ವೈದ್ಯರು ವೃತ್ತಿಯೊಂದಿಗೆ ಆವಿಷ್ಕಾರದಲ್ಲಿ ತೊಡಗಲಿ

ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯ ವಿರಾಜಪೇಟೆಯ ವಾರ್ಷಿಕೋತ್ಸವ ಆಯೋಜಿಸಲಾಗಿತ್ತು. ಸುನೀಲ್ ಮುದ್ದಯ್ಯ, ಕೆ.ಸಿ.ಪೊನ್ನಪ್ಪ, ಡಾ.ಆಶೀಷ್ ಕಕ್ಕಾರ್ ಇದ್ದರು.
ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯ ವಿರಾಜಪೇಟೆಯ ವಾರ್ಷಿಕೋತ್ಸವ ಆಯೋಜಿಸಲಾಗಿತ್ತು. ಸುನೀಲ್ ಮುದ್ದಯ್ಯ, ಕೆ.ಸಿ.ಪೊನ್ನಪ್ಪ, ಡಾ.ಆಶೀಷ್ ಕಕ್ಕಾರ್ ಇದ್ದರು.
Published on
ವಿರಾಜಪೇಟೆ : ವೈದ್ಯಕೀಯ ಕಾಲೇಜುಗಳು ವೈದ್ಯರನ್ನು ಹುಟ್ಟುಹಾಕುತ್ತವೆೆ. ಹೊರಬಂದ ವೈದ್ಯರು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ಮಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುವಂತಾಗಬೇಕು ಎಂದು ಅಕಾಡೆಮಿ ಆಫ್ ಇಂಪ್ಲಾಂಟ್ ಟೋಲಾಜಿ ಸ್ಥಾಪಕ ಅಧ್ಯಕ್ಷ ಡಾ.ಆಶೀಶ್ ಕಕ್ಕಾರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು
ವಿರಾಜಪೇಟೆಯಲ್ಲಿನ ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ದಂತ ವೈದ್ಯಕೀಯ ಕಾಲೇಜಿನ ವಾರ್ಷಿಕೋತ್ಸವ ಮತ್ತು ಸುಸ್ಥಿರ ಉದ್ಯಮಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ದೇಶ ಕಂಡ ಅತ್ಯುತ್ತಮ ದಂತ ವೈದ್ಯಕೀಯ ಕಾಲೇಜುಗಳಲ್ಲಿ ಕೊಡಗು ದಂತ ವೈದ್ಯಕೀಯ ಕಾಲೇಜು ವಿಶೇಷ ಛಾಪು ಮೂಡಿಸಿದೆ. ವೈದ್ಯರು ಸಮಾಜ ಒಳಿತಿಗಾಗಿ ವಿಶೇಷ ಪ್ರಯೋಗಗಳನ್ನು ಸಾದರಪಡಿಸಬೇಕು. ಅಲ್ಲದೆ ವೈದ್ಯಕೀಯ ವಿಭಾಗದಲ್ಲಿ ಕೌಶಲಯುತ ಚಿಕಿತ್ಸಾ ವಿಧಾನಗಳನ್ನು ಅಳವಡಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.
ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ಕೆ.ಸಿ.ಪೊನ್ನಪ್ಪ ಅವರ 2025-26ನೇ ಸಾಲಿನ ಕಾಲೇಜು ವಾರ್ಷಿಕ ವರದಿ ಮಂಡಿಸಿದರು. ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯ ಆಡಳಿತಾತ್ಮಕ ಮುಖ್ಯಸ್ಥರಾದ ಡಾ. ಸುನೀಲ್ ಮುದ್ದಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2025-26ನೇ ಸಾಲಿನ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ರಾಣಿ ಅಯ್ಯಪ್ಪ ಪ್ರತಿಷ್ಠಾನ ಹೆಸರನಲ್ಲಿ ನೀಡುವ ವಾರ್ಷಿಕ ಸುಸ್ಥಿರ ಉದ್ಯಮಿ ಪ್ರಶಸ್ತಿಯನ್ನು ಕೊಡಗಿನ ಜೇನು ಕೃಷಿಯ ಸಾಧಕ ನಡಿಕೇರಿಯಂಡ ಸುಬ್ಬಯ್ಯ ಅವರಿಗೆ ಪ್ರದಾನ ಮಾಡಲಾಯಿತು. ಬಳಿಕ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯ ವಿರಾಜಪೇಟೆಯ ಆಡಳಿತ ಮಂಡಳಿ ಸದಸ್ಯರು, ಕಾಲೇಜು ಉಪನ್ಯಾಸಕರು ಸಿಬ್ಬಂದಿ, ಕಾಲೇಜು ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net