ಕಾನೂನು ಅರಿವು ಕಾರ್ಯಕ್ರಮ

ಸೋಮವಾರಪೇಟೆ ಸಮೀಪದ ಜ್ಞಾನವಿಕಾಸ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ವಕೀಲರಾದ ಎಚ್.ಆರ್.ಪವಿತ್ರಾ ಮಾತನಾಡಿದರು. ಅಣ್ಣಮ್ಮ, ಕವಿತಾ ಇದ್ದರು.
ಸೋಮವಾರಪೇಟೆ ಸಮೀಪದ ಜ್ಞಾನವಿಕಾಸ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ವಕೀಲರಾದ ಎಚ್.ಆರ್.ಪವಿತ್ರಾ ಮಾತನಾಡಿದರು. ಅಣ್ಣಮ್ಮ, ಕವಿತಾ ಇದ್ದರು.
Published on
ಸೋಮವಾರಪೇಟೆ: ಮಕ್ಕಳ ಮೇಲೆ ನಡೆಯುವ ಯಾವುದೇ ರೀತಿಯ ಲೈಂಗಿಕ ಕಿರುಕುಳದ ಅಪರಾಧಗಳು ಶಿಕ್ಷಾರ್ಹ ಎಂದು ಸರ್ಕಾರಿ ಕಾನೂನು ನೆರವು ಅಭಿರಕ್ಷಕ ಹಾಗೂ ವಕೀಲೆ ಎಚ್.ಆರ್. ಪವಿತ್ರಾ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘ ಮಡಿಕೇರಿ ಸಹಯೋಗದಲ್ಲಿ ತಳಮಟ್ಟದ ಮಾಹಿತಿ ಮತ್ತು ಪಾರದರ್ಶಕತೆ ಉಪಕ್ರಮಕ್ಕಾಗಿ ನ್ಯಾಯ ಜಾಗೃತಿ ಯೋಜನೆ-2025ರ ಅಂಗವಾಗಿ ಸೋಮವಾರಪೇಟೆ ಸಮೀಪದ ಚೌಡ್ಲು ಜ್ಞಾನ ವಿಕಾಸ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ಲೈಂಗಿಕ ಕಿರುಕುಳ ಯಾವುದೇ ಪರಿಸ್ಥಿತಿಯಲ್ಲೂ ಸಹನೀಯವಲ್ಲ. ಶಾಲೆ, ಸಾರ್ವಜನಿಕ ಸ್ಥಳಗಳು ಹಾಗೂ ಆನ್‌ಲೈನ್‌ಗಳಲ್ಲಿ ನಡೆಯುವ ಕಿರುಕುಳದ ವಿರುದ್ಧ ಕಾನೂನು ರಕ್ಷಣೆ ಇದೆ. ವಿದ್ಯಾರ್ಥಿಗಳು ಜಾಗೃತರಾಗಬೇಕು. ಕಾನೂನು ಅರಿವಿನೊಂದಿಗೆ ಸುರಕ್ಷಿತ ಮತ್ತು ಶಿಸ್ತಿನ ನಾಗರಿಕರಾಗಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ತಮ್ಮ ಹಕ್ಕುಗಳನ್ನು ಅರಿತುಕೊಂಡು ಯಾವುದೇ ಅನ್ಯಾಯ ನಡೆದರೆ ಧೈರ್ಯವಾಗಿ ತಿಳಿಸಬೇಕು ಎಂದು ಸಲಹೆ ನೀಡಿದರು. ಪೋಕ್ಸೋ ಕಾಯ್ದೆ ಮಕ್ಕಳ ರಕ್ಷಣೆಗೆ ರೂಪಿಸಲಾದ ಅತ್ಯಂತ ಕಠಿಣ ಕಾಯ್ದೆಯಾಗಿದೆ ಎಂದರು.
ಶಾಲೆಯ ಮುಖ್ಯಶಿಕ್ಷಕಿ ಅಣ್ಣಮ್ಮ ಮಾತನಾಡಿ, ಕಾನೂನು ಅರಿವು ಕಾರ್ಯಕ್ರಮಗಳು ವಿದ್ಯಾರ್ಥಿಗಳ ಜೀವನಕ್ಕೆ ದಾರಿ ತೋರಿಸುವುದರ ಜತೆಗೆ ಭವಿಷ್ಯದಲ್ಲಿ ಅವರು ಜಾಗೃತರಾಗಲು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು. ಹಿರಿಯ ಶಿಕ್ಷಕಿ ಕವಿತಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net