ಷಟಲ್ ಬ್ಯಾಡ್ಮಿಂಟನ್ ಟೂರ್ನಿಗೆ ಚಾಲನೆ

ಷಟಲ್ ಬ್ಯಾಡ್ಮಿಂಟನ್ ಟೂರ್ನಿಗೆ ಅಂತಾರಾಷ್ಟ್ರೀಯ ಹಿರಿಯ ಬ್ಯಾಡ್ಮಿಂಟನ್ ಆಟಗಾರ್ತಿ ಜ್ಯೋತಿ ಸೋಮಯ್ಯ, ಚಾಲನೆ ನೀಡಿದರು. ಬ್ಯಾಡ್ಮಿಂಟನ್ ಹಿರಿಯ ಆಟಗಾರ ಹಾಗೂ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಮೂರ್ತಿ, ಕೈಗಾರಿಕೋದ್ಯಮಿಗಳ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಜೋಷಿ, ಆರ್ಯವೈಶ್ಯ ಮಂಡಳಿ ಕೊಡಗು ಜಿಲ್ಲಾ ಅಧ್ಯಕ್ಷ ಬಿ.ಎಲ್.ಸತ್ಯನಾರಾಯಣ, ಕುಶಾಲನಗರ ಸ್ಥಾನೀಯ ಮಂಡಳಿ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್, ಉಪಾಧ್ಯಕ್ಷ ಬಿ.ಎಲ್.ಅಶೋಕ್‌ಕುಮಾರ್, ಕಾರ್ಯದರ್ಶಿ ಕೆ.ಪ್ರವೀಣ್, ನಿರ್ದೇಶಕರಾದ ಎಸ್.ಎನ್.ನಾಗೇಂದ್ರ, ಕೆ.ಜೆ.ಸತೀಶ್, ನಟರಾಜು, ಸಪ್ತಾಹದ ಯೋಜನಾಧಿಕಾರಿ ಎ.ಎಸ್.ಕುಮಾರ್ ಇತರರಿದ್ದರು.

Published on
ಕುಶಾಲನಗರ: ಇಲ್ಲಿನ ಆರ್ಯವೈಶ್ಯ ಮಂಡಳಿಯ ಕುಲದೇವತೆ ರಥಬೀದಿಯಲ್ಲಿರುವ ಶ್ರೀಕನ್ನಿಕಾಪರಮೇಶ್ವರಿ ದೇವಾಲಯದ ಹನ್ನೆರಡನೇ ವರ್ಷದ ಬ್ರಹ್ಮಕಲಶೋತ್ಸವದ ಅಂಗವಾಗಿ ಸಾರ್ವಜನಿಕರಿಗಾಗಿ ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಈ ನಿಟ್ಟಿನಲ್ಲಿ, ಭಾನುವಾರ ನಗರದ ‘ಜಂಪ್ಸ್ ಬ್ಯಾಡ್ಮಿಂಟನ್’ ಒಳಾಂಗಣ ಕ್ರೀಡಾಂಗಣದಲ್ಲಿ ಸಾರ್ವಜನಿಕರಿಗಾಗಿ ಷಟಲ್ ಬ್ಯಾಡ್ಮಿಂಟನ್ ಟೂರ್ನಿ ಹಮ್ಮಿಕೊಳ್ಳಲಾಗಿತ್ತು.
ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧೆಡೆಗಳಿಂದ 125ಕ್ಕೂ ಹೆಚ್ಚು ಹಿರಿ-ಕಿರಿಯ ಪ್ರಾಯದ ಆಟಗಾರರು ಪಾಲ್ಗೊಂಡಿದ್ದರು.
ಕ್ರೀಡಾಕೂಟಕ್ಕೆ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಹಿರಿಯ ಆಟಗಾರ್ತಿ ಜ್ಯೋತಿ ಸೋಮಯ್ಯ ತಾತಪಂಡ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಆಟಗಾರರು ಫಿಟ್‌ನೆಸ್ ನಿರ್ವಹಣೆಯ ಮೂಲಕ ಉತ್ತಮ ಆರೋಗ್ಯ ಹೊಂದಲು ಬ್ಯಾಡ್ಮಿಂಟನ್ ಅತ್ಯುತ್ತಮ ಆಟವಾಗಿದ್ದು, ಸಾರ್ವಜನಿಕರಿಗೆ ವೈವಿಧ್ಯಮಯವಾದ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಆರ್ಯವೈಶ್ಯ ಮಂಡಳಿ ಮಾಜಿ ಅಧ್ಯಕ್ಷ ರಾಜಗೋಪಾಲ್, ಆರ್ಯವೈಶ್ಯ ಮಹಾಸಭಾ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಹುಣಸೂರು ರಾಕೇಶ್ ಮಾತನಾಡಿದರು.
ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕುಟ್ಟಂಡ ಪ್ರಮೋದ್ ಮುತ್ತಪ್ಪ, ಮಾಜಿ ಅಧ್ಯಕ್ಷ ಬಿ.ಜಿ.ಮಂಜುನಾಥ ರಾವ್, ಬ್ಯಾಡ್ಮಿಂಟನ್ ಹಿರಿಯ ಆಟಗಾರ ಹಾಗೂ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಮೂರ್ತಿ, ಕೈಗಾರಿಕೋದ್ಯಮಿಗಳ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಜೋಷಿ, ಆರ್ಯವೈಶ್ಯ ಮಂಡಳಿ ಕೊಡಗು ಜಿಲ್ಲಾ ಅಧ್ಯಕ್ಷ ಬಿ.ಎಲ್.ಸತ್ಯನಾರಾಯಣ, ಕುಶಾಲನಗರ ಸ್ಥಾನೀಯ ಮಂಡಳಿ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್, ಉಪಾಧ್ಯಕ್ಷ ಬಿ.ಎಲ್.ಅಶೋಕ್ ಕುಮಾರ್, ಕಾರ್ಯದರ್ಶಿ ಕೆ.ಪ್ರವೀಣ್, ನಿರ್ದೇಶಕರಾದ ಎಸ್.ಎನ್.ನಾಗೇಂದ್ರ, ಕೆ.ಜೆ.ಸತೀಶ್, ನಟರಾಜು, ಸಪ್ತಾಹದ ಯೋಜನಾಧಿಕಾರಿ ಎ.ಎಸ್.ಕುಮಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net