ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಎಂ. ಮೋಟಯ್ಯ ಮಾತನಾಡಿ ನಮ್ಮ ಸಂಸ್ಕೃತಿ ಉಳಿದರೆ ಜನಾಂಗ ಉಳಿಯುತ್ತದೆ. ಜನಾಂಗ ಉಳಿದರೆ ನೆಲ ಉಳಿಯುತ್ತದೆ. ನಮ್ಮ ಆಚಾರ, ವಿಚಾರ, ಪದ್ಧತಿ ಪರಂಪರೆಯನ್ನು ಕಿರಿಯರು ಕಲಿತಾಗ ಮಾತ್ರ ಅದು ಮುಂದಿನ ತಲೆಮಾರಿಗೆ ಹಸ್ತಾಂತರವಾಗಲಿದೆ. ಕೊಡವರ ಎಲ್ಲಾ ಹಬ್ಬಗಳು ನಮ್ಮ ಪ್ರಕೃತಿಗೆ, ಮಣ್ಣಿಗೆ, ಕೃಷಿಗೆ ಸಂಬAಧಪಟ್ಟದಾಗಿದೆ, ಯಾವ ಋತುಗಳಿಗೆ ಯಾವ ಆಹಾರ ಬೇಕು, ಅದನ್ನು ಪ್ರಕೃತಿ ನಮಗೆ ನೀಡುತ್ತದೆ. ಪ್ರಕೃತಿಯಿಂದ ನಾವು ಹೊರತು, ನಮ್ಮಿಂದ ಪ್ರಕೃತಿ ಅಲ್ಲ. ಪ್ರತಿ ಹಬ್ಬಗಳ ಆಚರಣೆ ಸಂದರ್ಭ ಪ್ರಕೃತಿಯನ್ನು ನಾವು ಪೂಜಿಸುತ್ತೇವೆ. ಹಾಗೆಯೇ ಅದನ್ನು ರಕ್ಷಿಸುವ ಜವಾಬ್ದಾರಿ ಸಹ ನಮ್ಮ ಮೇಲಿದೆ ಎಂದು ಹೇಳಿದರು.