ಅಡಕೆಗೆ ಎಲೆಚುಕ್ಕಿ, ಹಳದಿರೋಗ ಬಾಧೆ

ಕಾಫಿ ತೋಟದಲ್ಲಿ ಅಂತರಬೆಳೆಯಾಗಿ ಬೆಳೆದಿರುವ ಅಡಕೆ ಗಿಡಗಳಲ್ಲಿ ರೋಗ ಕಾಣಿಸಿಕೊಂಡಿರುವುದು
ಕಾಫಿ ತೋಟದಲ್ಲಿ ಅಂತರಬೆಳೆಯಾಗಿ ಬೆಳೆದಿರುವ ಅಡಕೆ ಗಿಡಗಳಲ್ಲಿ ರೋಗ ಕಾಣಿಸಿಕೊಂಡಿರುವುದು
Published on
ಮಡಿಕೇರಿ:
ಅತ್ಯಧಿಕ ಕಾಫಿ ಬೆಳೆಯುವ ಜಿಲ್ಲೆಯಾಗಿ ಕೊಡಗು ಹೆಸರು ಮಾಡಿದ್ದರೂ ಜಿಲ್ಲೆಯ ದಕ್ಷಿಣ ಕನ್ನಡ, ಕೇರಳ ಗಡಿಭಾಗದ ಊರುಗಳಲ್ಲಿ ಅಡಕೆ ಪ್ರಧಾನ ಬೆಳೆಯಾಗಿ ಬೆಳೆಯಲಾಗುತ್ತಿದೆ. ಹಾಸನ ಮತ್ತು ಮೈಸೂರು ಗಡಿ ಪ್ರದೇಶದ ವ್ಯಾಪ್ತಿಯಲ್ಲೂ ದೊಡ್ಡ ಪ್ರಮಾಣದಲ್ಲಿ ಅಡಕೆ ತೋಟಗಳಿವೆ. ಕಾಫಿ ಮತ್ತು ಅಡಕೆಯನ್ನು ಮಿಶ್ರ ಬೆಳೆಯಾಗಿ ಬೆಳೆದು ಯಶಸ್ಸು ಕಂಡವರೂ ಇದ್ದಾರೆ. ಹೀಗೆ ವಾಣಿಜ್ಯ ಬೆಳೆಯಾಗಿ ಕೃಷಿಕರ ಬದುಕಿಗೆ ಆಶ್ರಯವಾಗಿರುವ ಅಡಕೆಗೆ ಈಗ ಎಲೆಚುಕ್ಕಿ ಮತ್ತು ಹಳದಿ ಎಲೆ ರೋಗ ಕಾಣಿಸಿಕೊಂಡಿರುವುದು ರೈತರನ್ನು ಕಂಗೆಡಿಸಿದೆ.
ತೋಟಗಾರಿಕೆ ಇಲಾಖೆ ಮೂಲಗಳ ಪ್ರಕಾರ ಜಿಲ್ಲೆಯಲ್ಲಿ ಸುಮಾರು 31 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಈ ಪೈಕಿ 850 ಹೆಕ್ಟೇರ್ ಪ್ರದೇಶದಲ್ಲಿ ಅಡಕೆಯಲ್ಲಿ ಎಲೆ ಚುಕ್ಕಿ ರೋಗ ಕಾಣಿಸಿಕೊಂಡಿದೆ. ಸುಮಾರು 2,142 ಹೆಕ್ಟೇರ್ ಪ್ರದೇಶದಲ್ಲಿ ಹಳದಿ ಎಲೆ ರೋಗ ಹರಡಿದೆ. ಇದರಿಂದಾಗಿ ಬೆಳೆಗಾರರಿಗೆ ಅಂದಾಜು 20 ಕೋಟಿ ರೂ.ಗೂ ಅಧಿಕ ನಷ್ಟವಾಗಿರುವುದಾಗಿ ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ.
ಅಡಕೆ ಬೆಳೆಗಾರರನ್ನು ಹೈರಾಣು ಮಾಡುತ್ತಿರುವ ಎಲೆಚುಕ್ಕಿ ಮತ್ತು ಹಳದಿ ಎಲೆ ರೋಗಗಳ ನಿಯಂತ್ರಣಕ್ಕೆ ಸದ್ಯದ ತನಕ ಪರಿಣಾಮಕಾರಿ ವೈಜ್ಞಾನಿಕ ಕ್ರಮಗಳು ಇಲ್ಲ. ಈ ರೋಗಗಳ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ನೇಮಿಸಿರುವ ತಜ್ಞರನ್ನು ಒಳಗೊಂಡಿರುವ ಸಮಿತಿ ರೋಗ ಬಾಧಿತ ಜಿಲ್ಲೆಗಳಿಗೆ ಈಗಾಗಲೇ ಭೇಟಿ ಕೊಟ್ಟಿದೆ. ರೋಗ ಹರಡುವಿಕೆಗೆ ಪ್ರಮುಖ ಕಾರಣಗಳು, ರೋಗದ ತೀವ್ರತೆ ಮತ್ತು ಹಾನಿಯ ಪ್ರಮಾಣದ ಬಗ್ಗೆ ಪರೀಶೀಲನೆ ನಡೆಸಿದೆ. ರೋಗ ಬಾಧಿತ ಸಸ್ಯದ ಭಾಗಗಳನ್ನು ತೆಗೆಯುವುದು ಮತ್ತು ನಾಶಪಡಿಸುವುದು, ಪೋಷಕಾಂಶಗಳ ನಿರ್ವಹಣೆ, ಸಸ್ಯ ಸಂರಕ್ಷಣೆ ಕ್ರಮಗಳ ಅಳವಡಿಕೆ ಹಾಗೂ ತಾಂತ್ರಿಕ ಮಾಹಿತಿ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳ ಬಗ್ಗೆ ಶಿಫಾರಸ್ಸು ಮಾಡಿದೆ.
"

