ಕಾನೂನು ಹೋರಾಟದ ಎಚ್ಚರಿಕೆ

ಮಡಿಕೇರಿ ನಗರಸಭೆಯ ವಾರ್ಡ್ ನಂ.19ರಲ್ಲಿ ಹಾಲಿ ಇರುವ ಚರಂಡಿಗೆ ಮಣ್ಣು ಜರಿದು ಮುಚ್ಚಿ ಹೋಗಿರುವುದು.
ಮಡಿಕೇರಿ ನಗರಸಭೆಯ ವಾರ್ಡ್ ನಂ.19ರಲ್ಲಿ ಹಾಲಿ ಇರುವ ಚರಂಡಿಗೆ ಮಣ್ಣು ಜರಿದು ಮುಚ್ಚಿ ಹೋಗಿರುವುದು.
Published on
ಮಡಿಕೇರಿ:
ತಮ್ಮ ಮನೆಗೆ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಕಲ್ಪಿಸಿಕೊಡುವಲ್ಲಿ ನಿರ್ಲಕ್ಷö್ಯ ತೋರಿಸುತ್ತಿರುವ ಮಡಿಕೇರಿ ನಗರಸಭೆ ವಿರುದ್ಧ ಕಾನೂನು ಮೊರೆ ಹೋಗಬೇಕಾಗುತ್ತದೆ ಎಂದು ವಾರ್ಡ್ ನಂ.19ರ ಬೂಸ್ಟರ್ ಪಂಪ್ ಹೌಸ್ ಹಿಂಭಾಗದ ನಿವಾಸಿ ಸುಮಿತ್ರಾ ಅಯ್ಯಪ್ಪ ಎಚ್ಚರಿಸಿದ್ದಾರೆ. ಈ ಸಂಬAಧ ಪತ್ರಿಕಾ ಹೇಳಿಕೆ ನೀಡಿರುವ ಅವರು ವಾರ್ಡ್ ನಂ.19ರಲ್ಲಿ ಕೇವಲ 2 ಮನೆಗಳಿಗೆ ಕಾಂಕ್ರಿಟ್ ರಸ್ತೆಯ ವ್ಯವಸ್ಥೆ ಮಾಡಿಕೊಟ್ಟಿದ್ದು, ತಮ್ಮ ಮನೆಯ ರಸ್ತೆಯನ್ನು ಇದರಿಂದ ಕೈ ಬಿಡಲಾಗಿದೆ. ಹಾಲಿ ಇರುವ ಚರಂಡಿಗೆ ಮಣ್ಣು ಜರಿದು ಮುಚ್ಚಿ ಹೋಗಿದೆ. ಇದರಿಂದ ನೀರು ಸರಾಗವಾಗಿ ಹರಿದುಹೋಗಲು ಸಾಧ್ಯವಾಗದ ಸ್ಥಿತಿ ಇದೆ. ಈ ಬಗ್ಗೆ ಹಲವು ಬಾರಿ ಸಂಬAಧಿಸಿದವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಇದೀಗ ಲಿಖಿತ ದೂರನ್ನೂ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿ ಪರಿಶೀಲಿಸುವಂತೆ ನಗರ ಸಭೆ ಅಧ್ಯಕ್ಷರು, ಪೌರಾಯುಕ್ತರಿಗೆ ಮನವಿ ಮಾಡಲಾಗಿದೆ. ಆದರೂ ಇಲ್ಲಿಯ ತನಕ ಸ್ಪಂದನೆ ಸಿಕ್ಕಿಲ್ಲ. ಹೀಗೆಯೇ ನಿರ್ಲಕ್ಷö್ಯ ಮುಂದುವರಿದರೆ ಕಾನೂನು ಹೋರಾಟ ನಡೆಸುವುದು ಅನಿವಾರ್ಯವಾಗಿದ್ದು, ನಗರಸಭೆ ಅಧಿಕಾರಿಗಳು ಇದಕ್ಕೆ ಆಸ್ಪದ ಕೊಡಬಾರದು ಎಂದು ಕೇಳಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net