ವಿವಿಧೋದ್ದೇಶ ಸಭಾಂಗಣ ಉದ್ಘಾಟನೆ

ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ಆವರಣದಲ್ಲಿ ಬಾಂಬೆ ಸ್ಟಾಕ್  ಎಕ್ಸ್‌ಚೇಂಜ್‌ನಿಂದ ನಿರ್ಮಾಣಗೊಂಡ ವಿವಿಧೋದ್ದೇಶ ಸಭಾಂಗಣವನ್ನು ಸಂಸ್ಥೆಯ ಸಿ.ಇ.ಒ. ಸುಂದರ್ ರಾಮನ್ ರಾಮಮೂರ್ತಿ ಉದ್ಘಾಟಿಸಿದರು. ಎಸ್. ಕೆ .ಸತೀಶ್, ಬಸವರಾಜು,  ಕೃಷ್ಣಪ್ಪ, ಎ.ಸಿ. ಮಂಜುನಾಥ, ಕೆ.ಎಸ್. ನಾಗೇಶ್ ಹಾಜರಿದ್ದರು.
ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ಆವರಣದಲ್ಲಿ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಿಂದ ನಿರ್ಮಾಣಗೊಂಡ ವಿವಿಧೋದ್ದೇಶ ಸಭಾಂಗಣವನ್ನು ಸಂಸ್ಥೆಯ ಸಿ.ಇ.ಒ. ಸುಂದರ್ ರಾಮನ್ ರಾಮಮೂರ್ತಿ ಉದ್ಘಾಟಿಸಿದರು. ಎಸ್. ಕೆ .ಸತೀಶ್, ಬಸವರಾಜು, ಕೃಷ್ಣಪ್ಪ, ಎ.ಸಿ. ಮಂಜುನಾಥ, ಕೆ.ಎಸ್. ನಾಗೇಶ್ ಹಾಜರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಕೊಡುಗೆ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ಆವರಣದಲ್ಲಿ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ ಸಿ.ಎಸ್.ಆರ್. ಅನುದಾನದಲ್ಲಿ 27 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ವಿವಿಧೋದ್ದೇಶ ಸಭಾಂಗಣವನ್ನು ಸಿ.ಇ.ಒ. ಸುಂದರ್ ರಾಮನ್ ರಾಮಮೂರ್ತಿ ಉದ್ಘಾಟಿಸಿದರು.
ಕುಶಾಲನಗರ : ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ಆವರಣದಲ್ಲಿ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ ಸಿ.ಎಸ್.ಆರ್. ಅನುದಾನದಲ್ಲಿ 27 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ವಿವಿಧೋದ್ದೇಶ ಸಭಾಂಗಣವನ್ನು ಸಿ.ಇ.ಒ. ಸುಂದರ್ ರಾಮನ್ ರಾಮಮೂರ್ತಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳು ಭಾರತೀಯ ಆಚಾರ, ವಿಚಾರಗಳನ್ನು ಅರಿತು ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ತನಗೆ ಬಂದ ಲಾಭಾಂಶದಲ್ಲಿ ಸಾಮಾಜಿಕ ಸೇವಾಕಾರ್ಯಗಳನ್ನು ಕೈಗೊಳ್ಳುತ್ತಿದೆ. ಸರ್ಕಾರಿ ಶಾಲಾ, ಕಾಲೇಜುಗಳಿಗೆ ಅನುದಾನ ರೂಪದಲ್ಲಿ ನೀಡುವ ಧನ ಸಹಾಯದಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಬೆಂಬಲಿಸಲಾಗುತ್ತಿದೆ. ಈ ಅವಕಾಶ ಕುಶಾಲನಗರ ಶಾಲೆಗೆ ದೊರೆತಿರುವುದು ವಿಶೇಷ ಎಂದರು. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಉಜ್ವಲತೆಯನ್ನು ಕಾಣಲು ಶಿಕ್ಷಣದ ಮೌಲ್ಯಗಳನ್ನು ಅರಿತುಕೊಳ್ಳಬೇಕು. ಶಿಕ್ಷಕರು ಹೇಳುವ ಗುಣಾತ್ಮಕ ಅಂಶಗಳನ್ನು ಗೌರವದಿಂದ ಸ್ವೀಕರಿಸಿ, ಜೀವನಕ್ಕೆ ಅಳವಡಿಸಿಕೊಳ್ಳಬೇಕು ಎಂದರು.
ವಿವಿಧೋದ್ದೇಶ ಸಭಾಂಗಣದ ಯೋಜನೆಗೆ ಶ್ರಮಿಸಿದ ಉದ್ಯಮಿ ಎಸ್. ಕೆ. ಸತೀಶ್ ಮಾತನಾಡಿದರು.
ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಬಸವರಾಜು, ಬಿಇಒ ಕೃಷ್ಣಪ್ಪ, ಶಾಲಾ ಮುಖ್ಯ ಶಿಕ್ಷಕ ಎ.ಸಿ. ಮಂಜುನಾಥ, ಛೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಕೆ.ಎಸ್. ನಾಗೇಶ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಶ್ರುತಿ, ಕಾಲೇಜು ವಿಭಾಗದ ಉಪನ್ಯಾಸಕರು, ಪ್ರೌಢಶಾಲಾ ಶಿಕ್ಷಕರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net