ಎಸ್.ಐ.ಆರ್ ಅಭಿಯಾನಕ್ಕೆ ಚಾಲನೆ

ಎಸ್.ಐ.ಆರ್ ಅಭಿಯಾನದ ಅಂಗವಾಗಿ ಶನಿವಾರ ಮನೆ ಮನೆ ಭೇಟಿ ಕಾರ್ಯಕ್ರಮದಲ್ಲಿ ಕೆ.ಜಿ.ಬೋಪಯ್ಯ ಅವರು ಮನೆಮನೆ ಭೇಟಿ ನೀಡಿ ಮಾಹಿತಿ ಪಡೆದರು. ರವಿ ಮೊಗೇರ, ಬಿ.ಎ.ಹರೀಶ್ ಇದ್ದರು.
ಎಸ್.ಐ.ಆರ್ ಅಭಿಯಾನದ ಅಂಗವಾಗಿ ಶನಿವಾರ ಮನೆ ಮನೆ ಭೇಟಿ ಕಾರ್ಯಕ್ರಮದಲ್ಲಿ ಕೆ.ಜಿ.ಬೋಪಯ್ಯ ಅವರು ಮನೆಮನೆ ಭೇಟಿ ನೀಡಿ ಮಾಹಿತಿ ಪಡೆದರು. ರವಿ ಮೊಗೇರ, ಬಿ.ಎ.ಹರೀಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಸ್.ಐ.ಆರ್ ಅಭಿಯಾನಕ್ಕೆ ಚಾಲನೆ
ಮಡಿಕೇರಿ: ಭಾರತೀಯ ಜನತಾ ಪಾರ್ಟಿಯ ವತಿಯಿಂದ ರಾಜ್ಯಾದ್ಯಂತ ನಡೆಯುತ್ತಿರುವ ಎಸ್.ಐ.ಆರ್ ಅಭಿಯಾನದ ಅಂಗವಾಗಿ ಶನಿವಾರ ಮನೆ ಮನೆ ಭೇಟಿ ಕಾರ್ಯಕ್ರಮ ನಡೆಯಿತು.
ನಗರದ ಬೂತ್ ಸಂಖ್ಯೆ ೨೨೧ಕ್ಕೆ ಭೇಟಿ ನೀಡಿದ ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರು, ಮನೆ ಮನೆಗೆ ತೆರಳಿ ಮತದಾರರೊಂದಿಗೆ ಮಾತನಾಡಿದರು. ಇದುವರೆಗೆ ನಡೆದಿರುವ ಎಸ್.ಐ.ಆರ್ ಕಾರ್ಯದ ಪ್ರಗತಿ ಬಗ್ಗೆ ಮಾಹಿತಿ ಪಡೆದರು.
ಈ ವೇಳೆ ಮಾತನಾಡಿದ ಅವರು, ನೈಜ ಮತದಾರರು ಮತದಾರರ ಪಟ್ಟಿಯಿಂದ ವಂಚಿತರಾಗಬಾರದು. ಎನ್ಯುಮರೇಷನ್ ಫಾರಂ ಇನ್ನೂ ಪಡೆಯದವರು ತಕ್ಷಣವೇ ಬಿ.ಎಲ್.ಒ ಗಳನ್ನು ಸಂಪರ್ಕಿಸಿ ಫಾರಂ ಪಡೆದು ಭರ್ತಿ ಮಾಡಿ ಸಲ್ಲಿಸಬೇಕು ಎಂದು ಕಾರ್ಯಕರ್ತರಿಗೆ ಸೂಚಿಸಿದರು.
ನಂತರ ಅವರು ಸ್ಥಳೀಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಬಿ.ಎಲ್.ಒ ಅವರಿಂದ ಎಸ್.ಐ.ಆರ್ ಕುರಿತಂತೆ ಮಾಹಿತಿ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಬೂತ್ ಮಟ್ಟದ ಬಿ.ಎಲ್.ಒ, ಬಿಜೆಪಿ ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷ ಪಿ.ಎಂ.ರವಿ ಮೊಗೇರ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ.ಹರೀಶ್, ಬಿ.ಎಲ್.ಒ ಗೀತಾ, ಸುಧಾಕರ್ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net