ಪ್ರಕೃತಿ ಮಾತೆಯನ್ನು ಮಕ್ಕಳು ಅರಿಯಲಿ

ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಕುಶಾಲನಗರ ವ್ಯಾಪ್ತಿಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಕುಶಾಲನಗರ ವ್ಯಾಪ್ತಿಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಚಿತ್ರಕಲಾ ನಿವೃತ್ತ ಶಿಕ್ಷಕ ಉ.ರಾ.ನಾಗೇಶ್ ಸಲಹೆ
  • ಕುಶಾಲನಗರದಲ್ಲಿ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ
ಕುಶಾಲನಗರ: ಇಲ್ಲಿನ ಆರ್ಯವೈಶ್ಯ ಮಂಡಳಿಯಿಂದ ವಾಸವಿ ಸಪ್ತಾಹದ ಕೊನೆಯ ದಿನವಾದ ಗುರುವಾರ ಕುಶಾಲನಗರ ವ್ಯಾಪ್ತಿಯ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು.
ಸ್ಪರ್ಧೆಯಲ್ಲಿ 150 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮ ಉದ್ಘಾಟಿಸಿದ ಚಿತ್ರಕಲಾ ನಿವೃತ್ತ ಶಿಕ್ಷಕ ಉ.ರಾ. ನಾಗೇಶ್ ಮಾತನಾಡಿ, ಸಮಸ್ತ ಜೀವಕೋಟಿಗಳನ್ನು ಸಲಹುತ್ತಿರುವ ಪ್ರಕೃತಿ ಮಾತೆಯನ್ನು ಮಕ್ಕಳು ಅರಿಯಬೇಕಿದೆ. ಹಾಗೂ ಅರ್ಥ ಮಾಡಿಕೊಂಡು ಸಂರಕ್ಷಣೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಪರಿಸರ, ಪ್ರಾಣಿ, ಪಕ್ಷಿ, ಗಿಡ ಮರಗಳ ಕುರಿತಾಗಿ ಚಿತ್ರ ಬಿಡಿಸುವ ಸ್ಪರ್ಧೆ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ ಎಂದು ತಿಳಿಸಿದರು.
ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಮಾತನಾಡಿ, ವಾಸವಿ ಸಪ್ತಾಹದ ಅಂಗವಾಗಿ ವಾರವಿಡೀ ನಡೆಸಿದ ವೈವಿಧ್ಯಮಯ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆದಿವೆ. ಸಾರ್ವಜನಿಕರ ಸಹಭಾಗಿತ್ವ ಸ್ಮರಣೀಯ ಎಂದರು.
ಆರ್ಯವೈಶ್ಯ ಮಂಡಳಿ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಸತ್ಯನಾರಾಯಣ ಮಾತನಾಡಿದರು. ವಾಸವಿ ಸಪ್ತಾಹದ ಕಾರ್ಯಕ್ರಮ ಸಂಚಾಲಕ ಎ.ಎಸ್.ಕುಮಾರ್, ಕಾರ್ಯದರ್ಶಿ ಕೆ.ಪ್ರವೀಣ್, ನಿರ್ದೇಶಕ ವೈಶಾಖ್, ರಾಕೇಶ್, ಆರ್ಯವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷೆ ವಾಣಿ ಮಹೇಶ್, ವಾಸವಿ ಯುವತಿ ಮಂಡಳಿ ಅಧ್ಯಕ್ಷೆ ಅನುಷಾ ಅರ್ಜುನ್, ಬಾಲಕಿಯರ ಮಂಡಳಿ ಅಧ್ಯಕ್ಷೆ ಸಾನ್ವಿ, ಬಾಲಕರ ಮಂಡಳಿ ಅಧ್ಯಕ್ಷ ಶಿಶಿರ್ ಇದ್ದರು.
ತೀರ್ಪುಗಾರರಾಗಿ ಡಾ.ಬಿ.ಆರ್.ಶಾಂತಲಕ್ಷ್ಮೀ, ಸುನೀತಾ ಮಹೇಶ್, ಚಿತ್ರಕಲಾ ಶಿಕ್ಷಕ ಬಿಪಿನ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net