ಅಕಾಲಿಕ ಮಳೆಯಿಂದ ಸೋಮವಾರಪೇಟೆ ತಾಲೂಕಿನಲ್ಲಿ ನಿರಂತರವಾಗಿ ಕಳೆದ ಒಂದು ದಶಕದಿಂದ ಕೃಷಿ ಫಸಲು ಹಾನಿಯಾಗುತ್ತಿದೆ. ಸೂಕ್ತ ಪರಿಹಾರವೂ ಸಿಗುತ್ತಿಲ್ಲ. ಭತ್ತದ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಬಹುಪಾಲು ರೈತರು ಆಂತರಿಕ ಬೆಳೆಯಾಗಿ ಅಡಕೆ ಕೃಷಿ ಮಾಡಿದ್ದಾರೆ. ಈಗ ಫಸಲು ಸಿಗುವ ಸಂದರ್ಭದಲ್ಲಿ ರೋಗಬಾಧೆ ಹೆಚ್ಚಾಗಿ ಅಡಕೆ ಉದುರಿ ಮಣ್ಣು ಸೇರುತ್ತಿದೆ. ಸಂಶೋಧನೆ ಮೂಲಕ ರೋಗ ಹತೋಟಿ ಔಷಧಿಗಳನ್ನು ಕಂಡು ಹಿಡಿಯಬೇಕು. ಜತೆಗೆ ಸರ್ಕಾರ ಪರಿಹಾರ ನೀಡಬೇಕು.

"

ಅದೃಷ್ಟವಶಾತ್ ಈತನಕ ನಮಗೆ ಯಾವುದೇ ರೀತಿಯ ರೋಗಗಳ ಸಮಸ್ಯೆ ಉದ್ಭವಿಸದಿದ್ದರೂ ಅಕ್ಕ ಪಕ್ಕದ ತೋಟದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬಹುಶಃ ನಮ್ಮ ಮರಗಳು ಈಗ ತಾನೇ ಪ್ರಬುದ್ಧತೆಯನ್ನು ಪಡೆಯುತ್ತಿರುವುದರಿಂದ ಈವರೆಗೆ ರೋಗಗಳ ಸಮಸ್ಯೆ ಎದುರಾಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ನಮಗೆ ಮರಗಳ ಆರೋಗ್ಯ ನಿರ್ವಹಣೆ ಕುರಿತು ಮಾಹಿತಿ ಅಗತ್ಯವಿದೆ. ಇದುವರೆಗೆ ಇಲಾಖೆಯ ಯಾವುದೇ ಅಧಿಕಾರಿಗಳು ನಮ್ಮ ತೋಟಕ್ಕೆ ಭೇಟಿ ನೀಡಲಿಲ್ಲ.

