ಮುಖ್ಯಮಂತ್ರಿ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರ ಧರ್ಮಪತ್ನಿ ಕಾಂಚನ ಪೊನ್ನಣ್ಣ ಪುಸ್ತಕ ಪತ್ತಾಯವನ್ನು ಉದ್ಘಾಟಿಸಿ ಮಾತನಾಡಿ, ಕೊಡವರ ಪ್ರತಿಯೊಂದು ಆಭರಣಗಳಿಗೆ, ಹಬ್ಬ-ಆಚರಣೆಗಳಿಗೆ, ಪದ್ಧತಿ-ಪರಂಪರೆಗೆ, ಹಾಕಿ ಉತ್ಸವಕ್ಕೆ ತನ್ನದೇ ಆದಂತಹ ಪ್ರಾಮುಖ್ಯತೆಯೊಂದಿಗೆ ಸಾಂಸ್ಕೃತಿಕವಾದ ಗಾಂಭೀರ್ಯವಿದೆ. ಇವೆಲ್ಲವನ್ನು ಜನಾಂಗ ಭಾಂದವರು ಹೆಮ್ಮೆಯಿಂದ ಧರಿಸುವಂತಾಗಬೇಕು, ನಡೆಸಿಕೊಂಡು ಮುನ್ನಡೆಯಬೇಕು. ಅಂತದಲ್ಲಿ ಮಾತ್ರ ನಮ್ಮ ಹಿರಿಯರು ತಂದುಕೊಟ್ಟ ಸಂಸ್ಕೃತಿ ಮುಂದಿನ ಪೀಳಿಗೆಗೆ ಅದೇ ರೀತಿಯ ಘನತೆ-ಗಾಂಭಿರ್ಯದೊಂದಿಗೆ ಹಸ್ತಾಂತರಿಸಲು ಸಾಧ್ಯ ಎಂದರು.