ಸಭೆಯಲ್ಲಿ ಕುಶಾಲನಗರ ತಾಲೂಕಿನ ಒಟ್ಟು 12 ನೃತ್ಯ ಶಾಲೆಯ ಮಾಲಿಕರು ಹಾಗೂ ತರಬೇತುದಾರರು ಪಾಲ್ಗೊಂಡಿದ್ದರು. ತಾಲೂಕು ನೃತ್ಯ ಶಿಕ್ಷಕರ ಸಂಘಕ್ಕೆ ಹೊಸ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಟೈಮ್ ಬ್ರೇಕರ್ಸ್ ಡ್ಯಾನ್ಸ್ ಸ್ಟುಡಿಯೋ ನೃತ್ಯ ಸಂಯೋಜಕ ಪ್ರದೀಪ್, ಉಪಾಧ್ಯಕರಾಗಿ ಟೀಮ್ ಡ್ರೀಮ್ ಸ್ಟಾರ್ ನೃತ್ಯ ಸಂಯೋಜಕ ಶರಣ್, ಕಾರ್ಯದರ್ಶಿಯಾಗಿ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿಯ ನೃತ್ಯ ಸಂಯೋಜಕ ಅಕ್ತರ್, ಸಂಚಾಲಕರಾಗಿ ತಾಂಡವA ಡ್ಯಾನ್ಸ್ ಸ್ಟುಡಿಯೋದ ಚಂದನ್, ಖಾಚಾಂಚಿಯಾಗಿ ಕುಂದನ ನೃತ್ಯಾಲಯದ ವಿನುತಾ, ಸಂಘದ ಮುಖ್ಯ ಸದಸ್ಯರಾಗಿ ಡಿ.ಸಿ ಡ್ಯಾನ್ಸ್ ಸ್ಟುಡಿಯೋದ ನಿಸಾರ್ ಮತ್ತು ಸಂಘದ ಇತರೆ ಸದಸ್ಯರುಗಳಾಗಿ ನಟರಾಜ ಸಂಗೀತ ಕಲಾಕೇಂದ್ರದ ಸ್ಥಾಪಕ ವಿದ್ವಾನ್ ಶಂಕರಯ್ಯ, ನಾದಾಂತ ನಾಟ್ಯ ಮಯೂರಿ ನೃತ್ಯ ಸಂಯೋಜಕಿ ಮಂಜು ಭಾರ್ಗವಿ, ಯೂನಿಕ್ ಶಾರದಾ ಕಲಾಕೇಂದ್ರದ ನೃತ್ಯ ಸಂಯೋಜಕರು, ನಾಟ್ಯಾನಿಕೇತನ ನೃತ್ಯ ಸಂಯೋಜಕರು, ಏಂಜಲ್ ವಿಂಗ್ಸ್ ಸ್ಕೂಲ್ ಆಫ್ ಡ್ಯಾನ್ಸ್ ನೃತ್ಯ ಸಂಯೋಜಕರು ಮತ್ತು ನರ್ತನಾಲಯ ನೃತ್ಯ ಸಂಯೋಜಕರುಗಳು ತಾಲೂಕು ಸಂಘಕ್ಕೆ ಆಯ್ಕೆಯಾದರು. ಮುಂದಿನ ದಿನಗಳಲ್ಲಿ ಕುಶಾಲನಗರ ತಾಲೂಕು ನೃತ್ಯ ಶಿಕ್ಷಕರ ಸಂಘದ ಉದ್ಘಾಟನಾ ಕಾರ್ಯಕ್ರಮ ಅದ್ದೂರಿಯಾಗಿ ಏರ್ಪಡಿಸುವ ಬಗ್ಗೆ ಸಂಘದಲ್ಲಿ ಚರ್ಚಿಸಲಾಯಿತು ಮತ್ತು ನೃತ್ಯ ಶಾಲಾ ವಿದ್ಯಾರ್ಥಿಗಳ ಹಲವು ಕಾರ್ಯಕ್ರಮಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.