ಅಣಬೆಯನ್ನು ಪದಾರ್ಥವಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಒಳಿತಾಗಲಿದೆ. ಅಣಬೆಯಲ್ಲಿ ರೋಗ ನಿರೋಧಕ ಶಕ್ತಿ ಇದ್ದು ಹಲವಾರು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದೆ. ಬಿಡುವಿನ ವೇಳೆಯಲ್ಲಿ ಈ ತರಹದ ಕೃಷಿ ಚಟುವಟಿಕೆಗಳನ್ನು ನಡೆಸಲಿ ಎನ್ನುವ ಉದ್ದೇಶದಿಂದ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಹರಿಣಿ ಪ್ರಭಾಕರ್ ಮಾತನಾಡಿ, ಅಣಬೆಯ ನಾನಾ ರೀತಿಯ ಬೇಸಾಯ ಕ್ರಮಗಳು ಮತ್ತು ನಿರ್ವಹಣೆ, ಅಣಬೆಗೆ ತಗಲುವ ಸಾಮಾನ್ಯ ರೋಗ ಮತ್ತು ಕೀಟಗಳು, ಅಣಬೆ ಬೇಸಾಯ ಮಾಡುವ ಪದ್ಧತಿಯನ್ನು ಪ್ರಾತ್ಯಕ್ಷಿಕೆ ಮೂಲಕ ಶಿಬಿರಾರ್ಥಿಗಳಿಗೆ ವಿವರಿಸಿದರು.
ಅಣಬೆ ಕೃಷಿಗೆ ವಿವಿಧ ರೀತಿಯ ಪ್ರಕ್ರಿಯೆಗಳನ್ನು ಹಂಚಿಕೊಂಡರು ಮತ್ತು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕನ್ನು ಹೇಗೆ ತಪ್ಪಿಸುವುದು ಎಂಬುದರ ಕುರಿತು ಕೋಣೆಯ ಉದ್ದ ಮತ್ತು ಎತ್ತರ, ತಾಪಮಾನ, ಔಷಧ ಮತ್ತು ಚಿಕಿತ್ಸೆಯಂತಹ ಕೆಲವು ಪ್ರಮುಖ ಅಂಶಗಳನ್ನು ತಿಳಿಸಿದರಲ್ಲದೆ ನಂತರ ಅಣಬೆ ಬೀಜಗಳುಳ್ಳ ಚೀಲಗಳನ್ನು ಹೇಗೆ ತಯಾರಿಸುವುದು ಎಂಬುದರ ಕುರಿತು ಪ್ರಾಯೋಗಿಕ ಪ್ರದರ್ಶನ ನೀಡಲಾಯಿತು.
ಅರಣ್ಯ ಯೋಜನೆ ಮತ್ತು ನಿರ್ವಹಣೆಯ ಪ್ರಮುಖ ಗೋವಿಂದರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಅರಣ್ಯ ಇಲಾಖೆ ಅಧಿಕಾರಿಗಳಾದ ಕೆ.ವಿ.ಶಿವರಾಮ್ ಹಾಗೂ ಅರಣ್ಯ ಸೋಂಕನ್ನು ಹೇಗೆ ತಪ್ಪಿಸುವುದು ಎಂಬುದರ ಕುರಿತು ಕೋಣೆಯ ಉದ್ದ ಮತ್ತು ಎತ್ತರ, ತಾಪಮಾನ, ಔಷಧ ಮತ್ತು ಚಿಕಿತ್ಸೆಯಂತಹ ಕೆಲವು ಪ್ರಮುಖ ಅಂಶಗಳನ್ನು ತಿಳಿಸಿದರಲ್ಲದೆ ನಂತರ ಅಣಬೆ ಬೀಜಗಳುಳ್ಳ ಚೀಲಗಳನ್ನು ಹೇಗೆ ತಯಾರಿಸುವುದು ಎಂಬುದರ ಕುರಿತು ಪ್ರಾಯೋಗಿಕ ಪ್ರದರ್ಶನವನ್ನು ನೀಡಲಾಯಿತು.