ಕಲ್ತೊಡು ನಾಂಗಲ ಶಾಲೆಯಿಂದ ಆರಂಭಗೊಂಡ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವು ಬಿಟ್ಟಂಗಾಲದ ಆರ್.ಕೆ.ಎಫ್ ವರೆಗೂ ನಡೆಯಿತು. ವಿದ್ಯಾರ್ಥಿಗಳು ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ಎಸೆದಿದ್ದ ಪ್ಲಾಸ್ಟಿಕ್, ಬಾಟಲ್, ಪೇಪರ್‌ಗಳನ್ನು ತೆಗೆದು ಪಂಚಾಯಿತಿ ಕಸದ ವಾಹನಕ್ಕೆ ಹಾಕಿದರು. ಶಿಬಿರಾಧಿಕಾರಿ ಬಿ.ಎನ್. ಶಾಂತಿಭೂಷಣ್, ಗ್ರಾಪಂ ಮಾಜಿ ಸದಸ್ಯ ಚಂಗೆಟ್ಟಿರ ಸೋಮಯ್ಯ, ಮಾಚಯ್ಯ, ಬಿಪಿನ್, ಉಪನ್ಯಾಸಕರಾದ ಜೇಮ್ಸ್ ಅಂತೋಣಿ, ನಮೃತಾ, ಶಶಿಕಲಾ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.