ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವದ ಗುಣ ಅವಶ್ಯ

ಪ್ರಗತಿ ವಿದ್ಯಾಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮ ನಡೆಯಿತು. ಮಾದಂಡ ತಿಮ್ಮಯ್ಯ, ಶಾಲೆಯ ಮುಖ್ಯಸ್ಥೆ ಸುಷ್ಮಾ ತಿಮ್ಮಯ್ಯ, ವಿದ್ಯಾರ್ಥಿ ನಾಯಕರು ಇದ್ದರು.
ಪ್ರಗತಿ ವಿದ್ಯಾಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮ ನಡೆಯಿತು. ಮಾದಂಡ ತಿಮ್ಮಯ್ಯ, ಶಾಲೆಯ ಮುಖ್ಯಸ್ಥೆ ಸುಷ್ಮಾ ತಿಮ್ಮಯ್ಯ, ವಿದ್ಯಾರ್ಥಿ ನಾಯಕರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾದಂಡ ತಿಮ್ಮಯ್ಯ ಅಭಿಮತ
ವಿರಾಜಪೇಟೆ : ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವದ ಗುಣ ಅವಶ್ಯವಾಗಿದೆ. ಪ್ರಾಮಾಣಿಕತೆ, ಶಿಸ್ತು ಮತ್ತು ಸೇವಾ ಮನೋಭಾವದಿಂದ ಜವಾಬ್ದಾರಿ ನಿರ್ವಹಿಸುವ ಮೂಲಕ ಮಾದರಿಯಾಗಬೇಕು ಎಂದು ಪ್ರಗತಿ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಮಾದಂಡ ತಿಮ್ಮಯ್ಯ ಕರೆ ನೀಡಿದರು.
ವಿರಾಜಪೇಟೆಯ ಪ್ರಗತಿ ವಿದ್ಯಾ ಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳಿಂದಲೇ ಆಯ್ಕೆಯಾದ ಹೊಸ ವಿದ್ಯಾರ್ಥಿ ನಾಯಕರಿಗೆ ಅಧಿಕಾರ ಹಸ್ತಾಂತರಿಸಲಾಗಿದೆ. ಇದು ಕೇವಲ ಹುದ್ದೆ ಅಲ್ಲ. ನಾಯಕತ್ವ, ಕರ್ತವ್ಯ ಪ್ರಜ್ಞೆ ಮತ್ತು ಸೇವಾ ಮನೋಭಾವ ಬೆಳೆಸಲು ಸಹಕಾರಿಯಾಗಿದೆ ಎಂದರು.
ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿ ಅರಿತು ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸಬೇಕು. ಶಿಕ್ಷಕರನ್ನು ಸದಾ ಗೌರವದಿಂದ ಕಾಣಬೇಕು. ಉತ್ತಮ ಶಿಕ್ಷಣ ನೀಡಿ ಭವಿಷ್ಯ ರೂಪಿಸುವ ಶಿಕ್ಷಕರೇ ನಿಮ್ಮ ಮೊದಲ ಆದರ್ಶ ವ್ಯಕ್ತಿಗಳು. ಶಾಲೆಯ ಘನತೆ ಹೆಚ್ಚಿಸುವ ರೀತಿಯಲ್ಲಿ ನಡೆದುಕೊಂಡು ಸಹಪಾಠಿಗಳಿಗೆ ಮಾರ್ಗದರ್ಶಕರಾಗಬೇಕು ಎಂದು ಸಲಹೆ ನೀಡಿದರು.
ಪ್ರೌಢಶಾಲೆ ವಿದ್ಯಾರ್ಥಿ ನಾಯಕನಾಗಿ ಮಹಮ್ಮದ್ ಜುಲಾನಿ, ವಿದ್ಯಾರ್ಥಿನಿ ನಾಯಕಿಯಾಗಿ ಎಂ.ಜೆ.ಆರ್ಯಾ, ಉಪ ವಿದ್ಯಾರ್ಥಿ ನಾಯಕನಾಗಿ ಎ.ಎ.ಜೋಯೆಲ್ ಜಾರ್ಜ್, ಉಪ ವಿದ್ಯಾರ್ಥಿನಿ ನಾಯಕಿಯಾಗಿ ವಿ.ಪಿ.ರಿದ್ಹಾ ಫಾತಿಮಾ, ಕ್ರೀಡಾ ನಾಯಕನಾಗಿ ಬಿ.ಕೆ.ಯಶಸ್ ಗೌಡ, ಶಿಸ್ತು ನಾಯಕನಾಗಿ ವಿ.ಎ.ಲಿಕಿತ್, ಸಾಂಸ್ಕೃತಿಕ ನಾಯಕರಾಗಿ ಗಾಯನ್ ಹಾಗೂ ಬಿ.ಎಸ್.ತನಯ್ ಅಧಿಕಾರ ಸ್ವೀಕರಿಸಿದರು.
ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ ನಾಯಕನಾಗಿ ಕೆ.ವಿ.ರಿತ್ವಿಕ್, ವಿದ್ಯಾರ್ಥಿನಿ ನಾಯಕಿಯಾಗಿ ಎಂ.ಎನ್.ರಿಫಾ ಫಾತಿಮಾ, ಕ್ರೀಡಾ ನಾಯಕನಾಗಿ ವಿ.ಎಸ್. ಧನಿಷ್, ಶಿಸ್ತು ನಾಯಕಿಯಾಗಿ ವಿ.ಎಸ್.ತೀಕ್ಷಿತಾ ಹಾಗೂ ಸಾಂಸ್ಕೃತಿಕ ನಾಯಕಿಯಾಗಿ ಎ.ಎ.ಹಾದಿಯಾ ಫಾತಿಮಾ ಪದಗ್ರಹಣ ನಡೆಯಿತು.
ಇದೇ ವೇಳೆ ಶಾಲೆಯ ವಿವಿಧ ತಂಡಗಳಿಗೂ ನೂತನ ನಾಯಕರನ್ನು ಆಯ್ಕೆ ಮಾಡಲಾಯಿತು. ಹಸಿರು ತಂಡದ ನಾಯಕಿಯಾಗಿ ವರ್ಷಿನಿ, ಕ್ರೀಡಾ ನಾಯಕನಾಗಿ ರಕ್ಷನ್, ಶಿಸ್ತು ನಾಯಕಿಯಾಗಿ ಕೆ.ಎಸ್. ಹಾನಾ, ಸಾಂಸ್ಕೃತಿಕ ನಾಯಕಿಯಾಗಿ ಬಿ.ಜೆ ಧೃತಿ ಹಾಗೂ ಪ್ರಾಥಮಿಕ ವಿಭಾಗದಲ್ಲಿ ಟಿ.ಎಸ್. ಅನುರಾಗ್, ಎಸ್.ಆರ್.ಆರ್ಮೀನ್, ಮನ್ಹಾ ಮರಿಯಮ್ ಮತ್ತು ಎಂ.ಎಸ್.ಲಿಕಿನ್ ಪೊನ್ನಣ್ಣ ಅವರಿಗೆ ಜವಾಬ್ದಾರಿ ವಹಿಸಲಾಯಿತು.
ಶಾಲೆಯ ಮುಖ್ಯಸ್ಥೆ ಸುಷ್ಮಾ ತಿಮ್ಮಯ್ಯ ಮತ್ತು ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net