

ಪ್ರಮುಖ ಮುಖ್ಯಾಂಶಗಳು
ಅಡಿಕೆ ಎಲೆಚುಕ್ಕಿ ಮತ್ತು ಹಳದಿ ಎಲೆ ರೋಗ ಸಮಸ್ಯೆಯಿಂದ ನಮ್ಮ ವ್ಯಾಪ್ತಿಯಲ್ಲಿ ಅಡಿಕೆ ತೋಟಗಳು ಬಹುತೇಕ ಹಾಳಾಗಿದೆ. ಅಡಿಕೆ ಕೃಷಿಯಿಂದಲೇ ಬದುಕು ಕಟ್ಟಿಕೊಂಡಿರುವ ಇಲ್ಲಿಯ ಕೃಷಿಕರು ಮುಂದಿನ ದಾರಿ ಕಾಣದೆ ಕಂಗಾಲಾಗಿದ್ದಾರೆ. ಈ ರೋಗಗಳಿಗೆ ವೈಜ್ಞಾನಿಕ ಹತೋಟಿ ಕ್ರಮಗಳು ಇಲ್ಲದಿರುವುದು ಸಂಕಷ್ಟಕ್ಕೆ ಕಾರಣವಾಗಿದೆ. ಹಾಗಾಗಿ ಅಡಿಕೆ ಕೃಷಿಕರು ಅನಿವಾರ್ಯವಾಗಿ ಬದಲಿ ವಾಣಿಜ್ಯ ಬೆಳೆ ಬೆಳೆಯುವತ್ತ್ತ ಗಮನ ಹರಿಸುವಂತಾಗಿದೆ.
ಕಾಫಿ ಬೆಳೆಯುವ ಪ್ರದೇಶಗಳನ್ನು ವಿಸ್ತರಿಸುವತ್ತ ಕಾಫಿ ಮಂಡಳಿ ಯೋಜನೆ ರೂಪಿಸಿದೆ. ಅಡಿಕೆ ಬೆಳೆಯುವ ಹಲವು ಪ್ರದೇಶಗಳು ಕಾಫಿ ಬೆಳೆಯಲು ಕೂಡ ಸೂಕ್ತವಾಗಿದೆ ಎನ್ನುವ ವರದಿಯನ್ನು ಕಾಫಿ ಮಂಡಳಿ ಕೊಟ್ಟಿದೆ. ಕಾಫಿ ಬೇಸಾಯದಲ್ಲಿ ನೀರಿನ ಕೊಯ್ಲೋತ್ತರ ತಂತ್ರಜ್ಞಾನದ ಅಳವಡಿಕೆ ಮತ್ತು ನೀರಾವರಿ ಅಂಶಗಳು ನಿರ್ಣಾಯಕವಾಗಿವೆ. ಈ ಕುರಿತು ಹೆಚ್ಚಿನ ಗಮನ ಹರಿಸಬೇಕಾಗಿದೆ. ಕಾಫಿ ಬೆಳೆ ಬೆಳೆಯಲು ಮುಂದೆ ಬರುವ ರೈತರಿಗೆ ಪ್ರಸ್ತುತ ಯೋಜನೆಗಳಡಿ ಮಾರ್ಗಸೂಚಿಯನ್ವಯ ಸೌಲಭ್ಯಗಳನ್ನು ನೀಡಲಾಗುವುದು.