"

ಕೊಡಗಿನಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಕೃತಿ ವಿಕೋಪದ ಕಾರಣದಿಂದ ಅಡಕೆ ಇಳುವರಿ ಕುಂಠಿತವಾಗುತ್ತಿದೆ. ಸರ್ಕಾರ ಅಥವಾ ಅಡಕೆ ಮಂಡಳಿಯಿAದ ಎಲೆಚುಕ್ಕಿ ರೋಗ, ಸುಳಿಕೊಳೆ ರೋಗಗಳಿಗೆ ಪರಿಣಾಮಕಾರಿ ಔಷಧಿ ಹಾಗೂ ಸೂಕ್ತ ಮಾರ್ಗದರ್ಶನ ದೊರಕುತ್ತಿಲ್ಲ. ನಾವೇ ಕಂಡುಕೊAಡAತೆ ರಾಸಾಯನಿಕಮುಕ್ತ ನಿರ್ವಹಣೆ ಮತ್ತು ಸಾವಯವ ಕೃಷಿಯಿಂದಾಗಿ ರೋಗಗಳು ತುಸು ತಹಬಂದಿಗೆ ಬರುತ್ತಿವೆ. ರೋಗಗಳ ನಿರ್ವಹಣೆ ಬಗ್ಗೆ ಸರ್ಕಾರ ಮತ್ತು ಸಂಶೋಧನಾ ಸಂಸ್ಥೆಗಳು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಅಡಕೆ ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ.

"

ಇತ್ತೀಚಿಗೆ ಕಾಫಿ ಹಾಗೂ ಇತರೇ ಬೆಳೆಗಳ ನಡುವೆ ಅಡಕೆ ಬೆಳೆ ನಾವು ಸೇರಿದಂತೆ ಅನೇಕರು ಬೆಳೆಯುತ್ತಿದ್ದಾರೆ. ಆದರೆ ಇದಕ್ಕೆ ರೋಗಬಾಧೆ ಹೆಚ್ಚಾಗಿ ಆಗುತ್ತಿದ್ದು, ಯಾವುದೇ ಪರಿಹಾರ ನೀಡಲು ಸರ್ಕಾರ ಮುಂದಾಗುತ್ತಿಲ್ಲ. ಜತೆಗೆ ಈ ರೋಗ ನಿಯಂತ್ರಣ ಮಾಡಲು ಸರಿಯಾದ ವೈಜ್ಞಾನಿಕ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.

"

ಭತ್ತ ಬೆಳೆ ಬೆಳೆಯಲು ತಗುಲುವ ವೆಚ್ಚ ಹಾಗೂ ಇತ್ತೀಚಿಗೆ ಕಾರ್ಮಿಕರ ಕೊರತೆ ಎದುರಾಗಿರುವುದರಿಂದ ಅಡಕೆ ಬೆಳೆಯಿಂದ ಹೆಚ್ಚು ಆದಾಯ ಗಳಿಸಬಹುದು ಎನ್ನುವುದು ರೈತರ ನಂಬಿಕೆ ಆಗಿದೆ. ಆದರೆ ಅದಕ್ಕೆ ಇದೀಗ ಬರುತ್ತಿರುವ ರೋಗವನ್ನು ನಿಯಂತ್ರಣ ಮಾಡುವುದಕ್ಕೆ ಹರ ಸಾಹಸ ಪಡುವಂತಾಗಿದೆ. ಫಸಲಿಗೆ ಬರುವ ಸಂದರ್ಭದಲ್ಲಿ ಈ ರೀತಿ ಸಮಸ್ಯೆ ಎದುರಾಗಿರುವುದು ಅಡಕೆ ಬೆಳೆಗಾರರ ನಿದ್ದೆಗೆಡಿಸಿದೆ. ರೋಗ ನಿಯಂತ್ರಣಕ್ಕೆ ವೈಜ್ಞಾನಿಕ ಮಾರ್ಗ ಕಂಡು ಹಿಡಿಯಬೇಕಿದೆ.

"

ಕೊಡಗು ಮಲೆನಾಡು ಪ್ರದೇಶವಾಗಿದ್ದು, ಇಲ್ಲಿನ ಮಣ್ಣು ಅಧಿಕ ತೇವಾಂಶದಿAದ ಕೂಡಿರುವುದರಿಂದ ಇಲ್ಲಿನ ಮಣ್ಣಿಗೆ ಹೊಂದುವAಥ ನಿಖರವಾದ ಔಷಧಿಗಳ ಅಲಭ್ಯತೆ ಅಡಕೆ ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಮಲೆನಾಡಿನ ಅಧಿಕ ತೇವಾಂಶವಿರುವ ಮಣ್ಣಿಗೆ ಹೊಂದುವAಥ ಶಿಲೀಂದ್ರ ನಾಶಕ ಮತ್ತು ಕೀಟನಾಶಕಗಳನ್ನು ಸರ್ಕಾರ ಸಬ್ಸಿಡಿ ಬೆಲೆಯಲ್ಲಿ ನೀಡಿದರೆ ರೈತರಿಗೆ ಅನುಕೂಲವಾಗಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net