ಅಧ್ಯಕ್ಷರಾಗಿ ವಕೀಲ ಸಂಜೀವ್ ಅವಿರೋಧ ಆಯ್ಕೆ

ಕೆಎನ್‌ಎಸ್‌ಎಸ್ ಗೋಣಿಕೊಪ್ಪ ಘಟಕದ ನೂತನ ಆಡಳಿತ ಮಂಡಳಿಯಲ್ಲಿ ಸಂಜೀವ್, ಶಿವಕೃಷ್ಣ, ರಾಜೀಶ್ ಪಲಕ್ಕಲ್ ಇತರರಿದ್ದರು.
ಕೆಎನ್‌ಎಸ್‌ಎಸ್ ಗೋಣಿಕೊಪ್ಪ ಘಟಕದ ನೂತನ ಆಡಳಿತ ಮಂಡಳಿಯಲ್ಲಿ ಸಂಜೀವ್, ಶಿವಕೃಷ್ಣ, ರಾಜೀಶ್ ಪಲಕ್ಕಲ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧ್ಯಕ್ಷರಾಗಿ ವಕೀಲ ಸಂಜೀವ್ ಅವಿರೋಧ ಆಯ್ಕೆ
ಗೋಣಿಕೊಪ್ಪ: ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ(ಕೆಎನ್‌ಎಸ್‌ಎಸ್) ಗೋಣಿಕೊಪ್ಪ ಘಟಕದ ೨೦೨೬-೨೭ನೇ ಸಾಲಿನ ನೂತನ ಅಧ್ಯಕ್ಷರಾಗಿ ವಕೀಲ ಸಂಜೀವ್ ಅವರು ಅವಿರೋಧವಾಗಿ ಆಯ್ಕೆಯಾದರು.
ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ಇತ್ತೀಚೆಗೆ ನಡೆದ ಸಂಘದ ವಾರ್ಷಿಕ ಸಭೆಯಲ್ಲಿ ನಿರ್ಗಮಿತ ಅಧ್ಯಕ್ಷ ವೇಣುಗೋಪಾಲ್ ಮೆನನ್ ಅಧ್ಯಕ್ಷತೆ ವಹಿಸಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಘದಲ್ಲಿ ನೂರಕ್ಕೂ ಹೆಚ್ಚು ಸದಸ್ಯರಿದ್ದು, ನಾಯರ್ ಸಮುದಾಯದ ಸಾಂಪ್ರದಾಯಿಕ ಉಡುಗೆ-ತೊಡುಗೆ, ಆಚರಣೆಗಳು ಹಾಗೂ ಹಬ್ಬ-ಹರಿದಿನಗಳನ್ನು ಯಶಸ್ವಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಸದಸ್ಯರ ಮಕ್ಕಳನ್ನು ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹಿಸಲು ಸನ್ಮಾನ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಸಂಘದ ಮೂಲಕ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆಎನ್‌ಎಸ್‌ಎಸ್ ಮೈಸೂರು ವಿಭಾಗದ ನಿರ್ದೇಶಕ ಶಿವಕೃಷ್ಣ ಹಾಗೂ ಕಾರ್ಯದರ್ಶಿ ರಾಜೀಶ್ ಪಲಕ್ಕಲ್ ನೂತನ ಕಾರ್ಯಕಾರಿ ಸಮಿತಿಗೆ ಶುಭ ಹಾರೈಸಿದರು. 
ಸಭೆಯಲ್ಲಿ ೨೦೨೬-೨೭ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಉತ್ತಮ್, ಕಾರ್ಯದರ್ಶಿಯಾಗಿ ಅಜಿತ್, ಜಂಟಿ ಕಾರ್ಯದರ್ಶಿಯಾಗಿ ಉಣ್ಣಿಕೃಷ್ಣ, ಖಜಾಂಚಿಯಾಗಿ ಭಾಸ್ಕರನ್, ಸಹ ಖಜಾಂಚಿಯಾಗಿ ವಿಜಯ್ ಕುಮಾರ್ ಹಾಗೂ ಸಲಹೆಗಾರರಾಗಿ ವೇಣುಗೋಪಾಲ್ ಮೆನನ್ ಮತ್ತು ಎನ್.ಜಿ.ಭರತ್ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸದಾಶಿವ ನಾಯರ್, ಸಿ.ಕೆ.ವೇಣುಗೋಪಾಲ್, ರಾಧಾಕೃಷ್ಣನ್, ಸುರೇಶ್ ಬಾಬು, ಶಶಿಕುಮಾರ್, ರಾಮಕೃಷ್ಣ, ಸುಬ್ರಮಣಿ, ವಿನೋದ್ ಕುಮಾರ್, ಚಂದ್ರನ್, ಸರಳ ಮಣಿಲಾಲ್ ಹಾಗೂ ಗೀತಾ ಜಯಪ್ರಕಾಶ್ ಅವರನ್ನು ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಕೆಎನ್‌ಎಸ್‌ಎಸ್ ಮಹಿಳಾ ಸಮಿತಿಯನ್ನೂ ರಚಿಸಲಾಯಿತು. ಅಧ್ಯಕ್ಷರಾಗಿ ಜಯಶ್ರೀ ಸಂಜೀವ್, ಉಪಾಧ್ಯಕ್ಷರಾಗಿ ವಿಮಲಾ ಶ್ರೀಧರನ್, ಕಾರ್ಯದರ್ಶಿಯಾಗಿ ಲಿನೀಷ್ ಉಣ್ಣಿಕೃಷ್ಣ, ಜಂಟಿ ಕಾರ್ಯದರ್ಶಿಯಾಗಿ ವಿನ್ಯಾ ವೇಣುಗೋಪಾಲ್, ಖಜಾಂಚಿಯಾಗಿ ಗೀತಾ ವಿಜಯ್ ಕುಮಾರ್ ಹಾಗೂ ಪದಾಧಿಕಾರಿಗಳಾಗಿ ಕಾರ್ತಿಯಾಯಿನಿ ಭಾಸ್ಕರ್, ಪ್ರಸೀತಾ ಅಜಿತ್, ಮೇಘ ಉತ್ತಮ್, ನಿಶಾ ಚಂದ್ರನ್, ಲೀನಾ ಲೋಹಿಕ್ಷನ್, ಪ್ರಿಯ ಚಂದ್ರನ್, ದೀಪ ಸುರೇಂದ್ರನ್, ಚಂದ್ರವತಿ ರಾಧಾಕೃಷ್ಣನ್, ಜ್ಯೋತಿ ಮೋಹನ್ ಮತ್ತು ಜಯ ಶಶಿಕುಮಾರ್ ಆಯ್ಕೆಯಾದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net